ಫೇಸ್​ಬುಕ್​ನಲ್ಲಿ ಸಮಯ ವ್ಯಯಿಸುವುದನ್ನು ಕಡಿಮೆ ಮಾಡುವುದು ಹೇಗೆ?

| Updated By: Digi Tech Desk

Updated on: Feb 09, 2021 | 9:11 AM

ದಿನನಿತ್ಯದ ಜೀವನದಲ್ಲಿ ಹಾಸುಹೊಕ್ಕಾಗಿರುವ Facebook ಫೇಸ್​ಬುಕ್​ನಲ್ಲಿ ಹೆಚ್ಚು ಹೊತ್ತು ಕಳೆಯಬಾರದು ಎಂದು ತೀರ್ಮಾನಿಸಿದರೆ ಅದಕ್ಕೆ ನಿಮಗೆ ಅದೇ ಆ್ಯಪ್ ಸಹಾಯ ಮಾಡುತ್ತದೆ. ಹೇಗೆ ಎಂಬ ವಿವರ ಈ ಬರಹದಲ್ಲಿದೆ.

ಫೇಸ್​ಬುಕ್​ನಲ್ಲಿ ಸಮಯ ವ್ಯಯಿಸುವುದನ್ನು ಕಡಿಮೆ ಮಾಡುವುದು ಹೇಗೆ?
ಫೇಸ್​ಬುಕ್
Follow us on

ಫೇಸ್​ಬುಕ್ Facebook ಆ್ಯಪ್ ತೆರೆದು ಸ್ಕ್ರಾಲ್ ಮಾಡುತ್ತಾ ಹೋದರೆ ಸಮಯ ಹೇಗೆ ಕಳೆದು ಹೋಗುತ್ತದೆ ಎಂಬುದೇ ಗೊತ್ತಾಗಲ್ಲ. ವಿಡಿಯೊ, ಫೋಟೊ, ಬರಹಗಳನ್ನು ನೋಡುತ್ತಾ, ಇಷ್ಟವಾದರೆ ಲೈಕ್ ಒತ್ತಿ ಸಮಯ ಇದ್ದರೆ ಕಾಮೆಂಟ್ ಮಾಡಿ, ಚರ್ಚಿಸಿ ಮುಂದೆ ಹೋಗುತ್ತೇವೆ. ಹೀಗೆ ದಿನನಿತ್ಯದ ಜೀವನದಲ್ಲಿ ಹಾಸುಹೊಕ್ಕಾಗಿರುವ ಫೇಸ್​ಬುಕ್​ನಲ್ಲಿ ಹೆಚ್ಚು ಹೊತ್ತು ಕಳೆಯಬಾರದು ಎಂದು ತೀರ್ಮಾನಿಸಿದರೆ ಅದಕ್ಕೆ ಫೇಸ್​ಬುಕ್ ಕೂಡಾ ನಿಮಗೆ ಸಹಾಯ ಮಾಡುತ್ತದೆ. ಅದನ್ನು ಬಳಸಿಕೊಳ್ಳುವುದು ಹೇಗೆ ಎಂಬ ಮಾಹಿತಿ ಈ ಬಾರಿಯ Tv9 Digital How To ಅಂಕಣದಲ್ಲಿ ಲಭ್ಯ.

ಸಮಯದ ಮೇಲೆ ಇರಲಿ ನಿಯಂತ್ರಣ

* ಫೇಸ್​ಬುಕ್​ನಲ್ಲಿ ದಿನಾ ಒಂದು ಗಂಟೆ ಮಾತ್ರ ವ್ಯಯಿಸುತ್ತೇನೆ ಎಂದು ನೀವು ನಿರ್ಧರಿಸಿದ್ದರೆ ಅದಕ್ಕೆ ಬದ್ಧವಾಗಿರಿ.
* ನಿಮ್ಮ ಫೇಸ್​ಬುಕ್ ಖಾತೆಗೆ ಲಾಗಿನ್ ಆಗಿ ಸೆಟ್ಟಿಂಗ್ಸ್ ಆ್ಯಂಡ್ ಪ್ರೈವಸಿ ಕ್ಲಿಕ್ ಮಾಡಿ
* ಯುವರ್ ಟೈಮ್ ಆನ್ ಫೇಸ್​ಬುಕ್ ಆಪ್ಶನ್ ಕ್ಲಿಕ್ ಮಾಡಿ
* ಅಲ್ಲಿ See Your Time ಕ್ಲಿಕ್ ಮಾಡಿದರೆ ನೀವು ಫೇಸ್​ಬುಕ್​ನಲ್ಲಿ ಎಷ್ಟು ಹೊತ್ತು ಕಳೆಯುತ್ತಿದ್ದೀರಿ ಎಂಬುದರ ಲೆಕ್ಕ ಸಿಗುತ್ತದೆ.
* Manage your Time ಎಂಬ ಆಯ್ಕೆ ಕ್ಲಿಕ್ ಮಾಡಿದರೆ ಅಲ್ಲಿ Daily Time Reminder ಎಂಬ ಆಪ್ಶನ್ ಇದೆ. ಅಲ್ಲಿ ಕ್ಲಿಕ್ ಮಾಡಿ
* ನೀವು ಎಷ್ಟು ಸಮಯ ಫೇಸ್​ಬುಕ್​ನಲ್ಲಿ ವ್ಯಯಿಸಲು ಇಚ್ಛಿಸುತ್ತೀರಿ ಎಂಬುದನ್ನು ನಮೂದಿಸಿ. ಒಂದು ವೇಳೆ ನೀವು ದಿನದಲ್ಲಿ
* ಕೇವಲ 1 ಗಂಟೆ ಮಾತ್ರ ಫೇಸ್ ಬುಕ್ ನಲ್ಲಿ ವ್ಯಯಿಸಲು ಇಚ್ಛಿಸುವುದಾದರೆ ಒಂದು ಗಂಟೆ ಎಂದು ಸೆಟ್ ಮಾಡಿಡಿ.
* ನೀವು ಒಂದು ಗಂಟೆ ಕಾಲ ಫೇಸ್ ಬುಕ್ ನಲ್ಲಿ ವ್ಯಯಿಸಿದರೆ ಫೇಸ್ ಬುಕ್ ನಿಮಗೆ ರಿಮೈಂಡರ್ ತೋರಿಸುತ್ತದೆ.

Get More From Your Time

ಈ ಆಯ್ಕೆಯಲ್ಲಿ ನಿಮ್ಮ ನ್ಯೂಸ್ ಫೀಡ್ ಆದ್ಯತೆಗಳನ್ನು ನಿರ್ವಹಿಸಬಹುದು. ನೀವು ಫೇವರಿಟ್ ಮಾಡಿದ ವ್ಯಕ್ತಿಗಳ ಎಲ್ಲ ಅಪ್ ಡೇಟ್​ಗಳು ಆದ್ಯತೆ ಮೇರೆಗೆ ನಿಮ್ಮ ವಾಲ್​ನಲ್ಲಿ ಕಾಣಿಸುತ್ತಿರುತ್ತವೆ. ಯಾರ ಫೇಸ್​ಬುಕ್ ಬರಹ ನಿಮ್ಮ ವಾಲ್ ಮೇಲೆ ಕಾಣುತ್ತಿರಬೇಕು, ಯಾರದ್ದು ಬೇಡ ಎಂಬುದನ್ನು ಈ ಆಪ್ಶನ್​ನಲ್ಲಿ ನೀವು ನಿಭಾಯಿಸಬಹುದು.

Control Your Notification

ಫೇಸ್​ಬುಕ್ ಗೆಳೆಯರ ಹುಟ್ಟುಹಬ್ಬ , ಟ್ಯಾಗ್ ಮಾಡಿದ ಪೋಸ್ಟ್ ಅಥವಾ ಫ್ರೆಂಡ್ ರಿಕ್ವೆಸ್ಟ್ ಯಾವ ನೋಟಿಫಿಕೇಷನ್ ಇರಲಿ ಯಾವುದು ನಿಮಗೆ ಬರಬೇಕು, ಯಾವುದು ಬೇಡ ಎಂಬುದನ್ನು ಇಲ್ಲಿ ನಿಯಂತ್ರಿಸಬಹುದು.

Published On - 9:48 pm, Fri, 5 February 21