
ಬೆಂಗಳೂರು: ಕರ್ನಾಟಕದಲ್ಲಿ ಸರ್ಕಾರಿ ಹಾಗೂ ಖಾಸಗಿ ವಲಯದ ಕೆಲಸಗಳಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಬೇಕು ಎಂಬ ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ರಾಜ್ಯ ಬಂದ್ ಹೋರಾಟ ನಡೆಯುತ್ತಿದೆ.
ಈ ಹಿನ್ನೆಲೆ ಕನ್ನಡರ ಪರ ಸಂಘಟನೆ ಕಾರ್ಯಕರ್ತರು ಬೊಮ್ಮಸಂದ್ರದಲ್ಲಿ ವಾಹನಗಳನ್ನ ತಡೆದು ರಸ್ತೆಯಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೆ ಅತ್ತಿಬೆಲೆ ಬಳಿಯ ನೆರಳೂರು, ಹೊಸೂರು ರಸ್ತೆಗಳಲ್ಲೂ ಇದೇ ರೀತಿಯ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪ್ರತಿಭಟನೆ ತಡೆಯುತ್ತಿದ್ದಾರೆ.
Published On - 9:14 am, Thu, 13 February 20