ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ಆರಂಭವಾಗಿದ್ದು, ಸಾವಿರಾರು ಭಕ್ತರು ದೇವಿ ಮೂಕಾಂಬಿಕೆಯ ದರ್ಶನ ಪಡೆದುಕೊಳ್ಳುತ್ತಿದ್ದಾರೆ. ದಕ್ಷಿಣ ಭಾರತದ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವು ರಾಜ್ಯದ ಎರಡನೆಯ ಅತೀ ದೊಡ್ಡ ಶ್ರೀಮಂತ ದೇವಾಲಯವಾಗಿದೆ. ಮಧ್ಯಾಹ್ನ 11.50 ಮಿಥುನ ಲಗ್ನದಲ್ಲಿ ರಥಾರೋಹಣ ನಡೆಯಲಿದೆ. ಮುಸಲ್ಮಾನ ವ್ಯಾಪಾರಿಗಳಿಗೆ ವ್ಯಾಪಾರ ನಿಷೇಧಿಸಲಾಗಿದ್ದು, ಕೊಲ್ಲೂರು ಪಂಚಾಯತ್ನಿಂದ ವ್ಯಾಪಾರ ಪರವಾನಿಗೆ ನೀಡಿಲ್ಲ. ದೇವಸ್ಥಾನ ವಠಾರದಲ್ಲಿ ಹಿಂದೂ ವ್ಯಾಪಾರಿಗಳಿಗೆ ಅವಕಾಶ ನೀಡಿದ್ದು, ದೇವಸ್ಥಾನದ ಸುತ್ತಮುತ್ತ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚುವರಿ ಭದ್ರತೆ ನಿಯೋಜನೆ ಮಾಡಲಾಗಿದೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕ ದೇಗುಲ ಬಳಿಯಿರುವ ಹಿಂದೂಗಳ ಅಂಗಡಿಗಳ ಮೇಲೆ ವಿಹೆಚ್‌ಪಿ ( VHP Activists) ಕಾರ್ಯಕರ್ತರು ಕೇಸರಿ ಬಾವುಟ ಅಳವಡಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಭದ್ರತೆಗಾಗಿ ಪೊಲೀಸರ ನಿಯೋಜನೆ ಕೂಡ ಮಾಡಲಾಗಿದೆ. ಜಾತ್ರೆಗೆ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧವಿದಿಸಲಾಗಿದೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸರಿಂದ ತಯಾರಿ ನಡೆಸಿದ್ದು, ಸ್ಥಳದಲ್ಲಿ 60ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳು ನಿಯೋಜನೆಗೊಂಡಿದ್ದಾರೆ.
ಇದನ್ನೂ ಓದಿ:
ಹಿಜಾಬ್ ತೀರ್ಪು ನೀಡಿದ ನ್ಯಾಯಮೂರ್ತಿಗಳಿಗೆ ಬೆದರಿಕೆ ಪ್ರಕರಣ; ಮತ್ತೊಬ್ಬ ಆರೋಪಿಯನ್ನ ವಶಕ್ಕೆ ಪಡೆದ ಪೊಲೀಸರು
Yogi Adityanath: ಇಂದು ಪ್ರಮಾಣವಚನ ಸ್ವೀಕರಿಸಲಿರುವ ಯೋಗಿ; ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ ಭಾಗಿ