11 ವರ್ಷದಲ್ಲಿ ಶಶಿತರೂರ್ಗೆ ಮೊದಲ ಬಾರಿಗೆ ಪವರ್ ಕಟ್ Shock!
ದೆಹಲಿ: ದೇಶದ ನರನಾಡಿಯ ಮೇಲೆ ಹಿಡಿತ ಸಾಧಿಸುವ ಶಕ್ತಿ ಕೇಂದ್ರ ಅಂದರೆ ಅದು ದೆಹಲಿ. ಅದರಲ್ಲೂ ಲುಟಿಯೆನ್ಸ್ ದೆಹಲಿ (Lutyens Delhi) ಇನ್ನೂ ಹೆಚ್ಚು ಪ್ರತಿಷ್ಠಿತ ಮತ್ತು ಪ್ರಭಾವೀ ಬಡಾವಣೆ. ಪ್ರಧಾನಿ ಮೋದಿಯ ಕಚೇರಿಯಿಂದ ಹಿಡಿದು ವಿವಿಧ ರಾಜಕೀಯ ನಾಯಕರ ಬಂಗಲೆಗಳು ಇದೇ ಭಾಗದಲ್ಲಿ ಇರುವುದು. ಅಂದ ಮೇಲೆ, ಈ ಜಾಗ ಮಹಾಭಾರತದ ಪಾಂಡವರ ರಾಜಧಾನಿ ಇಂದ್ರಪ್ರಸ್ಥದಂತೆ ವೈಭವೋಪೇತವಾಗಿರಲೇ ಬೇಕು. ದಿನದ 24 ಗಂಟೆ ವಾಟರ್ ಮತ್ತು ಕರೆಂಟ್ ಸಪ್ಲೈ ಹೀಗೆ ಹತ್ತು ಹಲವಾರು ಸೌಕರ್ಯಗಳು ಇದ್ದೇ […]
ದೆಹಲಿ: ದೇಶದ ನರನಾಡಿಯ ಮೇಲೆ ಹಿಡಿತ ಸಾಧಿಸುವ ಶಕ್ತಿ ಕೇಂದ್ರ ಅಂದರೆ ಅದು ದೆಹಲಿ. ಅದರಲ್ಲೂ ಲುಟಿಯೆನ್ಸ್ ದೆಹಲಿ (Lutyens Delhi) ಇನ್ನೂ ಹೆಚ್ಚು ಪ್ರತಿಷ್ಠಿತ ಮತ್ತು ಪ್ರಭಾವೀ ಬಡಾವಣೆ. ಪ್ರಧಾನಿ ಮೋದಿಯ ಕಚೇರಿಯಿಂದ ಹಿಡಿದು ವಿವಿಧ ರಾಜಕೀಯ ನಾಯಕರ ಬಂಗಲೆಗಳು ಇದೇ ಭಾಗದಲ್ಲಿ ಇರುವುದು. ಅಂದ ಮೇಲೆ, ಈ ಜಾಗ ಮಹಾಭಾರತದ ಪಾಂಡವರ ರಾಜಧಾನಿ ಇಂದ್ರಪ್ರಸ್ಥದಂತೆ ವೈಭವೋಪೇತವಾಗಿರಲೇ ಬೇಕು. ದಿನದ 24 ಗಂಟೆ ವಾಟರ್ ಮತ್ತು ಕರೆಂಟ್ ಸಪ್ಲೈ ಹೀಗೆ ಹತ್ತು ಹಲವಾರು ಸೌಕರ್ಯಗಳು ಇದ್ದೇ ಇರುತ್ತೆ ಅಂತಾ ನೀವು ಅಂದುಕೊಂಡಿದ್ರೇ ಅದು ಸುಳ್ಳು.
ಹಾಗಂತ ನಾವು ಹೇಳುತ್ತಿಲ್ಲ. ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ನಾಯಕ ಹಾಗೂ ಇದೇ ಲುಟಿಯೆನ್ಸ್ ದೆಹಲಿಯ ನಿವಾಸಿ ಶಶಿ ತರೂರ್ ಸ್ವತಃ ಹಂಚಿಕೊಂಡಿದ್ದಾರೆ. ತಮ್ಮ ಏರಿಯಾದಲ್ಲಿ ನಿನ್ನೆ ಒಂದಲ್ಲ, ಎರಡಲ್ಲ ಬರೋಬ್ಬರಿ ಐದು ಸಲ ಕರೆಂಟ್ ಹೋದ ಬಗ್ಗೆ Tweet ಮಾಡಿದ್ದರು.
I told the PowerMinister once that in my 11 years in Lutyens’Delhi I have not known a single day without a power cut. He confidently replied that would not happen in future. Well, today we have had 5 outages so far this morning. And of course, complaints number is switched off!
— Shashi Tharoor (@ShashiTharoor) July 31, 2020
11 ವರ್ಷದಲ್ಲಿ ಮೊದಲ ಬಾರಿಗೆ ನಾನು ಈ ಹಿಂದೆ ಇಂಧನ ಸಚಿವರನ್ನ ಭೇಟಿಯಾಗಿದ್ದೆ. ಆ ಸಂದರ್ಭದಲ್ಲಿ.. ನಾನು ಲುಟಿಯೆನ್ಸ್ ದೆಹಲಿಯಲ್ಲಿ 11 ವರ್ಷಗಳಿಂದ ವಾಸವಾಗಿದ್ದೇನೆ. ಆದರೆ, ಈವರೆಗೂ ಬಡಾವಣೆಯಲ್ಲಿ ಒಂದು ಬಾರಿಯೂ ಕರೆಂಟ್ ಕಟ್ ಆಗೇ ಇಲ್ಲ ಎಂದು ಹೇಳಿದ್ದೆ. ನನ್ನ ಮಾತು ಕೇಳಿ ಬೀಗಿದ ಸಚಿವರು ಅದು ಹಾಗೆಯೇ ಮುಂದುವರೆಯುವುದು, ಏನೂ ತೊಂದರೆಯಾಗುವುದಿಲ್ಲ ಬಿಡಿ ಎಂದು ಆಶ್ವಾಸನೆ ನೀಡಿದ್ದರು.
ಆದರೆ, ಇಂದು ಬೆಳಗ್ಗೆಯಿಂದ ಐದು ಸಲ ಕರೆಂಟ್ ಹೋಗಿದೆ. ಕಂಪ್ಲೇಂಟ್ ಮಾಡೋಣಾ ಅಂದ್ರೆ ವಿದ್ಯುತ್ ಇಲಾಖೆಯ ಸಹಾಯವಾಣಿ ಸಹ ಸ್ವಿಚ್ ಆಫ್ ಆಗಿದೆ ಎಂದು ತಮ್ಮ ಟ್ವೀಟ್ನಲ್ಲಿ ಶಶಿ ತರೂರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಶಿ ಮಾತಿಗೆ ಪೂರಕವೆಂಬಂತೆ ದೊರಕಿರುವ ಮಾಹಿತಿ ಪ್ರಕಾರ 2011 ರಿಂದ ಈವರೆಗೂ ಲುಟಿಯೆನ್ಸ್ ದೆಹಲಿಯಲ್ಲಿ ಒಮ್ಮೆಯೂ ಕರೆಂಟ್ ಹೋಗೇ ಇಲ್ಲವಂತೆ! ಹೀಗಾಗಿ, ದೇಶದ ಶಕ್ತಿ ಕೇಂದ್ರವಾಗಿರುವ ಲುಟಿಯೆನ್ಸ್ ದೆಹಲಿಯಲ್ಲಿ ಈ ಸಲ ಕರೆಂಟ್ ಹೋಗಿರೋದು ನಮ್ಮ ರಾಜಕೀಯ ನಾಯಕರಿಗೆ ಕಸಿವಿಸಿ ಉಂಟುಮಾಡಿದೆ. ಒಟ್ನಲ್ಲಿ, ಈಗಲಾದ್ರೂ ಕರೆಂಟ್ ಹೋದಾಗ ಜನಸಾಮಾನ್ಯರು ಅನುಭವಿಸುವ ಯಾತನೆ ಹೇಗಿರುತ್ತೆ ಅನ್ನೋ feeling ನಮ್ಮ ನಾಯಕರಿಗೆ ಆಗಿದೆ.
Published On - 2:29 pm, Sat, 1 August 20