ಬೆಳಗಾವಿ: K ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು ವಿಚಾರವಾಗಿ ಖುದ್ದು ಚಿತ್ರಸಾಹಿತಿಯೇ ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಅವರು ಈ ಬಿರುಕಿಗೆ ಕಾರಣವಾದ ಸಂಗತಿಯನ್ನು ಪ್ರಸ್ತಾಪಿಸಿದ್ದಾರೆ. ನಾನು, ನನ್ನ ಪತ್ನಿ ಇಬ್ಬರೂ ಚೆನ್ನಾಗಿ ಇದ್ದೇವೆ. ನಮ್ಮಿಬ್ಬರ ನಡುವೆ ಯಾವುದೇ ರೀತಿಯ ಗೊಂದಲವಿಲ್ಲ ಎಂದು ತಮ್ಮ ಕುಟುಂಬದ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.
ಏನೋ ನಡೆಯುತ್ತಿದೆ ಎಂದು ನಾನು ಸುಮ್ಮನೆ ಇದ್ದೆ. ಬೆಳಗಾವಿಗೆ ಹೋಗಿ ಬರುವುದಾಗಿ ಹೇಳಿ ವಾಪಸಾಗಿದ್ದರು. ಬೆಳಗಾವಿಗೆ ಬಂದ ಬಳಿಕ ಜನವರಿಯಲ್ಲಿ ಫೋನ್ ಸ್ವಿಚ್ಡ್ ಆಫ್ ಆಯ್ತು. ಆಗ ನನ್ನ ಪತ್ನಿಯನ್ನು ಭೇಟಿಯಾಗುವುದಕ್ಕೂ ನನ್ನನ್ನ ಬಿಡಲಿಲ್ಲ. ಸಂಬಂಧಿಕರ ಮನೆಯಲ್ಲೂ ನಮ್ಮ ಅತ್ತೆಯವರು ವಿಚಿತ್ರ ಪೂಜೆ ಮಾಡುತ್ತಿದ್ದರು ಎಂದು ತಮ್ಮ ಹೆಂಡತಿಯನ್ನು ದೂರು ಮಾಡಿಸಿರುವ ಬಗ್ಗೆ ಕೆ.ಕಲ್ಯಾಣ್ ಮಾತನಾಡಿದ್ದಾರೆ.
ಏನು ಎಂಬುದು ನನಗೆ ಅದು ಅರ್ಥವಾಗುತ್ತಿರಲಿಲ್ಲ:
15 ವರ್ಷದಿಂದ ಬೇಡವಾದದ್ದ ಆಸ್ತಿ ನನಗೆ ಈಗೇಕೆ ಬೇಕು:
ನಾನು ನನ್ನ ಪತ್ನಿಗೆ ಯಾವುದೇ ಮಾನಸಿಕ ಹಿಂಸೆ ಕೊಟ್ಟಿಲ್ಲ. ಇಷ್ಟು ದಿನ ಹಿಂಸೆ ಕೊಡದ ನಾನು ಈಗ ಮಾತ್ರ ಕೊಟ್ಟಿದ್ದೇನಾ? 15 ವರ್ಷದಿಂದ ಬೇಡವಾದದ್ದ ಆಸ್ತಿ ನನಗೆ ಈಗೇಕೆ ಬೇಕು ಎಂದು ಬೆಳಗಾವಿಯಲ್ಲಿ ಚಿತ್ರಸಾಹಿತಿ ಕೆ.ಕಲ್ಯಾಣ್ ಪ್ರಶ್ನಿಸಿದ್ರು. ಶಿವಾನಂದ ವಾಲಿ ನನಗೆ ಗೊತ್ತಾಗಿದ್ದು ನವೆಂಬರ್‌ನಲ್ಲಿ. ನಮ್ಮ ಅತ್ತೆ 800 ಬಾರಿ ಕರೆ ಮಾಡಿ ಶಿವಾನಂದ ವಾಲಿ ಜತೆ ಮಾತನಾಡಿದ್ದಾರೆ. ಶಿವಾನಂದ ವಾಲಿಗೂ ನಮಗೆ ಯಾವುದೇ ಸಂಬಂಧವಿಲ್ಲ. ನನ್ನನ್ನು ಬಿಟ್ಟು ನನ್ನ ಪತ್ನಿ ಅರ್ಧ ಗಂಟೆಯೂ ಇರುತ್ತಿರಲಿಲ್ಲ. ಈಗ ಅವರು ನನ್ನ ಜತೆ ಮಾತಾಡಲು ಇಷ್ಟಪಡುತ್ತಿಲ್ಲ. 8-9 ತಿಂಗಳಿಂದ ಸರಿಯಾಗಿ ಮಾತನಾಡುತ್ತಿಲ್ಲ. ಹೀಗಾಗಿ ನನ್ನ ಪತ್ನಿ ಬ್ರೈನ್ ವಾಶ್ ಮಾಡಿರುವ ಸಾಧ್ಯತೆ ಇದೆ. ನನ್ನ ಪತ್ನಿ ಸಂಬಂಧಿಕರು ನನ್ನ ಜತೆ ಚೆನ್ನಾಗಿಯೇ ಇದ್ದಾರೆ. ಅವರಿಗೆ ತೊಂದರೆ ನೀಡಿದ್ದರೆ ಮೊದಲೇ ಆರೋಪಿಸಬಹುದಿತ್ತು. ಇಷ್ಟು ದಿನ ಇಲ್ಲದ ಆರೋಪ ಈಗ ಏಕೆ ಮಾಡುತ್ತಿದ್ದಾರೆ ಎಂದಿದ್ದಾರೆ.
Published On - 11:19 am, Sun, 4 October 20