ಟಿವಿ9ನಲ್ಲಿ ಆ ಅಕ್ರಮ ಪ್ರಸಾರವಾಗ್ತಿದ್ದಂತೆ ಅವರೇಕೆ ಪರಾರಿಯಾದರು ಗೊತ್ತಾ?

|

Updated on: Aug 01, 2020 | 2:49 PM

ನೆಲಮಂಗಲ: ಬಾಣಸವಾಡಿ ಗೋಮಾಳ ಜಮೀನಿನಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮಣ್ಣು ದಂಧೆ ವಿಚಾರವನ್ನು ಟಿವಿ9ನಲ್ಲಿ ಪ್ರಸಾರ ಮಾಡುತ್ತಿದ್ದಂತೆ ಸ್ಥಳೀಯ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಪರಿಣಾಮ ಅಕ್ರಮ ಮಣ್ಣು ದಂಧೆಕೊರರು ಸತ್ತೆನೋ ಬಿದ್ದೆನೋ ಅಂತಾ ಜೆಸಿಬಿ, ಟಿಪ್ಪರ್‌ಗಳ ಸಮೇತ ಓಡಿ ಹೊಗಿದ್ದಾರೆ. ಹೌದು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಬಾಣಸವಾಡಿ ಗ್ರಾಮದ ಗೋಮಾಳ ಜಮೀನಿನಲ್ಲಿ ಗುತ್ತಿಗೆದಾರರೊಬ್ಬರಿಂದ ಬೃಹತ್ ಮಟ್ಟದಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ದಂಧೆ ನಡೆಯುತ್ತಿತ್ತು. ಈ ಬಗ್ಗೆ ಗೊತ್ತಿದ್ರೂ ತಾಲೂಕು ಆಡಳಿತ ಏನು ಕ್ರಮ ಕೈಗೊಂಡಿರಲಿಲ್ಲ. ಅಷ್ಟೇ ಅಲ್ಲ […]

ಟಿವಿ9ನಲ್ಲಿ ಆ ಅಕ್ರಮ ಪ್ರಸಾರವಾಗ್ತಿದ್ದಂತೆ ಅವರೇಕೆ ಪರಾರಿಯಾದರು ಗೊತ್ತಾ?
Follow us on

ನೆಲಮಂಗಲ: ಬಾಣಸವಾಡಿ ಗೋಮಾಳ ಜಮೀನಿನಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮಣ್ಣು ದಂಧೆ ವಿಚಾರವನ್ನು ಟಿವಿ9ನಲ್ಲಿ ಪ್ರಸಾರ ಮಾಡುತ್ತಿದ್ದಂತೆ ಸ್ಥಳೀಯ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಪರಿಣಾಮ ಅಕ್ರಮ ಮಣ್ಣು ದಂಧೆಕೊರರು ಸತ್ತೆನೋ ಬಿದ್ದೆನೋ ಅಂತಾ ಜೆಸಿಬಿ, ಟಿಪ್ಪರ್‌ಗಳ ಸಮೇತ ಓಡಿ ಹೊಗಿದ್ದಾರೆ.

ಹೌದು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಬಾಣಸವಾಡಿ ಗ್ರಾಮದ ಗೋಮಾಳ ಜಮೀನಿನಲ್ಲಿ ಗುತ್ತಿಗೆದಾರರೊಬ್ಬರಿಂದ ಬೃಹತ್ ಮಟ್ಟದಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ದಂಧೆ ನಡೆಯುತ್ತಿತ್ತು. ಈ ಬಗ್ಗೆ ಗೊತ್ತಿದ್ರೂ ತಾಲೂಕು ಆಡಳಿತ ಏನು ಕ್ರಮ ಕೈಗೊಂಡಿರಲಿಲ್ಲ. ಅಷ್ಟೇ ಅಲ್ಲ ಗ್ರಾಮಾಂತರ ಪೊಲೀಸರು ಗೊತ್ತಿದ್ರೂ ಗೊತ್ತಿಲ್ಲದಂತೆ ವರ್ತಿಸುತ್ತಿದ್ದರು.

ಈ ಬಗ್ಗೆ ಟಿವಿ9 ವರದಿ ಪ್ರಸಾರ ಮಾಡುತ್ತಿದ್ದಂತೆ ಸ್ಥಳೀಯ ಆಡಳಿತ ಮತ್ತು ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ತಕ್ಷಣನೆ ಪೊಲೀಸರ ಅಕ್ರಮ ಮಣ್ಣು ದಂಧೆ ನಡೆಯುತ್ತಿದ್ದ ಸ್ಥಳಕ್ಕೆ ದಾವಿಸಿದ್ದಾರೆ. ಪರಿಣಾಮ ಮಣ್ಣು ದಂಧೆಕೋರರು ಅಲ್ಲಿಂದ ಪರಾರಿಯಾಗಿದ್ದಾರೆ. ಈ ಸಂಬಂಧ ಈಗ ನೆಲಮಂಗಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

 

 

Published On - 2:40 pm, Sat, 1 August 20