AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈತರಿಂದ ಪಡೆದ ಲಂಚ ವಾಪಸ್​ ಕೊಡ್ತೀನಿ ಎಂದ ಸರ್ಕಾರಿ ಅಧಿಕಾರಿ, ಎಲ್ಲಿ?

ಹೈದರಾಬಾದ್​: ಸಾಮಾನ್ಯವಾಗಿ ತಮ್ಮ ಕೆಲಸ ಮಾಡಿಸಿಕೊಳ್ಳಲು ಅಧಿಕಾರಿಗಳ ಒತ್ತಡದಿಂದ ಜನಸಾಮಾನ್ಯರು ಲಂಚ ನೀಡಬೇಕಾದ ಪ್ರಸಂಗ ಎದುರಾಗುವುದು ಖಚಿತ ಎಂಬಷ್ಟು ಸಾಮಾನ್ಯವಾಗಿದೆ. ಆದರೆ, ಜನರ ಹತ್ತಿರ ಪಡೆದ ಲಂಚವನ್ನ ಸರ್ಕಾರಿ ಅಧಿಕಾರಿಯೊಬ್ಬ ವಾಪಸ್​ ಮಾಡೋಕೆ ಲಿಖಿತ ಆಶ್ವಾಸನೆ ನೀಡಿರುವ ಸ್ವಾರಸ್ಯಕರ ಘಟನೆ ತೆಲಂಗಾಣದ ಕೊಮರಮ್​ ಭೀಮ್​ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಜಿಲ್ಲೆಯ ಚಿಂತಲಾ ಮಣೆಪಲ್ಲೆ ಮಂಡಲ್​ ವಿಭಾಗದಲ್ಲಿ ತೆಲಂಗಾಣ ಸರ್ಕಾರವು ರೈತರಿಗೆ ಕೃಷಿಗೆಂದು ಜಮೀನು ಮಂಜೂರು ಮಾಡಿತ್ತು. ಆದರೆ, ನಾಲ್ಕು ವರ್ಷವಾದರೂ ಆ ಜಮೀನು ರೈತರ ಪಾಲಿಗೆ ಬರಲೇ […]

ರೈತರಿಂದ ಪಡೆದ ಲಂಚ ವಾಪಸ್​ ಕೊಡ್ತೀನಿ ಎಂದ  ಸರ್ಕಾರಿ ಅಧಿಕಾರಿ, ಎಲ್ಲಿ?
KUSHAL V
|

Updated on:Aug 01, 2020 | 4:18 PM

Share

ಹೈದರಾಬಾದ್​: ಸಾಮಾನ್ಯವಾಗಿ ತಮ್ಮ ಕೆಲಸ ಮಾಡಿಸಿಕೊಳ್ಳಲು ಅಧಿಕಾರಿಗಳ ಒತ್ತಡದಿಂದ ಜನಸಾಮಾನ್ಯರು ಲಂಚ ನೀಡಬೇಕಾದ ಪ್ರಸಂಗ ಎದುರಾಗುವುದು ಖಚಿತ ಎಂಬಷ್ಟು ಸಾಮಾನ್ಯವಾಗಿದೆ. ಆದರೆ, ಜನರ ಹತ್ತಿರ ಪಡೆದ ಲಂಚವನ್ನ ಸರ್ಕಾರಿ ಅಧಿಕಾರಿಯೊಬ್ಬ ವಾಪಸ್​ ಮಾಡೋಕೆ ಲಿಖಿತ ಆಶ್ವಾಸನೆ ನೀಡಿರುವ ಸ್ವಾರಸ್ಯಕರ ಘಟನೆ ತೆಲಂಗಾಣದ ಕೊಮರಮ್​ ಭೀಮ್​ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಜಿಲ್ಲೆಯ ಚಿಂತಲಾ ಮಣೆಪಲ್ಲೆ ಮಂಡಲ್​ ವಿಭಾಗದಲ್ಲಿ ತೆಲಂಗಾಣ ಸರ್ಕಾರವು ರೈತರಿಗೆ ಕೃಷಿಗೆಂದು ಜಮೀನು ಮಂಜೂರು ಮಾಡಿತ್ತು. ಆದರೆ, ನಾಲ್ಕು ವರ್ಷವಾದರೂ ಆ ಜಮೀನು ರೈತರ ಪಾಲಿಗೆ ಬರಲೇ ಇಲ್ಲ. ಅದಕ್ಕೆ ಕಾರಣ ಸ್ಥಳೀಯ ಅಧಿಕಾರಿಗಳ ಲಂಚಬಾಕತನ. ಹೀಗಾಗಿ, ಈ ಸಲ ಏನೇ ಅದರೂ ಜಮೀನು ಪಡೆಯಲೇಬೇಕು ಎಂಬ ಹಠದಿಂದ ಗ್ರಾಮಸ್ಥರು ಮಂಡಲ್​ ಕಂದಾಯ ಅಧಿಕಾರಿಗೆ ಲಂಚ ನೀಡೋಕೆ ಮುಂದಾದರು. ಕೆಲವರು 40 ಸಾವಿರ ನೀಡಿದರೆ ಮತ್ತೆ ಕೆಲವರು 2 ಕ್ವಿಂಟಾಲ್​ ಈರುಳ್ಳಿ ಸಹ ಲಂಚವಾಗಿ ಕೊಟ್ಟಿದ್ದರಂತೆ. ಹೀಗೆ ಲಂಚ ಕೊಟ್ಟಿದ್ದ ಸುಮಾರು 200 ರೈತರಿಗೆ ಜಮೀನು ಮಂಜೂರು ಮಾಡುವುದಾಗಿ ಆ ಅಧಿಕಾರಿ ಭರವಸೆ ಸಹ ನೀಡಿದ್ದನಂತೆ.

ಗ್ರಾಮಸ್ಥರ ಪ್ರತಿಭಟನೆಗೆ ಮಣಿದ ಅಧಿಕಾರಿ, 2 ಕೋಟಿ ರೂ. ಲಂಚ! ಆದರೆ, ನಿನ್ನೆ ಇದಕ್ಕಿದ್ದಂತೆ ಕಂದಾಯ ಅಧಿಕಾರಿಯನ್ನ ವರ್ಗಾವಣೆ ಮಾಡಲಾಯಿತಂತೆ. ಈ ಸುದ್ದಿ ತಮ್ಮ ಕಿವಿಗೆ ಬೀಳುತ್ತಿದ್ದಂತೆ ಕಚೇರಿಗೆ ಓಡಿ ಬಂದ ಗ್ರಾಮಸ್ಥರು ತಾವು ನೀಡಿದ್ದ ಲಂಚ ವಾಪಸ್​ ಮಾಡೋಕೆ ಡಿಮ್ಯಾಂಡ್​ ಇಟ್ಟಿದ್ದಾರೆ. ಪ್ರತಿಭಟನೆ ಸಹ ಮಾಡಿದ್ದಾರೆ. ಇದಕ್ಕೆ ಮಣಿದ ಆ ಅಧಿಕಾರಿ ಕೊನೆಗೆ ಹಣ ವಾಪಸ್​ ಮಾಡೋದಾಗಿ ಲಿಖಿತ ಆಶ್ವಾಸನೆ ಕೊಟ್ಟಿದ್ದಾನೆ. ಅಂದ ಹಾಗೆ, ಅಧಿಕಾರಿ ಪಡೆದ ಒಟ್ಟು ಲಂಚ ಎಷ್ಟು ಗೊತ್ತಾ? ಬರೋಬ್ಬರಿ 2 ಕೋಟಿ ರೂಪಾಯಿ!

Published On - 4:03 pm, Sat, 1 August 20

Follow Us
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ