ಬೆಂಗಳೂರು: ಕೊರೊನಾ ಮಹಾಮಾರಿಯ ಚಕ್ರವ್ಯೂಹದಲ್ಲಿ ಸಿಲುಕಿ ನಮ್ಮ ಖಾಕಿ ಪಡೆ ನಲುಗಿ ಹೋಗಿದೆ. ದಿನೇ ದಿನೆ ನಗರ ಪೊಲೀಸರಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು ಸಾಕಷ್ಟು ಸಿಬ್ಬಂದಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆದರೆ, ಅದೇಕೋ ಏನೋ.. ನಮ್ ಕೊರೊನಾ ವಾರಿಯರ್ಸ್ ನಮ್ ವೀರ ಪೊಲೀಸರು ಎಂದು ನಮ್ಮ ಖಾಕಿ ಪಡೆಗೆ ಆಚೆ ಸಲ್ಲುತ್ತಿರುವ ಗೌರವ ಮತ್ತು ಮರ್ಯಾದೆ ಕೋವಿಡ್ ಆಸ್ಪತ್ರೆಗಳಲ್ಲಿ ಸಿಗ್ತಿಲ್ಲ. ಇಂಥದೊಂದು ಪ್ರಸಂಗ ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಕಂಡುಬಂದಿದೆ.
ಹೌದು, ನಗರದಲ್ಲಿ ಸೋಂಕಿತ ಪೊಲೀಸರನ್ನು ಚಿಕಿತ್ಸೆಗಾಗಿ ಇರಿಸಲಾಗಿರುವ ಆಸ್ಪತ್ರೆಯ ವಾರ್ಡ್ನಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಟ್ಟಿಲ್ಲ ಅಂತಾ ತಮ್ಮ ಅಳಲು ತೋಡಿಕೊಂಡಿದ್ದಾರೆ. ಉಪಾಹಾರ, ಊಟವನ್ನ ಕೂಡ ತಡವಾಗಿ ಕೊಡುತ್ತಾರೆ. ಉಣ್ಣಕ್ಕೆ ಮುದ್ದೆ ಕೊಡ್ತಾರೆ ಆದರೆ ಸಾರು ಕೊಡಲ್ಲ. ಕುಡಿಯುವುದಕ್ಕೂ ನೀರು ಸಿಗುತ್ತಿಲ್ಲ ಎಂದು ನೋವಿನ ಮಾತುಗಳನ್ನು ಆಡಿದ್ದಾರೆ.
‘ಆ ಸೋಂಕಿತ ಕಾನ್ಸ್ಟೇಬಲ್ನ ಬಾಡಿ ಪಡೆಯೋಕೆ ಯಾರೂ ಬರಲಿಲ್ಲ’
ಇತ್ತ ಬೇರೊಬ್ಬ ಪೊಲೀಸ್ ಸಿಬ್ಬಂದಿ ಇತರೆ ಕೋವಿಡ್ ಆಸ್ಪತ್ರೆಗಳಲ್ಲಿ ತಮ್ಮ ಸೋಂಕಿತ ಸಹೋದ್ಯೋಗಿಗಳಿಗೆ ಎದುರಿಸುತ್ತಿರುವ ಅಮಾನವೀಯ ಪರಿಸ್ಥಿತಿಯನ್ನು ಆಡಿಯೋ ಮೆಸೇಜ್ ಮುಖಾಂತರ ಹಂಚಿಕೊಂಡಿದ್ದಾರೆ. ಕೊರೊನಾ ವಾರಿಯರ್ಸ್ಗಳಾಗಿ ಸೇವೆ ಸಲ್ಲಿಸಿದ್ರೂ ಆಸ್ಪತ್ರೆಯಲ್ಲಿ ಬೆಡ್ ಸಿಗ್ತಿಲ್ಲ ಅಂತಾ ನೋವಿನ ಮಾತುಗಳನ್ನ ತೋಡಿಕೊಂಡಿದ್ದಾರೆ. ಜೊತೆಗೆ ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿಯ ದುರ್ವರ್ತನೆಯ ಬಗ್ಗೆಯೂ ಮಾತಾಡಿದ್ದಾರೆ.
ಇದಲ್ಲದೆ, ಕೋವಿಡ್ನಿಂದ ಇತ್ತೀಚೆಗೆ ಮೃತಪಟ್ಟ ಹೆಡ್ ಕಾನ್ಸ್ಟೇಬಲ್ರ ಮೃತದೇಹವನ್ನ ಪಡೆಯೋಕೆ ಅವರ ಕುಟುಂಬದವರೂ ಬಂದಿರಲಿಲ್ಲ. ನಾವೇ ಕೊನೆಗೆ ಅವರ ಅಂತ್ಯಕ್ರಿಯೆ ನೆರವೇರಿಸಬೇಕಿತ್ತು. ಕೊರೊನಾ ವಾರಿಯರ್ಸ್ ಗೇ ಇಂಥ ಪರಿಸ್ಥಿತಿ ಆದ್ರೆ ಇನ್ನೂ ಜನಸಾಮಾನ್ಯರ ಸ್ಥಿತಿ ಹೇಗೆ ಅನ್ನೋ ಪ್ರಶ್ನೆ ಕೂಡ ಎತ್ತಿದ್ದಾರೆ.