ರಾಯಚೂರು: ಜ್ಞಾನ ದೇಗುಲಗಳಾಗಿರುವ ರಾಜ್ಯ ಗ್ರಂಥಾಲಯಗಳೀಗ ಸರಿಯಾದ ನಿರ್ವಹಣೆ ಇಲ್ಲದೆ ಸೊರಿಗಿ ಹೋಗುತ್ತಿವೆ. ತೆರಿಗೆ ವಂಚನೆಯಿಂದ ಗ್ರಂಥಾಲಯ ಇಲಾಖೆ ನಷ್ಟ ಎದುರಿಸುತ್ತಿದೆ. ರಾಜ್ಯ ಗ್ರಂಥಾಲಯ ಇಲಾಖೆಗೆ ಕೋಟಿ ಕೋಟಿ ರೂಪಾಯಿಗಳ ವಂಚನೆ ಮಾಡಲಾಗುತ್ತಿದೆ. ಸ್ಥಳೀಯ ಸಂಸ್ಥೆಗಳು ಗ್ರಂಥಾಲಯ ತೆರಿಗೆ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಸೂಲಿ ಮಾಡ್ತಿವೆ. ಆದ್ರೆ ವಸೂಲಿ ಮಾಡಿದ ತೆರಿಗೆಯನ್ನು ಪಾವತಿಸದೆ ಭಾರಿ ವಂಚನೆ ಮಾಡ್ತಿವೆ.
ರಾಜ್ಯದ್ಯಂತ 560 ಕೋಟಿ ತೆರಿಗೆ ವಸೂಲಿ ಮಾಡಲಾಗಿದೆ. ಹಾಗೂ ಬಿಬಿಎಂಪಿಯಿಂದಲೇ 420 ಕೋಟಿ ತೆರಿಗೆ ಹಣ ಪಾವತಿಸದೇ ಗ್ರಂಥಾಲಯ ಇಲಾಖೆಗೆ ವಂಚಿಸಲಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇನ್ನು ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಗಳಿಂದಲೂ ಇಲಾಖೆಗೆ ಹಣ ಪಾವತಿಯಾಗಿಲ್ಲ. ಇದರಿಂದ ಗ್ರಂಥಾಲಯಗಳ ನಿರ್ವಹಣೆಗೆ ಹಣಕಾಸಿನ ಕೊರತೆ ಅಡ್ಡಿಯಾಗ್ತಿದೆ. ತೆರಿಗೆ ಹಣ ಪಾವತಿಸುವಂತೆ ಪತ್ರ ಬರೆದ್ರೂ ಡೋಂಟ್‌ಕೇರ್, ದಾಖಲೆಗಳಿಂದ ಸ್ಥಳೀಯ ಸಂಸ್ಥೆಗಳ ಅಕ್ರಮ ಬಯಲಾಗಿದೆ.
Published On - 9:12 am, Mon, 17 February 20