ಹೈಕೋರ್ಟ್‌ ಅಂಗಳಕ್ಕೂ ನುಗ್ಗಿದ ಕೊರೊನಾ, ಇನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕವೇ ಕಲಾಪ

| Updated By: ಸಾಧು ಶ್ರೀನಾಥ್​

Updated on: Jul 01, 2020 | 11:07 AM

ಬೆಂಗಳೂರು: ಕೊರೊನಾ ಎಗ್ಗಿಲ್ಲದೇ ಎಲ್ಲೆಂದರಲ್ಲಿ ನುಗ್ತಾನೆ ಇದೆ. ಡಾಕ್ಟರ್ಸ್‌ ಆಯ್ತು, ಪೊಲೀಸ್‌ ಆಯ್ತು, ಟೀಚರ್ಸ್‌ ಆಯ್ತು, ಅಷ್ಟೇ ಅಲ್ಲ ದೂರದ ಜಮೀನಿನಲ್ಲಿ ಕುರಿ ಕಾಯೋರನ್ನು ಬಿಡ್ಲಿಲ್ಲ. ಈಗ ಹೆಮ್ಮಾರಿ ಹೈಕೋರ್ಟ್‌ ಆವರಣಕ್ಕೂ ಬಂದಿದೆ. ಹೌದು ಕೊರೊನಾ ಮಾರಿ ಈಗ ಬೆಂಗಳೂರಿನಲ್ಲಿರುವ ಕರ್ನಾಟಕ ಹೈಕೋರ್ಟ್‌ಗೂ ತಲುಪಿದೆ. ಪರಿಣಾಮ ಮಂಗಳಾರ ಹೈಕೋರ್ಟ್‌ನ ಕಾರ್ಯಕಲಾಪಗಳನ್ನ ರದ್ದು ಮಾಡಿ ಸಂಪೂರ್ಣವಾಗಿ ಹೈಕೋರ್ಟ್‌ನ ಕಾಂಪ್ಲೆಕ್ಸ್‌ನ್ನು ಸ್ಯಾನಿಟೈಸ್‌ ಮಾಡಲಾಗಿದೆ. ಈಗ ಮುಖ್ಯನ್ಯಾಯಮೂರ್ತಿ ಎ ಎಸ್‌ ಓಕಾ ಹಾಗೂ ನ್ಯಾಯಮೂರ್ತಿ ಬಿ ವಿ ನಾಗರತ್ನ ಅವರ ಪೀಠದ […]

ಹೈಕೋರ್ಟ್‌ ಅಂಗಳಕ್ಕೂ ನುಗ್ಗಿದ ಕೊರೊನಾ, ಇನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕವೇ  ಕಲಾಪ
ಕರ್ನಾಟಕ ಹೈಕೋರ್ಟ್​
Follow us on

ಬೆಂಗಳೂರು: ಕೊರೊನಾ ಎಗ್ಗಿಲ್ಲದೇ ಎಲ್ಲೆಂದರಲ್ಲಿ ನುಗ್ತಾನೆ ಇದೆ. ಡಾಕ್ಟರ್ಸ್‌ ಆಯ್ತು, ಪೊಲೀಸ್‌ ಆಯ್ತು, ಟೀಚರ್ಸ್‌ ಆಯ್ತು, ಅಷ್ಟೇ ಅಲ್ಲ ದೂರದ ಜಮೀನಿನಲ್ಲಿ ಕುರಿ ಕಾಯೋರನ್ನು ಬಿಡ್ಲಿಲ್ಲ. ಈಗ ಹೆಮ್ಮಾರಿ ಹೈಕೋರ್ಟ್‌ ಆವರಣಕ್ಕೂ ಬಂದಿದೆ.

ಹೌದು ಕೊರೊನಾ ಮಾರಿ ಈಗ ಬೆಂಗಳೂರಿನಲ್ಲಿರುವ ಕರ್ನಾಟಕ ಹೈಕೋರ್ಟ್‌ಗೂ ತಲುಪಿದೆ. ಪರಿಣಾಮ ಮಂಗಳಾರ ಹೈಕೋರ್ಟ್‌ನ ಕಾರ್ಯಕಲಾಪಗಳನ್ನ ರದ್ದು ಮಾಡಿ ಸಂಪೂರ್ಣವಾಗಿ ಹೈಕೋರ್ಟ್‌ನ ಕಾಂಪ್ಲೆಕ್ಸ್‌ನ್ನು ಸ್ಯಾನಿಟೈಸ್‌ ಮಾಡಲಾಗಿದೆ. ಈಗ ಮುಖ್ಯನ್ಯಾಯಮೂರ್ತಿ ಎ ಎಸ್‌ ಓಕಾ ಹಾಗೂ ನ್ಯಾಯಮೂರ್ತಿ ಬಿ ವಿ ನಾಗರತ್ನ ಅವರ ಪೀಠದ ಕಲಾಪಗಳನ್ನ ರದ್ದುಪಡಿಸಲಾಗಿದೆ.

ಈ ಪೀಠದ ಕಲಾಪಗಳನ್ನ ನ್ಯಾಯಮೂರ್ತಿ ಅರವಿಂದ ಕುಮಾರ್‌ ಅವರ ವಿಭಾಗೀಯ ಪೀಠಕ್ಕೆ ವರ್ಗಾಯಿಸಲಾಗಿದೆ. ಇದರ ಜೊತೆಗೆ ಕಲಾಪಗಳನ್ನ ವಿಡಿಯೋ ಕಾನ್ಫರೆನ್ಸ್‌ಮೂಲಕ ಮಾತ್ರವೆ ನಡೆಸಲು ತಿರ್ಮಾನಿಸಲಾಗಿದೆ. ಇಷ್ಟೇ ಅಲ್ಲ ಮುಖ್ಯನಾಯಮೂರ್ತಿ ಓಕಾ ಸೂಚನೆ ಮೇರೆಗೆ ಜುಲೈ 3ರಂದು ನಡೆಯಬೇಕಿದ್ದ ನ್ಯಾಯಾಧೀಶರ ಸಂದರ್ಶನವನ್ನ ರದ್ದುಪಡಿಸಲಾಗಿದೆ. ಈ ಸಂಬಂಧ ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ ಆದೇಶ ಮಾಡಿದ್ದಾರೆ.