
ಬೆಂಗಳೂರು: ಹೇಳಿಕೇಳಿ BMTC ಬಸ್ ಅನ್ನೋದು ಸಾರ್ವಜನಿಕ ಸಾರಿಗೆ ವ್ಯವಸ್ಥೆ. ಜನವೋ ಜನ. ಅದರಲ್ಲೂ ಕೊರೊನಾ ಕಾಲದಲ್ಲಿ ಅದರಲ್ಲಿ ಪ್ರಯಾಣಿಸಬೇಕು ಅಂದ್ರೆ ತುಸು ಜಾಗ್ರತೆ ವಹಿಸುವುದು ಅತ್ಯಗತ್ಯ-ಅನಿವಾರ್ಯ. ಹಾಗಾಗಿಯೇ ಈ ಕೊರೊನಾ ಕಾಲದಲ್ಲಿ BMTC ಬಸ್ ಹತ್ತುವ ಮುನ್ನ ನೀವು ಸಾಕಷ್ಟು ಜಾಗ್ರತೆ ವಹಿಸಲೇಬೇಕು! ಅಷ್ಟೇ ಅಲ್ಲ, ಈಗ ಖುದ್ದು BMTCಯೇ ನಿಯಮವೊಂದನ್ನು ಕಡ್ಡಾಯಗೊಳಿಸಿದೆ.
ಬಸ್ ಸಂಚರಿಸೋ ವೇಳೆ ಮಾಸ್ಕ್ ತೆಗೆಯೋ ಹಾಗಿಲ್ಲ
ಮಾಸ್ಕ್ ಧರಿಸದವರಿಗೆ ಸಿಬ್ಬಂದಿ 100 ರೂಪಾಯಿ ದಂಡ ವಿಧಿಸುತ್ತಿದ್ದಾರೆ. ಟಿಕೆಟ್ ತನಿಖಾಧಿಕಾರಿಯಿಂದ ಮಾಸ್ಕ್ ದಂಡ ವಸೂಲಿ ಮಾಡಲಾಗುತ್ತಿದೆ. ಅಲ್ಲಿಗೆ ಮಾಸ್ಕ್ ಹಾಕದಿದ್ರೆ ಬಿಬಿಎಂಪಿ ಮಾರ್ಷಲ್ಸ್, ಪೊಲೀಸ್ ಮಾತ್ರ ಅಲ್ಲ, ಬಸ್ ಟಿಕೆಟ್ ಚೆಕ್ಕಿಂಗ್ ಇನ್ಸ್ಪೆಕ್ಟರ್ಗಳೂ ಸಹ ಫೈನ್ ಹಾಕ್ತಾರೆ ಹುಷಾರ್.
Published On - 12:09 pm, Mon, 2 November 20