ಚಿತ್ರದುರ್ಗ: ಗ್ರಾಮೀಣ ಭಾಗದಲ್ಲಿ ವರ್ಷಕ್ಕೊಮ್ಮೆ ಜಾತ್ರೆ ಉತ್ಸವಗಳು ನಡೆಯುವುದು, ಊರ ಉತ್ಸವಕ್ಕಾಗಿ ತೋರಣ ಕಟ್ಟಿ ಸಿಂಗಾರ ಮಾಡುವುದು ಸಹಜ. ಆದ್ರೆ, ಆ ಗ್ರಾಮದಲ್ಲಿ ಮಾತ್ರ ಜಾತ್ರೆಯ ದಿನ ಊರಿನಲ್ಲಿ ಜನರೇ ಇರೋದಿಲ್ಲ. ಇಡೀ ಊರೇ ಬೀಕೋ ಅಂತಿರುತ್ತೆ. ಅಷ್ಟಕ್ಕೂ ಏನಿದು ವಿಶಿಷ್ಟ ಆಚರಣೆ ಅನ್ನೋದು ಇಲ್ಲಿದೆ. ಒಂದೇ ಒಂದು ಮನೆ ಬಾಗಿಲು ತೆರೆದಿಲ್ಲ. ಇಡೀ ಊರಿನಲ್ಲಿ ಒಬ್ಬೇ ಒಬ್ರು ಕಣ್ಣಿಗೆ ಕಾಣ್ತಿಲ್ಲ. ಪ್ರತೀ ಮನೆಗೂ ಬೀಗ ಹಾಕಿದ್ರೆ, ಊರ ಸುತ್ತಾ ಬೇಲಿ ಹಾಕಿದ್ದಾರೆ.
ಗಮನ ಸೆಳೆಯುತ್ತಿದೆ ಕೋಟೆನಾಡಿನ ‘ಹೊರಬೀಡು’
ಸೂರ್ಯಾಸ್ತದವರೆಗೆ ಜಮೀನುಗಳಲ್ಲೇ ಕಾಲ ಕಳೆಯುತ್ತಾರೆ:
ಇನ್ನು ಬೆಳಗ್ಗೆ ಸೂರ್ಯೋದಯದ ವೇಳೆಗೆ ಊರು ತೊರೆದವರು ಸಂಜೆ ಸೂರ್ಯಾಸ್ತದವರೆಗೆ ತೋಟ ಜಮೀನುಗಳಲ್ಲೇ ಕಾಲ ಕಳೆಯುತ್ತಾರೆ. ಈ ವೇಳೆ ತಮ್ಮಿಷ್ಟದ ತಿಂಡಿ ತಿನಿಸುಗಳನ್ನು ತಯಾರಿಸಿ ಕುಟುಂಬದೊಂದಿಗೆ ಊಟ ಮಾಡಿ ಖುಷಿ ಪಡ್ತಾರೆ. ಸಂಜೆ ವೇಳೆಗೆ ಗೋಮಾತೆಯೊಂದಿಗೆ ಗ್ರಾಮ ಪ್ರವೇಶಿಸುತ್ತಾರೆ. ಈ ಆಚರಣೆಯಿಂದ ಗ್ರಾಮಕ್ಕೆ ಒಳಿತಾಗಿ ಮಳೆ ಬೆಳೆ ಸಮೃದ್ಧವಾಗಿ ಆಗುತ್ತೆ ಅನ್ನೋದು ಜನರ ನಂಬಿಕೆ. ಒಟ್ನಲ್ಲಿ ವರ್ಷಕ್ಕೊಮ್ಮೆ ಇಡೀ ಊರ ಜನರೇ ಗ್ರಾಮ ತೊರೆಯೋ ಮೂಲಕ ಹೊರಬೀಡು ಆಚರಣೆ ಮಾಡುತ್ತಾರೆ. ಆಧುನಿಕತೆಯ ನಡುವೆಯೂ ತಮ್ಮ ಸಂಪ್ರದಾಯ, ಸಂಸ್ಕೃತಿಯನ್ನ ಉಳಿಸಿಕೊಂಡು ಬರ್ತಿದ್ದಾರೆ.