ಆಘಾತಕಾರಿ.. ಜನಿಸಿದ 3 ಗಂಟೆಗಳಲ್ಲೇ ಸೋಂಕಿನಿಂದ ಕೊನೆಯುಸಿರೆಳೆದ ಶಿಶು

| Updated By: ಸಾಧು ಶ್ರೀನಾಥ್​

Updated on: Aug 26, 2020 | 11:29 AM

ಬೆಂಗಳೂರು: ಕ್ರೂರಿ ಕೊರೊನಾಗೆ ನವಜಾತ ಶಿಶು ಕೊನೆಯುಸಿರೆಳೆದ ಕರುಣಾಜನಕ ಘಟನೆ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ. ಕೊರೊನಾಗೆ ಬಲಿಯಾದ ನವಜಾತ ಶಿಶು ಹುಟ್ಟಿದ ಮೂರ್ನಾಲ್ಕು ಗಂಟೆಗಳಲ್ಲೇ ಅಸುನೀಗಿದೆ. ದೊಡ್ಡಬಳ್ಳಾಪುರ ಮೂಲದ ದಂಪತಿಗೆ ಜನಿಸಿದ್ದ ಶಿಶುವಿಗೆ ಕೊರೊನಾ ಪಾಸಿಟಿವ್ ಎಂದು ತಿಳಿದುಬಂದಿದೆ. ಹೀಗಾಗಿ, ಸೋಂಕಿನೊಂದಿಗೆ ಸಾವು ಬದುಕಿನ ಹೋರಾಟ ನಡೆಸಿದ ಶಿಶು ಇಂದು ಸಾವನ್ನಪ್ಪಿದೆ. ಕೊರೊನಾದಿಂದ ಮೃತಪಟ್ಟ ಮಗುವಿಗೆ ಌಂಬ್ಯಲೆನ್ಸ್ ಸಿಬ್ಬಂದಿಯೇ ಅಂತ್ಯ ಸಂಸ್ಕಾರ ನೆರವೇರಿಸಿದ್ರು. ಬಾಣಂತಿ ಮತ್ತು ಆಕೆಯ ಗಂಡನಿಗೆ ಕೊರೊನಾ ಪಾಸಿಟಿವ್ ಇರುವ ಕಾರಣ […]

ಆಘಾತಕಾರಿ.. ಜನಿಸಿದ 3 ಗಂಟೆಗಳಲ್ಲೇ ಸೋಂಕಿನಿಂದ ಕೊನೆಯುಸಿರೆಳೆದ ಶಿಶು
Follow us on

ಬೆಂಗಳೂರು: ಕ್ರೂರಿ ಕೊರೊನಾಗೆ ನವಜಾತ ಶಿಶು ಕೊನೆಯುಸಿರೆಳೆದ ಕರುಣಾಜನಕ ಘಟನೆ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ.

ಕೊರೊನಾಗೆ ಬಲಿಯಾದ ನವಜಾತ ಶಿಶು ಹುಟ್ಟಿದ ಮೂರ್ನಾಲ್ಕು ಗಂಟೆಗಳಲ್ಲೇ ಅಸುನೀಗಿದೆ. ದೊಡ್ಡಬಳ್ಳಾಪುರ ಮೂಲದ ದಂಪತಿಗೆ ಜನಿಸಿದ್ದ ಶಿಶುವಿಗೆ ಕೊರೊನಾ ಪಾಸಿಟಿವ್ ಎಂದು ತಿಳಿದುಬಂದಿದೆ. ಹೀಗಾಗಿ, ಸೋಂಕಿನೊಂದಿಗೆ ಸಾವು ಬದುಕಿನ ಹೋರಾಟ ನಡೆಸಿದ ಶಿಶು ಇಂದು ಸಾವನ್ನಪ್ಪಿದೆ.

ಕೊರೊನಾದಿಂದ ಮೃತಪಟ್ಟ ಮಗುವಿಗೆ ಌಂಬ್ಯಲೆನ್ಸ್ ಸಿಬ್ಬಂದಿಯೇ ಅಂತ್ಯ ಸಂಸ್ಕಾರ ನೆರವೇರಿಸಿದ್ರು. ಬಾಣಂತಿ ಮತ್ತು ಆಕೆಯ ಗಂಡನಿಗೆ ಕೊರೊನಾ ಪಾಸಿಟಿವ್ ಇರುವ ಕಾರಣ ದಂಪತಿ ಅಂತ್ಯ ಸಂಸ್ಕಾರಕ್ಕೆ ಬರಲು ಆಗಲಿಲ್ಲವಂತೆ.

JJR ನಗರದ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಿದ ಌಂಬ್ಯಲೆನ್ಸ್ ಸಿಬ್ಬಂದಿಗೆ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್​ ಟೀಂ ಸಹಾಯ ಮಾಡಿತು. ನವಜಾತ ಶಿಶುವಿಗೆ ಹಿಂದೂ ಸಂಪ್ರದಾಯದ ಪ್ರಕಾರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.