ರಾಜ್ಯದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಒಂದಲ್ಲ ಒಂದು ಸುದ್ದಿಗಳು ಭಾರೀ ಸದ್ದು ಮಾಡುತ್ತಿದೆ. ಇತ್ತೀಚೆಗೆ ಶಿಕ್ಷಣ ಕ್ಷೇತ್ರದಲ್ಲಿ ಹಿಜಾಬ್ ವಿಚಾರವು ಭಾರೀ ಸದ್ದು ಮಾಡಿತ್ತು. ಕೇಸರಿ Vs ಹಿಜಾಬ್ ಎಂಬ ಚರ್ಚೆಗಳು ನಡೆದವು, ಸರ್ಕಾರದ ವಲಯದಲ್ಲೂ ಚರ್ಚೆಗೆ ಸಾಕ್ಷಿಯಾಗಿತ್ತು. ಕೊನೆಗೆ ಹೈಕೋರ್ಟ್ ಮೆಟ್ಟಿಲೇರಿತ್ತು. ಅಲ್ಲಿಯು ವಾದ -ವಿವಾದಗಳು ನಡೆದು ಹಿಜಾಬ್ ಶಾಲಾ-ಕಾಲೇಜುಗಳಲ್ಲಿ ಹಾಕುವಂತಿಲ್ಲ ಎಂದು ತೀರ್ಪುನ್ನು ನೀಡಿತ್ತು. ಅದರ ಚರ್ಚೆಗಳು ಅಲ್ಪವಾಗಿ ಕಡಿಮೆಯಾದರೂ, ಇದೀಗ ಹೊಸ ವಿಚಾರವೊಂದು ಚರ್ಚೆಯಲ್ಲಿದೆ, ಹೌದು ರಾಜ್ಯದಲ್ಲಿ ಶೈಕ್ಷಣಿಕ ಪಠ್ಯಕ್ರಮದಲ್ಲಿ ಭಗವದ್ಗೀತೆಯನ್ನು ಭೋದಿಸಬೇಕು ಎಂಬ ಚರ್ಚೆಗಳು ನಡೆಯುತ್ತಿದೆ. ಆದರೆ ಇದೀಗ ಇದಕ್ಕೂ ಪರ – ವಿರೋಧಗಳು ಚರ್ಚೆಯಾಗುತ್ತಿದೆ, ಗುಜರಾತ್ ನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಭಗವದ್ಗೀತೆಯನ್ನು ಭೋಧಿಸಲಾಗುತ್ತಿದೆ ಎಂಬ ಮಾತುಗಳು ಕೇಳಿ ಬಂದಿದೆ. ಅದೇ ರೀತಿಯಲ್ಲಿ ಕರ್ನಾಟಕದಲ್ಲೂ ಭಗವದ್ಗೀತೆಯನ್ನು ಶಾಲಾ – ಕಾಲೇಜುಗಳಲ್ಲಿ ಭೋದಿಸಬೇಕು ಎಂಬ ಚಿಂತನೆಯನ್ನು ಸರ್ಕಾರ ನಡೆಸುತ್ತಿದೆ. ಈ ವಿಚಾರವನ್ನು ಇಟ್ಟುಕೊಂಡು ಟಿವಿ9 ಕನ್ನಡ ಡಿಜಿಟಲ್ ಸಾಮಾಜಿಕ ಜಾಲತಾಣದಲ್ಲಿ ಒಂದು ಸಮೀಕ್ಷೆಯನ್ನು ಮಾಡಿತ್ತು. ಪಠ್ಯಕ್ರಮದಲ್ಲಿ ಭಗವದ್ಗೀತೆ ಬೇಕು ಅಥವಾ ಬೇಡ ಎಂದು, ನಾವು ಕೇಳಿದ ಈ ಪ್ರಶ್ನೆಗೆ ಸಾವಿರಾರು ಜನ ಕಮೆಂಟ್ ಮಾಡಿದ್ದಾರೆ. ಕನ್ನಡ ಮಾಧ್ಯಮ ಲೋಕದಲ್ಲಿ ಶೈಕ್ಷಣಿಕವಾಗಿ ಈ ರೀತಿಯ ಸಮೀಕ್ಷೆ ಇದೇ ಮೊದಲ ಬಾರಿ ಎಂದೆನ್ನಿಸುತ್ತದೆ ಇಷ್ಟು ದೊಡ್ಡದಾಗಿ ಜನರು ಈ ಸಮೀಕ್ಷೆಗೆ ಪ್ರತಿಕ್ರಿಯೆ ನೀಡಿದ್ದು.
ಟಿವಿ9 ಕನ್ನಡ ಡಿಜಿಟಲ್ ಭಗವದ್ಗೀತೆ ಪಠ್ಯಕ್ರಮದಲ್ಲಿ ಬೇಕು ಅಥವಾ ಬೇಡ? ಎಂಬ ಪ್ರಶ್ನೆಗೆ ಸೋಶಿಯಲ್ ಮಿಡಿಯಾದಲ್ಲಿ ಜನರು ಸಖತ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಈ ಪ್ರಶ್ನೆಯನ್ನು ಆಧಾರಿಸಿ ಫೇಸ್ ಬುಕ್, ಯೂಟ್ಯಬೂ, ಇನ್ಸ್ಟಾಗ್ರಾಮ್, ಟ್ವಿಟರ್, ಕೂನಲ್ಲಿ ಸಮೀಕ್ಷೆಯನ್ನು ನಡೆಸಿತ್ತು, ಈ ಸಮೀಕ್ಷೆಯಲ್ಲಿ ವಿಭಿನ್ನ ರೀತಿಯ ಪ್ರತಿಕ್ರಿಯೆ ಬಂದಿದೆ. ಒಂದಿಷ್ಟು ಜನ ಭಗವದ್ಗೀತೆ ಎನ್ನುವುದು ಭಾರತದ ಸಂಸ್ಕೃತಿ ಅದು ಬೇಕೇ ಬೇಕು ಎಂದರೆ, ಇನ್ನೂ ಕೆಲವರು ಅದರ ವಿರೋಧವಾಗಿ ಹೇಳಿದ್ದಾರೆ. ಧರ್ಮದ ವಿಚಾರದಲ್ಲಿ ಶಿಕ್ಷಣವನ್ನು ಹೊಡೆಯಬೇಡಿ ಎಂದು, ಒಂದಿಷ್ಟು ಭಗವದ್ಗೀತೆ ಪಠ್ಯಕ್ರಮದಲ್ಲಿ ಬೇಕು ಎಂದರೆ ಇನ್ನೂ ಕೆಲವರು ಭಗವದ್ಗೀತೆ ಪಠ್ಯಕ್ರಮದಲ್ಲಿ ಬೇಡ ಎಂದು ವೋಟ್ ಮಾಡಿದ್ದಾರೆ.
ಸೋಶಿಯಲ್ ಮಿಡಿಯಾದಲ್ಲಿ ಮಹಾಸಮೀಕ್ಷೆ
ಸಾಮಾಜಿಕ ಜಾಲತಾಣದಲ್ಲಿ ಭಗವದ್ಗೀತೆ ಪಠ್ಯಕ್ರಮದಲ್ಲಿ ಬೇಕು ಅಥವಾ ಬೇಡ? ಎಂದು ಟಿವಿ9 ಡಿಜಿಟಲ್ ಮಾಡಿದ ಸಮೀಕ್ಷೆಗೆ ಸಾವಿರರೂ ಜನ ಕರ್ನಾಟಕದ ಬೇರೆ ಬೇರೆ ಕಡೆಯಿಂದ ಕಮೆಂಟ್ ಮತ್ತು ವೋಟ್ ಮಾಡಿದ್ದಾರೆ. ಇದರ ಜೊತೆಗೆ ಭಗವದ್ಗೀತೆ ಪಠ್ಯಕ್ರಮದಲ್ಲಿ ಯಾಕೆ ಬೇಕು ಮತ್ತು ಯಾಕೆ ಬೇಡ ಎನ್ನುವುದನ್ನು ತಮ್ಮ ಅಭಿಪ್ರಾಯದ ಮೂಲಕ ವ್ಯಕ್ತಪಡಿಸಿದ್ದಾರೆ. ಇದರ ಆಧಾರ ಮೇಲೆ ಟಿವಿ9 ಕನ್ನಡ ಡಿಜಿಟಲ್ ಒಂದು ವರದಿಯನ್ನು ತಯಾರು ಮಾಡಿದೆ. ಅದು ಇಲ್ಲಿದೆ
ಭಗವದ್ಗೀತೆ ಪಠ್ಯಕ್ರಮದಲ್ಲಿ ಬೇಕು ಅಥವಾ ಬೇಡ? ಫೇಸ್ ಬುಕ್ ಸಮೀಕ್ಷೆ
ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಫೇಸ್ ಬುಕ್ ನಲ್ಲಿ ಭಗವದ್ಗೀತೆ ಪಠ್ಯಕ್ರಮದಲ್ಲಿ ಬೇಕು ಅಥವಾ ಬೇಡ? ಎಂದು ಕೇಳಿದಾಗ ಸಾವಿರಾರೂ ಫೇಸ್ ಬುಕ್ ಬಳಕೆದಾರರೂ ಅಲ್ಲಿ ಕಮೆಂಟ್ ಮಾಡಿದ್ದಾರೆ, ಬೇಕು – ಬೇಡ ಎಂದು ವೋಟ್ ಕೂಡ ಮಾಡಿದ್ದಾರೆ. ಈ ಮೂಲಕ ಫೇಸ್ ಬುಕ್ ನಲ್ಲಿ ಸಾವಿರಾರೂ ಮಂದಿ ಟಿವಿ9 ಕನ್ನಡ ಡಿಜಿಟಲ್ ಮಾಡಿದ ಸಮೀಕ್ಷೆಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಟಿವಿ9 ಕನ್ನಡ ಡಿಜಿಟಲ್ ಮಾಡಿದ ಸಮೀಕ್ಷೆಗೆ 8ಸಾವಿರ ಜನ ಮೆಚ್ಚುಗೆಯನ್ನು ವ್ಯಕ್ತಪಡಿದ್ದಾರೆ. 6,600 ಜನ ಟಿವಿ9 ಕನ್ನಡ ಡಿಜಿಟಲ್ ಮಾಡಿದ ಸಮೀಕ್ಷೆಗೆ ಕಮೆಂಟ್ ಮಾಡಿದ್ದಾರೆ. 6,600 ಜನರಲ್ಲಿ 5 ಸಾವಿರಕ್ಕೂ ಹೆಚ್ಚಿನ ಜನ ಬೇಕು ಎಂದು ಹೇಳಿದ್ದಾರೆ . ಒಂದಿಷ್ಟು ಜನ ಶಿಕ್ಷಣದಲ್ಲಿ ಧರ್ಮ ಗ್ರಂಥಗಳು ಬೇಡ ಎಂದಿದ್ದಾರೆ.
ಭಗವದ್ಗೀತೆ ಪಠ್ಯಕ್ರಮದಲ್ಲಿ ಬೇಕು ಅಥವಾ ಬೇಡ? ಇನ್ಸ್ಟಾಗ್ರಾಮ್ ಸಮೀಕ್ಷೆ
ಇನ್ಸ್ಟಾಗ್ರಾಮ್ ನಲ್ಲಿ ಭಗವದ್ಗೀತೆ ಪಠ್ಯಕ್ರಮದಲ್ಲಿ ಬೇಕು ಅಥವಾ ಬೇಡ? ಎಂದು ಕೇಳಿದಾಗ ಇನ್ಸ್ಟಾಗ್ರಾಮ್ ಬಳಕೆದಾರರೂ ಸ್ಪಷ್ಟವಾಗಿ ಉತ್ತರವನ್ನು ನೀಡಿದ್ದಾರೆ. ಬೇಕು ಅಥವಾ ಬೇಡ ಎನ್ನುವುದನ್ನು ಇದರ ಜೊತೆಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಟಿವಿ9 ಕನ್ನಡ ಡಿಜಿಟಲ್ ನಡೆಸಿದ ಸಮೀಕ್ಷೆಯಲ್ಲಿ ಸಾವಿರರೂ ಜನ ಭಾಗವಹಿಸದರು. 3,656 ಜನ ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದು ಜತೆಗೆ ಇದಕ್ಕೆ ಮೆಚ್ಚುಗೆಯನ್ನು ಪಡಿಸಿದ್ದಾರೆ. 600ಕ್ಕೂ ಹೆಚ್ಚು ಜನರು ಭಗವದ್ಗೀತೆ ಪಠ್ಯಕ್ರಮದಲ್ಲಿ ಬೇಕು ಎಂದು ಮತ್ತು ಒಂದಿಷ್ಟು ಜನ ಬೇಡ ಎಂದು ವೋಟ್ ಮಾಡಿದ್ದಾರೆ.
ಭಗವದ್ಗೀತೆ ಪಠ್ಯಕ್ರಮದಲ್ಲಿ ಬೇಕು ಅಥವಾ ಬೇಡ? ಯೂಟ್ಯೂಬ್ ಸಮೀಕ್ಷೆ
ಭಗವದ್ಗೀತೆ ಪಠ್ಯಕ್ರಮದಲ್ಲಿ ಬೇಕು ಅಥವಾ ಬೇಡ? ಎಂಬ ಪ್ರಶ್ನೆಯನ್ನು ಟಿವಿ9 ಕನ್ನಡ ಡಿಜಿಟಲ್ ಯೂಟ್ಯೂಬ್ ವೇದಿಕೆಯಲ್ಲಿ ಕೇಳಿದಾಗ ಸಾವಿರಾರು ಮಂದಿ ಈ ಸಮೀಕ್ಷೆಗೆ ಪ್ರತಿಕ್ರಿಯೆ ನೀಡಿದರು. ಯೂಟ್ಯೂಬ್ ನಲ್ಲಿ ಮಾಡಿದ ಸಮೀಕ್ಷೆಯಲ್ಲಿ 168 ಕೆ ಜನರು ವೋಟ್ ಮಾಡಿದ್ದಾರೆ. ಇದರ ಜೊತೆಗೆ 1 ಸಾವಿರ ಜನ ಟಿವಿ9 ಕನ್ನಡ ಡಿಜಿಟಲ್ ಮಾಡಿದ ಸಮೀಕ್ಷೆಗೆ ಕಮೆಂಟ್ ಮಾಡಿದ್ದಾರೆ. 85 ಶೇಕಡದಷ್ಟು ಜನ ಬೇಕು ಎಂದರೆ 15 ಶೇಕಡದಷ್ಟು ಜನ ಭಗವದ್ಗೀತೆ ಪಠ್ಯಕ್ರಮದಲ್ಲಿ ಬೇಡ ಎಂದಿದ್ದಾರೆ.
ಸಾಮಾಜಿಕ ಜಾಲತಾಣಗಳು | ಬೇಕು | ಬೇಡ |
ಫೇಸ್ಬುಕ್ : | ಪುರುಷರು – 95 ಶೇಕಾಡ
ಮಹಿಳೆಯರು -2ಶೇಕಾಡ |
ಪುರುಷರು– 2ಶೇಕಾಡ
ಮಹಿಳೆಯರು -1ಶೇಕಾಡ |
ಇನ್ಸ್ಟಾಗ್ರಾಮ್ | ಪುರುಷರು – 80ಶೇಕಾಡ
ಮಹಿಳೆಯರು -10ಶೇಕಾಡ |
ಪುರುಷರು– 7ಶೇಕಾಡ
ಮಹಿಳೆಯರು -3ಶೇಕಾಡ |
ಟ್ವಿಟರ್ : | ಪುರುಷರು– 70ಶೇಕಾಡ
ಮಹಿಳೆಯರು -30ಶೇಕಾಡ |
ಪುರುಷರು–
ಮಹಿಳೆಯರು – |
ಕೂ : | ಪುರುಷರು– 60ಶೇಕಾಡ
ಮಹಿಳೆಯರು -40ಶೇಕಾಡ |
ಪುರುಷರು–
ಮಹಿಳೆಯರು – |
ಯೂಟ್ಯೂಬ್ | ಪುರುಷರು– 73ಶೇಕಾಡ
ಮಹಿಳೆಯರು -10ಶೇಕಾಡ |
ಪುರುಷರು– 10ಶೇಕಾಡ
ಮಹಿಳೆಯರು -7ಶೇಕಾಡ |
ಭಗವದ್ಗೀತೆ ಪಠ್ಯಕ್ರಮದಲ್ಲಿ ಬೇಕು ಅಥವಾ ಬೇಡ? ಎಂಬ ಸಮೀಕ್ಷೆಯಲ್ಲಿ ಸಾವಿರರೂ ಮಂದಿ ತಮ್ಮ ಮುಕ್ತ ಮನಸ್ಸಿನಿಂದ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಮೂಲಕ ಸರ್ಕಾರಕ್ಕೂ ಒಂದು ರೀತಿ ಸಾರ್ವಜನಿಕ ಸಲಹೆ ಸಿಕ್ಕತಾಂಗಿದೆ. ಬೇಕು – ಬೇಡ ಎಂಬುದರ ಮಧ್ಯೆ ವಿದ್ಯಾರ್ಥಿಗಳಿಗೆ ಉತ್ತಮ ಮತ್ತು ಒಳ್ಳೆಯ ಶಿಕ್ಷಣ ನೀಡಬೇಕಾಗಿದೆ.
Published On - 6:36 pm, Tue, 22 March 22