‘ಯತ್ನಾಳ್​ ಹೇಳಿಕೆಗಳನ್ನು ನಾವು ಸೀರಿಯಸ್​ ಆಗಿ ತೆಗೆದುಕೊಂಡಿಲ್ಲ; ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವುದನ್ನು ನಿಲ್ಲಿಸಿ’

|

Updated on: Mar 19, 2021 | 7:51 PM

ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಹೇಳಿಕೆಗಳನ್ನು ನಾವು ಸೀರಿಯಸ್​ ಆಗಿ ತೆಗೆದುಕೊಂಡಿಲ್ಲ. ಕಾರ್ಯಕರ್ತರು ಕೂಡ ಸೀರಿಯಸ್​ ಆಗಿ ತೆಗೆದುಕೊಂಡಿಲ್ಲ ಎಂದು ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್​ ಹೇಳಿದ್ದಾರೆ. ಹಾಗಾಗಿ, ಯತ್ನಾಳ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವುದನ್ನು ನಿಲ್ಲಿಸಿ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್​ ಹೇಳಿದ್ದಾರೆ.

‘ಯತ್ನಾಳ್​ ಹೇಳಿಕೆಗಳನ್ನು ನಾವು ಸೀರಿಯಸ್​ ಆಗಿ ತೆಗೆದುಕೊಂಡಿಲ್ಲ; ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವುದನ್ನು ನಿಲ್ಲಿಸಿ’
ಅರುಣ್​ ಸಿಂಗ್​
Follow us on

ಬೆಂಗಳೂರು: ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಹೇಳಿಕೆಗಳನ್ನು ನಾವು ಸೀರಿಯಸ್​ ಆಗಿ ತೆಗೆದುಕೊಂಡಿಲ್ಲ. ಕಾರ್ಯಕರ್ತರು ಕೂಡ ಸೀರಿಯಸ್​ ಆಗಿ ತೆಗೆದುಕೊಂಡಿಲ್ಲ ಎಂದು ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್​ ಹೇಳಿದ್ದಾರೆ. ಹಾಗಾಗಿ, ಯತ್ನಾಳ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವುದನ್ನು ನಿಲ್ಲಿಸಿ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್​ ಹೇಳಿದ್ದಾರೆ. ಜೊತೆಗೆ, ಯತ್ನಾಳ್ ವಿರುದ್ಧ ಕ್ರಮ ಜರುಗಿಸಲಾಗುವುದು. ಈಗಾಗಲೇ ಯತ್ನಾಳ್​ಗೆ ನೋಟಿಸ್ ನೀಡಲಾಗಿದೆ. ಬಿಜೆಪಿ ಕಾರ್ಯಕರ್ತರ ಶ್ರಮದಿಂದ ಅವರು ಶಾಸಕರಾಗಿದ್ದಾರೆ. ಹಾಗಾಗಿ, ಸರ್ಕಾರ ಹಾಗೂ ಸಿಎಂ ವಿರುದ್ಧ ಅವರ ಹೇಳಿಕೆಗಳು ಸರಿಯಲ್ಲ ಎಂದು ಅರುನ್​ ಸಿಂಗ್​ ಹೇಳಿದರು.

‘ಆರೋಪ ಬಂದ 24 ಗಂಟೆಯಲ್ಲೇ ಕ್ರಮ ಕೈಗೊಳ್ಳಲಾಗಿದೆ’
ಆರೋಪ ಬಂದ 24 ಗಂಟೆಯಲ್ಲೇ ಕ್ರಮ ಕೈಗೊಳ್ಳಲಾಗಿದೆ. ಇದು ಬಿಜೆಪಿಯಲ್ಲಿ ಮಾತ್ರ ಸಾಧ್ಯ ಎಂದು ರಮೇಶ್ ಸಿಡಿ ಪ್ರಕರಣದ ಬಗ್ಗೆ ಅರುಣ್‌ ಸಿಂಗ್ ಪ್ರತಿಕ್ರಿಯಿಸಿದರು. ಕಾಂಗ್ರೆಸ್‌ನವರು ರಾಜೀನಾಮೆ ಕೇಳುವ ಮೊದಲೇ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಮೇಶ್ ರಾಜೀನಾಮೆ ಕೊಟ್ಟರು. ಕಾಂಗ್ರೆಸ್‌ನಲ್ಲಿ ಆರೋಪ ಬಂದ ತಕ್ಷಣ ರಾಜೀನಾಮೆ ಪಡೆಯಲ್ಲ. ಅಂತಹ ಸನ್ನಿವೇಶ ಕಾಂಗ್ರೆಸ್ ಪಕ್ಷದಲ್ಲಿಲ್ಲ ಎಂದು ಅರುಣ್‌ ಸಿಂಗ್ ಹೇಳಿದರು.

ಕಾಂಗ್ರೆಸ್‌ ರಾಜಕೀಯವಾಗಿ ಸಿಡಿ ಪ್ರಕರಣವನ್ನು ಬಳಸಿಕೊಳ್ಳುತ್ತಿದೆ. ಸಿಡಿ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಸುಳ್ಳು ಹೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಕ್ಷೀಣಿಸುತ್ತಿದೆ, ಕಾಂಗ್ರೆಸ್ ನಶಿಸಿ ಹೋಗಲಿದೆ. ಹೀಗಾಗಿ ಷಡ್ಯಂತ್ರ ಮಾಡುವುದು ಹಾಗೂ ಸುಳ್ಳು ಹೇಳುವುದು ಗೊಂದಲ ಸೃಷ್ಟಿಸುವುದರಲ್ಲೇ ಕಾಂಗ್ರೆಸ್‌ನವರು ತೊಡಗಿದ್ದಾರೆ ಎಂದು ರಾಜ್ಯ BJP ಉಸ್ತುವಾರಿ ಅರುಣ್‌ಸಿಂಗ್ ಹೇಳಿದರು.

ತಮ್ಮ ಬಗ್ಗೆ ತೇಜೋವಧೆ ಮಾಡ್ತಾರೆಂದು 6 ಸಚಿವರು ಕೋರ್ಟ್‌ ಮೊರೆ ಹೋಗಿದ್ದಾರೆ. ಇದರಲ್ಲಿ ಸಮರ್ಥನೆ ಮಾಡಿಕೊಳ್ಳುವ ಪ್ರಶ್ನೆ ಉದ್ಭವಿಸಲ್ಲ ಎಂದು ಬೆಂಗಳೂರಲ್ಲಿ ರಾಜ್ಯ BJP ಉಸ್ತುವಾರಿ ಅರುಣ್‌ಸಿಂಗ್ ಹೇಳಿದ್ದಾರೆ. ತಮ್ಮ ವಿರುದ್ಧದ ಷಡ್ಯಂತ್ರ ತಡೆಯಲು ಕೋರ್ಟ್‌ಗೆ ಹೋಗಿದ್ದಾರೆ ಎಂದು ಸಹ ಹೇಳಿದರು.

ಇನ್ನು, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್​ ಇಂದು ನಗರಕ್ಕೆ ಆಗಮಿಸಿದರು. ಅರುಣ್ ಸಿಂಗ್ ಅವರನ್ನು MLC ತುಳಸಿ ಮುನಿರಾಜುಗೌಡ ಸ್ವಾಗತಿಸಿದರು. ಜೊತೆಗೆ, ಬಸವಕಲ್ಯಾಣ ಉಪಚುನಾವಣಾ ಕ್ಷೇತ್ರದ ಟಿಕೆಟ್​ ಆಕಾಂಕ್ಷಿಗಳಾದ ಮಲ್ಲಿಕಾರ್ಜುನ ಖೂಬಾ ಮತ್ತು ಶರಣು ಸಲಗಾರ್​ ಸಹ ಸಿಂಗ್​ಗೆ ಸ್ವಾಗತ ಕೋರಿದರು.

ಮಸ್ಕಿ ಪಟ್ಟಣದಲ್ಲಿ ನಾಳೆ ಬಿಜೆಪಿಯಿಂದ ಬೃಹತ್ ಸಮಾವೇಶ
ಏ. 17ರಂದು ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಇರುವ ಹಿನ್ನೆಲೆಯಲ್ಲಿ ಮಸ್ಕಿ ಪಟ್ಟಣದಲ್ಲಿ ನಾಳೆ ಬಿಜೆಪಿಯಿಂದ ಬೃಹತ್ ಸಮಾವೇಶ ನಡೆಯಲಿದೆ. ಸಿಎಂ ಯಡಿಯೂರಪ್ಪ, ಡಿಸಿಎಂ ಗೋವಿಂದ ಕಾರಜೋಳ, ಸಚಿವರಾದ ಈಶ್ವರಪ್ಪ, ಬಿ.ಶ್ರೀರಾಮುಲು ಸೇರಿದಂತೆ ಸಮಾವೇಶದಲ್ಲಿ ಹಲವರು ಭಾಗಿಯಾಗಲಿದ್ದಾರೆ.

ಇದನ್ನೂ ಓದಿ: ನಿಷ್ಠಾವಂತ ಕಾರ್ಯಕರ್ತರಿಗೆ ಅಪಮಾನ ಮಾಡಿದ್ದಾರೆ -ಸಾಮೂಹಿಕ ರಾಜೀನಾಮೆಗೆ ಮುಂದಾದ ತನ್ವೀರ್ ಸೇಠ್ ಬೆಂಬಲಿಗರು