India vs Australia 2020 ಟೀಂ ಇಂಡಿಯಾ ಗೆಲುವಿನ ರಹಸ್ಯ ಬಿಚ್ಚಿಟ್ಟ ಆಸ್ಟ್ರೇಲಿಯಾ ನಾಯಕ!

ನಮ್ಮ ಬ್ಯಾಟ್ಸ್​​ಮನ್​ಗಳು ರನ್​ ಗಳಿಸಲು ಪರದಾಡಿದರು. ಇದಕ್ಕೆ ಇಂಡಿಯಾ ಬೌಲರ್​ಗಳ ಉತ್ತಮ ಪ್ರದರ್ಶನ ಕೂಡ ಕಾರಣ. ಇನ್ನೂ ಎರಡು ಪಂದ್ಯಗಳಿವೆ. ಅದರಲ್ಲಿ ನಾವು ಉತ್ತಮ ಪ್ರದರ್ಶನ ನೀಡುವ ಭರವಸೆ ಇದೆ ಎಂದರು ಟಿಮ್.

India vs Australia 2020 ಟೀಂ ಇಂಡಿಯಾ ಗೆಲುವಿನ ರಹಸ್ಯ ಬಿಚ್ಚಿಟ್ಟ ಆಸ್ಟ್ರೇಲಿಯಾ ನಾಯಕ!
ಟಿಮ್​ ಪೈನ್
Edited By: ಸಾಧು ಶ್ರೀನಾಥ್​

Updated on: Dec 29, 2020 | 2:44 PM

ಮೆಲ್ಬೋರ್ನ್:​ ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್​ ಡೇ ಟೆಸ್ಟ್​​ನಲ್ಲಿ ಟೀಂ ಇಂಡಿಯಾ 8 ವಿಕೆಟ್​ಗಳ ಗೆಲುವು ದಾಖಲಿಸಿದೆ. ಬೌಲರ್​ ಹಾಗೂ ಬ್ಯಾಟ್ಸ್​​ಮನ್​ಗಳ ಅದ್ಭುತ ಸಾಂಘಿಕ ಪ್ರದರ್ಶನದಿಂದ ಟೀಂ ಇಂಡಿಯಾ ಗೆಲುವು ದಾಖಲಿಸಿದೆ. ಈ ಮಧ್ಯೆ ಭಾರತ ಗೆಲ್ಲಲು ಆಸ್ಟ್ರೇಲಿಯಾದ ಕಳಪೆ ಆಟ ಹಾಗೂ ಟೀಂ ಇಂಡಿಯಾ ಬೌಲರ್​ಗಳ ಚಮತ್ಕಾರವೇ ಕಾರಣ ಎಂದು ನಾಯಕ ಟಿಮ್ ಪೈನ್ ಮ್ಯಾಚ್​ ಕುರಿತು ಷರಾ ಬರೆದಿದ್ದಾರೆ.

ಇನ್ನೂ ಎರಡು ಪಂದ್ಯಗಳಿವೆ..
’ಮ್ಯಾಚ್​ ಪೂರ್ಣಗೊಂಡ ನಂತರದಲ್ಲಿ ಮಾತನಾಡಿದ ಟಿಮ್ ಪೈನ್, ನಿಜಕ್ಕೂ ನಾವು ನಿರಾಶೆಗೊಂಡಿದ್ದೇವೆ. ನಮ್ಮ ಆಟಗಾರರು ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ. ಬ್ಯಾಟಿಂಗ್​ ಹಾಗೂ ಫೀಲ್ಡಿಂಗ್​ ಎರಡರಲ್ಲೂ ನಾವು ಎಡವಿದ್ದೇವೆ. ಹೀಗಾದಾಗ ಗೆಲ್ಲುವುದು ಕಷ್ಟ ಎಂದಿದ್ದಾರೆ.

ನಮ್ಮ ಬ್ಯಾಟ್ಸ್​​ಮನ್​ಗಳು ರನ್​ ಗಳಿಸಲು ಪರದಾಡಿದರು. ಇದಕ್ಕೆ ಇಂಡಿಯಾ ಬೌಲರ್​ಗಳ ಉತ್ತಮ ಪ್ರದರ್ಶನ ಕೂಡ ಕಾರಣ. ಇನ್ನೂ ಎರಡು ಪಂದ್ಯಗಳಿವೆ. ಅದರಲ್ಲಿ ನಾವು ಉತ್ತಮ ಪ್ರದರ್ಶನ ನೀಡುವ ಭರವಸೆ ಇದೆ ಎಂದರು ಟಿಮ್.

ಮುಂದಿನ ಟೆಸ್ಟ್​ಗೆ ರೋಹಿತ್​:
ರೋಹಿತ್​ ಈಗಾಗಲೇ ಆಸ್ಟ್ರೇಲಿಯಾಗೆ ತೆರಳಿ ಕ್ವಾರಂಟೈನ್​ ಆಗಿದ್ದಾರೆ. ಈಗ ಕ್ವಾರಂಟೈನ್​ ಅವಧಿ ಪೂರ್ಣಗೊಂಡಿದ್ದು, ಮೂರನೇ ಟೆಸ್ಟ್​​ಗೆ ಪಾಲ್ಗೊಳ್ಳುತ್ತಿದ್ದಾರೆ. ಈಗಾಗಲೇ ಭಾರತದ ಬೌಲರ್​ಗಳು ಮಿಂಚುತ್ತಿದ್ದಾರೆ. ಹೀಗಾಗಿ, ಬ್ಯಾಟಿಂಗ್​ಗೆ ಬಲ ನೀಡಲು ರೋಹಿತ್​ ಸೇರ್ಪಡೆ ಸಹಕಾರಿಯಾಗಲಿದೆ. ರೋಹಿತ್​ ತಂಡ ಸೇರಿದರೆ ಮಯಾಂಕ್​ ಅಗರ್​ವಾಲ್​ ಅಥವಾ ಚೇತೇಶ್ವರ್​​ ಪೂಜಾರ ತಂಡದಿಂದ ಹೊರಗುಳಿಯಬೇಕಾಗುತ್ತದೆ.

 

India vs Australia 2020 ಬಾಕ್ಸಿಂಗ್​ ಡೇ ಟೆಸ್ಟ್​​ನಲ್ಲಿ ಟೀಂ ಇಂಡಿಯಾ ನಗುವಿನ ಕೇಕೆ: ಇಲ್ಲಿವೆ ಚಿತ್ರಗಳು

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us