ನಿತ್ಯ ಪಂಚಾಂಗ: ಶಾರ್ವರಿನಾಮ ಸಂವತ್ಸರ, ಉತ್ತರಾಯಣ, ಮಾಘ ಮಾಸ, ಶಿಶಿರ ಋತು, ಕೃಷ್ಣಪಕ್ಷ, ನವಮಿ ತಿಥಿ, ಭಾನುವಾರ, ಮಾರ್ಚ್ 07, 2021. ಮೂಲ ನಕ್ಷತ್ರ, ರಾಹುಕಾಲ : ಇಂದು ಸಂಜೆ 4.53 ರಿಂದ ರಾತ್ರಿ 6.22. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 6.30. ಸೂರ್ಯಾಸ್ತ: ಸಂಜೆ 6.23.
ತಾ.07-03-2021 ರ ಭಾನುವಾರದ ರಾಶಿ ಭವಿಷ್ಯ
ಮೇಷ: ಗೊಂದಲಕ್ಕೆ ಒಳಗಾಗದೇ ಮುನ್ನುಗ್ಗಿರಿ. ಕೆಲಸದಲ್ಲಿ ಸ್ಪಷ್ಟತೆ ಇರಲಿ. ಅಲ್ಪಧನ ಲಾಭವಾದರೂ ಹಳೆಯ ಸಾಲ ತೀರುವುದು. ಹಿರಿಯರ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಶುಭ ಸಂಖ್ಯೆ: 3
ವೃಷಭ: ಹಿತವಾದ ಮಾತುಗಳು ಗೌರವವನ್ನು ವೃದ್ಧಿಸುವವು. ಆರ್ಥಿಕ ಸಂಕಷ್ಟಗಳು ಎದುರಾಗುವವು. ಸಮಾಧಾನ ಚಿತ್ತದಿಂದ ಕಾರ್ಯ ನಿರ್ವಹಿಸಿರಿ. ಹಿತೈಷಿಗಳಂತೆ ವರ್ತಿಸುವವರಿಂದ ದೂರವಿರಿ. ಶುಭ ಸಂಖ್ಯೆ: 1
ಮಿಥುನ: ಹಿರಿಯರಿಗೆ ಅನಾರೋಗ್ಯ ಸಂಭವ. ಉದ್ಯೋಗ ಸಂಬಂಧಿತ ಸಮಸ್ಯೆಗಳು ಎದುರಾಗುವವು. ಉದ್ಯೋಗ ಬದಲಿ ಮಾಡುವುದು ಸದ್ಯಕ್ಕೆ ಬೇಡ. ಹಣಕಾಸಿನ ವಿಷಯದಲ್ಲಿ ಬಂಧುಗಳು ಸಹಕಾರ ತೋರುವರು. ಶುಭ ಸಂಖ್ಯೆ: 4
ಕರ್ಕ: ಧನಮದಕ್ಕಿಂತ ವಿದ್ಯಾಮದ ಅಪಾಯಕಾರಿ ಆದರಿಂದ ತೊಂದರೆ ಆಗುವ ಸಾಧ್ಯತೆ ಇದೆ ವಿನಯದಿಂದ ವರ್ತಿಸಿರಿ. ಅಕಾಲಿಕ ಒತ್ತಡಗಳಿಂದ ಕಾರ್ಯಹಾನಿ. ಪ್ರೇಮಿಗಳಿಗೆ ಅಪೇಕ್ಷೆಯಂತೆ ಕಂಕಣಬಲ ಕೂಡಿಬರುವುದು. ಶುಭ ಸಂಖ್ಯೆ: 7
ಸಿಂಹ: ವ್ಯಾಪಾರದಲ್ಲಿ ಅಭಿವೃದ್ಧಿಯಾಗುವುದು. ಆರ್ಥಿಕ ಸಂಕಷ್ಟಗಳು ಪರಿಹಾರವಾಗುವವು. ಮಹಿಳೆಯರಿಗೆ ಹೆಚ್ಚಿನ ಉನ್ನತಿ ಕಂಡುಬರುವುದು. ಅನಾವಶ್ಯಕ ಖರ್ಚಿನ ಸಾಧ್ಯತೆ ಇದೆ. ಶುಭ ಸಂಖ್ಯೆ: 9
ಕನ್ಯಾ: ಕ್ಷಮಾಗುಣ ಇರಲಿ, ಪರಸ್ಪರ ದೋಷಾರೋಪ ಮಾಡುವುದರಿಂದ ಕಾರ್ಯಹಾನಿಯ ಸಂಭವವಿದೆ. ವ್ಯವಹಾರದಲ್ಲಿ ಸಮತೋಲನ ಕಾಯ್ದುಕೊಳ್ಳುವಿರಿ. ದೊಡ್ಡಮೊತ್ತದ ಹಣಹೂಡಿಕೆ ಈಗ ಬೇಡ. ಶುಭ ಸಂಖ್ಯೆ: 5
ತುಲಾ: ತಪ್ಪುಗಳನ್ನು ಸಮರ್ಥಿಸುವುದರಿಂದ ಅಪವಾದಕ್ಕೆ ಗುರಿಯಾಗುವ ಸಂಭವವಿದೆ. ಅಧಿಕಾರಿಗಳ ಕಿರಿಕಿರಿಗೆ ಮಣಿಯದೇ ಧೈರ್ಯದಿಂದ ಕೆಲಸ ನಿರ್ವಹಿಸಿರಿ. ಮತ್ತೊಬ್ಬರ ಮೇಲೆ ಅತಿಯಾದ ವಿಶ್ವಾಸ ಪ್ರಗತಿಗೆ ಮಾರಕವಾಗುವ ಲಕ್ಷಣವಿದೆ. ಶುಭ ಸಂಖ್ಯೆ: 2
ವೃಶ್ಚಿಕ: ಪ್ರಾಮಾಣಿಕ ಪ್ರಯತ್ನಕ್ಕೆ ತಕ್ಕಂತೆ ಕೆಲಸಗಳು ಕೈಗೂಡುವವು. ಮಾತು ಕೇಳದ ಜನರಿಂದ ದೂರವಿರಿ. ಲೇವಾದೇವಿ ವ್ಯವಹಾರದಲ್ಲಿ ಅನಿರೀಕ್ಷಿತ ಏರಿಕೆ ಕಂಡುಬರುವುದು. ಆಸ್ತಿ ಖರೀದಿ ಯೋಗವಿದೆ ಪ್ರಯತ್ನಿಸಿ. ಶುಭ ಸಂಖ್ಯೆ: 8
ಧನು: ದೈಹಿಕ ಸಮಸ್ಯೆಗಳು ಉಲ್ಬಣವಾಗಿ ಕೆಲಸಕ್ಕೆ ತೊಂದರೆ ಉಂಟುಮಾಡುವ ಸಾಧ್ಯತೆ ಇದೆ. ಮನೆಯಲ್ಲಿ ಕಾರ್ಯ ವಿರೋಧ ಇರುವುದು. ಹಣಕಾಸಿನ ವಿಷಯದಲ್ಲಿ ಎಚ್ಚರಿಕೆಯ ನಡೆ ಅಗತ್ಯ. ಮಾತಿಗಿಂತ ಕೃತಿಗೆ ಮಹತ್ವ ಕೊಡಿ. ಶುಭ ಸಂಖ್ಯೆ: 3
ಮಕರ: ಲೇವಾದೇವಿ ವ್ಯವಹಾರದಲ್ಲಿ ಅನಿರೀಕ್ಷಿತ ಏರಿಕೆ ಕಂಡುಬರುವುದು. ಸಂಗಡಿಗರು ಸಹಕಾರ ತೋರುವುದರಿಂದ ನಿರಾತಂಕ ಜೀವನ ಇರುವುದು. ಮಾಡುವ ಕಾರ್ಯಗಳಲ್ಲಿ ಯಶಸ್ಸು ದೊರೆಯುವುದು. ಆರ್ಥಿಕ ಸಂಕಷ್ಟ ದೂರಾಗುವುದು. ಶುಭ ಸಂಖ್ಯೆ: 7
ಕುಂಭ: ಅಪೇಕ್ಷಿಸಿದ ಕಾರ್ಯಗಳು ನಿರ್ವಿಘ್ನವಾಗಿ ಪೂರ್ಣಗೊಳ್ಳುವವು ಆಸ್ತಿ ವಿವಾದ ಸೃಜನರ ಅತೃಪ್ತಿ ಮುಂತಾದ ಕಲಹಗಳು ಪರಿಹಾರವಾಗಿ ಸುಖ, ಸಂತೃಪ್ತಿಯ ಯೋಗವಿದೆ. ವಿದ್ಯಾರ್ಥಿಗಳು ಉನ್ನತ ಮಟ್ಟದ ಫಲಿತಾಂಶವನ್ನು ಹೊಂದುವರು. ಸಭಾ ಸಮಾಜ ಕೀರ್ತಿ ಲಭಿಸುವುದು. ಶುಭ ಸಂಖ್ಯೆ: 5
ಮೀನ: ಹೊಸ ಯೋಜನೆಗಳು ಬೇಡ. ಸ್ಥಳಾಂತರ, ವರ್ಗಾವಣೆ, ಮನೆ ಬದಲಿ, ಅಧಿಕಾರಿ ವರ್ಗದವರಿಂದ ಕಿರಿಕಿರಿ ಇರುವುದು. ಕೊಟ್ಟ ಸಾಲ ಮರುಪಾವತಿ ಆಗಲಾರದು, ವ್ಯಾಪರಿಗಳಿಗೆ ವ್ಯವಹಾರಿಕ ತೊಂದರೆ ಆಗುವ ಸಧ್ಯತೆ ಇದೆ. ಶುಭ ಸಂಖ್ಯೆ: 2
ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ. ಸಂಪರ್ಕ ಸಂಖ್ಯೆ: 9972848937
Published On - 6:24 am, Sun, 7 March 21