ಬೆಂಗಳೂರು: ಮೈತ್ರಿ ಸರ್ಕಾರದಿಂದ ಕೆಳಗಿಳಿದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನಾಯಕತ್ವದಲ್ಲಿ ಜೆಡಿಎಸ್ ಮತ್ತೆ ಅಧಿಕಾರ ಪಡೆಯುವಲ್ಲಿ ಉಪಚುನಾವಣೆಯಲ್ಲಿ ಸಂಪೂರ್ಣ ಸೋತಿದೆ. ಹಿರಿಯ ಗೌಡರ ನೇತೃತ್ವದಲ್ಲಿ ಪಕ್ಷ ಫೀನಿಕ್ಸ್ನಂತೆ ಮರಳಿ ಜೀವ ಪಡೆಯುತ್ತದೆ ಎಂಬ ಆಶಾಭಾವ ಕಳಚಿ ಬಿದ್ದಿದೆ.
ಯಶವಂತಪುರ ಒಂದರಲ್ಲೇ ಜೆಡಿಎಸ್ ಸ್ವಲ್ಪ ಮಟ್ಟಿಗೆ ತನ್ನ ಇರುವನ್ನು ಸಾಬೀತು ಪಡಿಸುವಲ್ಲಿ ಯಶಸ್ವಿಯಾಗಿದೆ. ಅದು ಬಿಟ್ಟರೆ ಕೆಆರ್ ಪೇಟೆ ಮತ್ತು ಚಿಕ್ಕಬಳ್ಳಾಪುರದಲ್ಲಿ ಒಂದಷ್ಟು ಹೆಚ್ಚು ಮತಗಳನ್ನು ಗಳಿಸಿದೆ. ಹೇಳಬೇಕೆಂದರೆ ಜೆಡಿಎಸ್ ಈ ಎರಡು ಕ್ಷೇತ್ರಗಳಲ್ಲಿ ಗೆದ್ದುಬೀಗಬೇಕಿತ್ತು.
ಈ ಉಪಚುನಾವಣೆಗೂ ಮುನ್ನ ಮೈತ್ರಿ ವಿಷಯದಲ್ಲಿ ಯಡವಟ್ಟು ಮಾಡಿಕೊಂಡ ಅಪ್ಪ ಮಗ ಭವಿಷ್ಯದಲ್ಲಿ ಅಂದರೆ ಇನ್ನು ಮೂರೂವರೆ ವರ್ಷಗಳ ಕಾಲ ತಮ್ಮ ಪಕ್ಷದ ಅಸ್ತಿತ್ವಕ್ಕೆ ಸಂಚಕಾರ ತಂದಿಟ್ಟುಕೊಂಡಿದ್ದಾರೆ. ಇದು ಬಹಳ ದುಬಾರಿ ಆದೀತು.
Published On - 12:59 pm, Mon, 9 December 19