ಬೊಮ್ಮನಹಳ್ಳಿಯಲ್ಲಿ ಸೋಂಕು ನಿಯಂತ್ರಣ: ಸಚಿವ ಸುರೇಶಕುಮಾರ್ ಯಾಕೆ ಸೈಲೆಂಟ್ ಆದ್ರು?

ಬೆಂಗಳೂರು: ನಗರದಲ್ಲಿ ಕೊರೊನಾ ಅಟ್ಟಹಾಸವನ್ನು ನಿಯಂತ್ರಿಸಲು ಸರ್ಕಕಾರ ವಲಯವಾರು ಸಚಿವರನ್ನು ನೇಮಕ ಮಾಡಿದೆ. ಆ ವಲಯಗಳಲ್ಲಿ ಕೊರೊನಾ ನಿಯಂತ್ರಸಲು ಸಚಿವರು ಪರಿಶ್ರಮಿಸಬೇಕು ಎಂದು ಸೂಚಿಸಲಾಗಿತ್ತು. ಆದರೆ ಬೊಮ್ಮನಹಳ್ಳಿ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಸೈಲೆಂಟ್ ಆಗಿದ್ದಾರೆ. ಒಂದೇ ಒಂದು ಮೀಟಿಂಗ್ ಬಳಿಕ, ಅವರು ತಮ್ಮ ವಲಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಯಾವ ಯೋಜನೆಯನ್ನೂ ಹಾಕಿಯೇ ಇಲ್ಲವಾ? ಎಂಬಂತಾಗಿದೆ. ಯೋಜನೆ ಬಗ್ಗೆ ಕೇಳಿದ್ರೆ ನೆಪ ಹೇಳಿ ಅಧಿಕಾರಿಗಳು ಎಸ್ಕೇಪ್ ಆಗ್ತಿದ್ದಾರೆ. ಉಸ್ತುವಾರಿ ತೆಗೆದುಕೊಂಡ ನಂತ್ರ ಯಾವೆಲ್ಲಾ ಬದಲಾವಣೆ ಆಗಿದೆ ಅನ್ನೋದನ್ನೂ […]

ಬೊಮ್ಮನಹಳ್ಳಿಯಲ್ಲಿ ಸೋಂಕು ನಿಯಂತ್ರಣ: ಸಚಿವ ಸುರೇಶಕುಮಾರ್ ಯಾಕೆ ಸೈಲೆಂಟ್ ಆದ್ರು?

Updated on: Jul 21, 2020 | 12:09 PM

ಬೆಂಗಳೂರು: ನಗರದಲ್ಲಿ ಕೊರೊನಾ ಅಟ್ಟಹಾಸವನ್ನು ನಿಯಂತ್ರಿಸಲು ಸರ್ಕಕಾರ ವಲಯವಾರು ಸಚಿವರನ್ನು ನೇಮಕ ಮಾಡಿದೆ. ಆ ವಲಯಗಳಲ್ಲಿ ಕೊರೊನಾ ನಿಯಂತ್ರಸಲು ಸಚಿವರು ಪರಿಶ್ರಮಿಸಬೇಕು ಎಂದು ಸೂಚಿಸಲಾಗಿತ್ತು. ಆದರೆ ಬೊಮ್ಮನಹಳ್ಳಿ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಸೈಲೆಂಟ್ ಆಗಿದ್ದಾರೆ.

ಒಂದೇ ಒಂದು ಮೀಟಿಂಗ್ ಬಳಿಕ, ಅವರು ತಮ್ಮ ವಲಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಯಾವ ಯೋಜನೆಯನ್ನೂ ಹಾಕಿಯೇ ಇಲ್ಲವಾ? ಎಂಬಂತಾಗಿದೆ. ಯೋಜನೆ ಬಗ್ಗೆ ಕೇಳಿದ್ರೆ ನೆಪ ಹೇಳಿ ಅಧಿಕಾರಿಗಳು ಎಸ್ಕೇಪ್ ಆಗ್ತಿದ್ದಾರೆ. ಉಸ್ತುವಾರಿ ತೆಗೆದುಕೊಂಡ ನಂತ್ರ ಯಾವೆಲ್ಲಾ ಬದಲಾವಣೆ ಆಗಿದೆ ಅನ್ನೋದನ್ನೂ ಹೇಳೋಕೆ ಸಚಿವರು ಮುಂದೆ ಬರ್ತಿಲ್ಲ. ಚೀಫ್ ಇಂಜಿನಿಯರ್, ಜಾಯಿಂಟ್ ಕಮಿಷನರ್​ಗಳು ಬೊಮ್ಮನಹಳ್ಳಿ ವಲದ ಬಗ್ಗೆ ಏನನ್ನೂ ಬಿಟ್ಟು ಕೊಡ್ತಿಲ್ಲ.

ಮಾಹಿತಿ ಕೇಳಿದ್ರೆ ಬರಿ ನೆಪ ಹೇಳ್ತಿದ್ದಾರೆ. ಹಾಗಿದ್ದರೆ ಮಾಹಿತಿ ಇಲ್ಲ ಅಂದ್ಮೇಲೆ, ಯೋಜನೆಯೇ ರೂಪುಗೊಂಡಿಲ್ವ? ಬೊಮ್ಮನಳ್ಳಿ ವಲಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿ ಅಳವಡಿಸೇ ಇಲ್ವ? ಉಸ್ತುವಾರಿ ತೆಗೆದುಕೊಂಡ ಸಚಿವರು ಮತ್ತು ತಂಡ ಕಣ್ಣು ಮುಚ್ಚಿ ಕೂತು ಬಿಟ್ಟಿದ್ಯಾ? ಎಂಬ ಪ್ರಶ್ನೆಗಳು ಉದ್ಭವಿಸಿದ್ದು, ಸಚಿವರೇ ಇದಕ್ಕೆ ಉತ್ತರಿಸಬೇಕಿದೆ.

Published On - 12:06 pm, Tue, 21 July 20