ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೂ ಮುನ್ನ ಉಸ್ತುವಾರಿಗಳ ನೇಮಕ ಪ್ರಕಟ

sadhu srinath

sadhu srinath |

Updated on: Nov 14, 2019 | 10:55 AM

ಬೆಂಗಳೂರು: ಅನರ್ಹರು ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡುತ್ತಿದ್ದಂತೆ ಬಿಜೆಪಿ ಪಾಳೆಯದಲ್ಲಿ ರಣೋತ್ಸಾಹ ಚಿಮ್ಮಿದೆ. ಇಂದು ರಾಜ್ಯದ ಶಾಸಕರ ಬಗ್ಗೆ ಕೋರ್ಟ್ ತೀರ್ಪು ಕೊಟ್ಟಿರುವ ಬಗ್ಗೆ ರಾಜ್ಯ ಬಿಜೆಪಿ ಸ್ವಾಗತಿಸುತ್ತದೆ. ತೀರ್ಪು ಪೂರ್ಣ ಸಮಾಧಾನ ಇಲ್ಲದಿದ್ದರೂ ಚುನಾವಣಾ ಪ್ರಕ್ರಿಯೆ ಚಾಲನೆಯಲ್ಲಿ ಇರೋದ್ರಿಂದ ಅನರ್ಹರಾಗಿರುವುದನ್ನು ಎತ್ತಿ ಹಿಡಿದು, ಚುನಾವಣೆಗೆ ಸ್ಪರ್ಧೆ ಮಾಡಬಾರದು ಎಂಬ ಸ್ಪೀಕರ್ ತೀರ್ಮಾನವನ್ನು ತಳ್ಳಿ ಹಾಕಿದೆ. ಅನರ್ಹ ಶಾಸಕರು ಬೆಂಬಲಿಗರ ಜೊತೆ ನಾಳೆ ಬಿಜೆಪಿ ಸೇರುತ್ತಾರೆ ಎಂದು ಅರವಿಂದ ಲಿಂಬಾವಳಿ ತಿಳಿಸಿದ್ದಾರೆ. ಜೊತೆಗೆ […]

ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೂ ಮುನ್ನ ಉಸ್ತುವಾರಿಗಳ ನೇಮಕ ಪ್ರಕಟ
ಅರವಿಂದ ಲಿಂಬಾವಳಿ (ಸಂಗ್ರಹ ಚಿತ್ರ)

ಬೆಂಗಳೂರು: ಅನರ್ಹರು ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡುತ್ತಿದ್ದಂತೆ ಬಿಜೆಪಿ ಪಾಳೆಯದಲ್ಲಿ ರಣೋತ್ಸಾಹ ಚಿಮ್ಮಿದೆ.

ಇಂದು ರಾಜ್ಯದ ಶಾಸಕರ ಬಗ್ಗೆ ಕೋರ್ಟ್ ತೀರ್ಪು ಕೊಟ್ಟಿರುವ ಬಗ್ಗೆ ರಾಜ್ಯ ಬಿಜೆಪಿ ಸ್ವಾಗತಿಸುತ್ತದೆ. ತೀರ್ಪು ಪೂರ್ಣ ಸಮಾಧಾನ ಇಲ್ಲದಿದ್ದರೂ ಚುನಾವಣಾ ಪ್ರಕ್ರಿಯೆ ಚಾಲನೆಯಲ್ಲಿ ಇರೋದ್ರಿಂದ ಅನರ್ಹರಾಗಿರುವುದನ್ನು ಎತ್ತಿ ಹಿಡಿದು, ಚುನಾವಣೆಗೆ ಸ್ಪರ್ಧೆ ಮಾಡಬಾರದು ಎಂಬ ಸ್ಪೀಕರ್ ತೀರ್ಮಾನವನ್ನು ತಳ್ಳಿ ಹಾಕಿದೆ. ಅನರ್ಹ ಶಾಸಕರು ಬೆಂಬಲಿಗರ ಜೊತೆ ನಾಳೆ ಬಿಜೆಪಿ ಸೇರುತ್ತಾರೆ ಎಂದು ಅರವಿಂದ ಲಿಂಬಾವಳಿ ತಿಳಿಸಿದ್ದಾರೆ. ಜೊತೆಗೆ ಉಪಚುನಾವಣೆಗೆ ಉಸ್ತುವಾರಿಗಳ ಪಟ್ಟಿಯನ್ನು ಪ್ರಕಟ ಮಾಡಿದ್ದಾರೆ.

ತಾಜಾ ಸುದ್ದಿ

ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೂ ಮುನ್ನ ಉಸ್ತುವಾರಿಗಳ ನೇಮಕ ಪ್ರಕಟ: 1.ಅಥಣಿ- ಸಚಿವ ಕೆ.ಎಸ್‌. ಈಶ್ವರಪ್ಪ, ಡಿಸಿಎಂ ಲಕ್ಷ್ಮಣ ಸವದಿ ಮತ್ತು ಸಂಸದ ಅಣ್ಣಾ ಸಾಹೇಬ್ ಜೊಲ್ಲೆ 2.ಕಾಗವಾಡ- ಸಚಿವ ಸಿ.ಸಿ. ಪಾಟೀಲ್, ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಟ, ಶಾಸಕರಾದ ಪಿ.‌ ರಾಜೀವ್ ಮತ್ತು ಅರವಿಂದ ಬೆಲ್ಲದ್ 3.ಗೋಕಾಕ್- ಕೇಂದ್ರ ಸಚಿವ ಸುರೇಶ್ ಅಂಗಡಿ, ಸಚಿವೆ ಶಶಿಕಲಾ ಜೊಲ್ಲೆ, ಶಾಸಕರಾದ ಅಭಯ ಪಾಟೀಲ್, ಎ.ಎಸ್‌.‌ ಪಾಟೀಲ್ ನಡಹಳ್ಳಿ 4.ಯಲ್ಲಾಪುರ- ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಸಂಸದ ಅನಂತಕುಮಾರ್ ಹೆಗಡೆ, ಶಾಸಕರಾದ ಸುನೀಲ್ ಕುಮಾರ್, ಹರೀಶ್ ಪೂಂಜಾ 5.ಹಿರೇಕೆರೂರು- ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮಾಜಿ ಶಾಸಕ ಯು.ಬಿ.‌ ಬಣಕಾರ್ 6.ರಾಣೆಬೆನ್ನೂರು- ಸಚಿವ ಜಗದೀಶ್ ಶೆಟ್ಟರ್, ಸಚಿವ ಪ್ರಭು ಚೌಹಾಣ್, ಸಂಸದ ಜಿ.ಎಂ. ಸಿದ್ದೇಶ್ವರ, ಶಿವಮೊಗ್ಗ ಬಿಜೆಪಿ ಮುಖಂಡ ಗಿರೀಶ್ ಪಟೇಲ್ 7.ವಿಜಯನಗರ- ಡಿಸಿಎಂ ಗೋವಿಂದ ಕಾರಣಜೋಳ, ಎಂಎಲ್ಸಿ ರವಿಕುಮಾರ್, ಸಂಸದ ಸಂಗಣ್ಣ ಕರಡಿ, ಬಿಜೆಪಿ ಪರಾಜಿತ ಅಭ್ಯರ್ಥಿ ಗವಿಯಪ್ಪ, 8.ಚಿಕ್ಕಬಳ್ಳಾಪುರ- ಸಚಿವ ಸಿ.ಟಿ. ರವಿ, ಕೇಂದ್ರ ಸಚಿವ ಡಿ.ವಿ.‌ ಸದಾನಂದ ಗೌಡ, ಸಂಸದ ಪಿ.ಸಿ. ಮೋಹನ್, ಸಂಸದ ಬಿ.ಎನ್. ಬಚ್ಚೇಗೌಡ, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಮಂಜುನಾಥ್ 9.ಕೆ.ಆರ್. ಪುರಂ- ಸಚಿವ ಆರ್.‌ ಅಶೋಕ್, ಕೇಂದ್ರ ಸಚಿವ ಡಿ.ವಿ.‌ ಸದಾನಂದ ಗೌಡ, ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ, ಶಾಸಕ ಸತೀಶ್ ರೆಡ್ಡಿ 10.ಯಶವಂತಪುರ- ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಎಂ. ಕೃಷ್ಣಪ್ಪ, ಮಾಜಿ ಎಂಎಲ್ಸಿಗಳಾದ ಅಶ್ವಥ್ ನಾರಾಯಣ, ಜಗ್ಗೇಶ್ 11.ಮಹಾಲಕ್ಷ್ಮೀ ಲೇಔಟ್- ಸಚಿವ ವಿ.‌ ಸೋಮಣ್ಣ, ಸಚಿವ ಸುರೇಶ್ ಕುಮಾರ್, ಬಿಜೆಪಿ ರಾಜ್ಯ ಖಜಾಂಚಿ ಸುಬ್ಬನರಸಿಂಹ 12.ಶಿವಾಜಿನಗರ- ಬೆಂಗಳೂರು ಮಹಾ ನಗರ ಅಧ್ಯಕ್ಷ ಪಿ.ಎನ್. ಸದಾಶಿವ, ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಎಸ್. ಮುನಿರಾಜು, ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ, ಶಾಸಕ ಎಸ್. ರಘು 13.ಹೊಸಕೋಟೆ- ಡಿಸಿಎಂ ಡಾ. ಅಶ್ವಥ್ ನಾರಾಯಣ, ಸಿಎಂ ರಾಜಕೀಯ ಕಾರ್ಯದರ್ಶ ಎಸ್. ಅರ್. ವಿಶ್ವನಾಥ್, ಎಂಎಲ್ಸಿ ವೈ.ಎ. ನಾರಾಯಣಸ್ವಾಮಿ 14.ಕೆ.ಆರ್. ಪೇಟೆ- ಸಚಿವ ಜೆ.ಸಿ. ಮಾಧುಸ್ವಾಮಿ, ಯುವ ಮೋರ್ಛಾ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ, ಶಾಸಕ ಪ್ರೀತಂ ಗೌಡ 15ಹುಣಸೂರು- ಸಚಿವ ಶ್ರೀರಾಮುಲು, ಮಾಜಿ ಸಚಿವ ವಿಜಯಶಂಕರ್, ಸಂಸದ ಪ್ರತಾಪ್ ಸಿಂಹ, ಶಾಸಕ ಅಪ್ಪಚ್ಚು ರಂಜನ್.

ಸದ್ಯ ಬಿಡುಗಡೆ ಮಾಡಿರುವ ಉಸ್ತುವಾರಿಗಳ ಪಟ್ಟಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ, ಹಿರೇಕೆರೂರು ಕ್ಷೇತ್ರದ ಪರಾಜಿತ ಅಭ್ಯರ್ಥಿ ಯು.ಬಿ. ಬಣಕಾರ್, ವಿಜಯನಗರ ಕ್ಷೇತ್ರದ ಪರಾಜಿತ ಅಭ್ಯರ್ಥಿ ಗವಿಯಪ್ಪ, ಸಿಎಂ ಪುತ್ರ ವಿಜಯೇಂದ್ರಗೆ ಸ್ಥಾನ ಸಿಕ್ಕಿದೆ. ಶಿವಾಜಿನಗರ ಕ್ಷೇತ್ರದ ಉಸ್ತುವಾರಿ ಪಟ್ಟಿಯಲ್ಲಿ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹೆಸರು ಇಲ್ಲದ ಕಾರಣ ರೋಷನ್ ಬೇಗ್ ಗೆ ಟಿಕೆಟ್ ನಿರಾಕರಣೆಯಾದಲ್ಲಿ ಕಟ್ಟಾಗೆ ಅದೃಷ್ಟ ಹೊಡೆಯುವ ಸಾಧ್ಯತೆ ಇದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada