ಸೋಂಕಿತನಿಗೆ ಸರ್ಜರಿ ಮಾಡಿದ ವೈದ್ಯರು, ಸಿಬ್ಬಂದಿಗೆ ಕ್ವಾರಂಟೈನ್​ ಪೀಕಲಾಟ! ಎಲ್ಲಿ?

|

Updated on: May 08, 2020 | 6:00 PM

ಹುಬ್ಬಳ್ಳಿ: ಮಹಾಮಾರಿ ಕೊರೊನಾ ಸೋಂಕಿತನಿಗೆ ಶಸ್ತ್ರಚಿಕಿತ್ಸೆ ಮಾಡಿ ಕಿಮ್ಸ್ ವೈದ್ಯಕೀಯ ತಂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೊಟ್ಟೆನೋವಿನಿಂದ ಬಳಲುತ್ತಿದ್ದ ಧಾರವಾಡದ ವ್ಯಕ್ತಿಗೆ ವೈದ್ಯರು ಆಪರೇಷನ್ ಮಾಡಿದ್ದರು. ಆದ್ರೆ ಶಸ್ತ್ರಚಿಕಿತ್ಸೆ ಬಳಿಕ ಆತನಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸದ್ಯ ಶಸ್ತ್ರಚಿಕಿತ್ಸೆ ಬಳಿಕ ಧಾರವಾಡದ 705ನೇ ಕೊರೊನಾ ಸೋಂಕಿತ ಚೇತರಿಸಿಕೊಳ್ಳುತ್ತಿದ್ದಾನೆ. ಗಂಟಲು ದ್ರವ ಪರೀಕ್ಷೆ ಬಳಿಕ ಆತನಿಗೆ ಸೋಂಕು ತಗುಲಿರುವು ಪತ್ತೆಯಾಗಿದೆ. ಹಾಗಾಗಿ ಸೋಂಕಿತನಿಗೆ ಚಿಕಿತ್ಸೆ ನೀಡಿದ್ದ ಐವರು ವೈದ್ಯರು ಮತ್ತು 6 ಅರೆ ವೈದ್ಯಕೀಯ ಸಿಬ್ಬಂದಿಗೆ ಕ್ವಾರಂಟೈನ್ ಮಾಡಲಾಗಿದೆ.

ಸೋಂಕಿತನಿಗೆ ಸರ್ಜರಿ ಮಾಡಿದ ವೈದ್ಯರು, ಸಿಬ್ಬಂದಿಗೆ ಕ್ವಾರಂಟೈನ್​ ಪೀಕಲಾಟ! ಎಲ್ಲಿ?
Follow us on

ಹುಬ್ಬಳ್ಳಿ: ಮಹಾಮಾರಿ ಕೊರೊನಾ ಸೋಂಕಿತನಿಗೆ ಶಸ್ತ್ರಚಿಕಿತ್ಸೆ ಮಾಡಿ ಕಿಮ್ಸ್ ವೈದ್ಯಕೀಯ ತಂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೊಟ್ಟೆನೋವಿನಿಂದ ಬಳಲುತ್ತಿದ್ದ ಧಾರವಾಡದ ವ್ಯಕ್ತಿಗೆ ವೈದ್ಯರು ಆಪರೇಷನ್ ಮಾಡಿದ್ದರು. ಆದ್ರೆ ಶಸ್ತ್ರಚಿಕಿತ್ಸೆ ಬಳಿಕ ಆತನಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಸದ್ಯ ಶಸ್ತ್ರಚಿಕಿತ್ಸೆ ಬಳಿಕ ಧಾರವಾಡದ 705ನೇ ಕೊರೊನಾ ಸೋಂಕಿತ ಚೇತರಿಸಿಕೊಳ್ಳುತ್ತಿದ್ದಾನೆ. ಗಂಟಲು ದ್ರವ ಪರೀಕ್ಷೆ ಬಳಿಕ ಆತನಿಗೆ ಸೋಂಕು ತಗುಲಿರುವು ಪತ್ತೆಯಾಗಿದೆ. ಹಾಗಾಗಿ ಸೋಂಕಿತನಿಗೆ ಚಿಕಿತ್ಸೆ ನೀಡಿದ್ದ ಐವರು ವೈದ್ಯರು ಮತ್ತು 6 ಅರೆ ವೈದ್ಯಕೀಯ ಸಿಬ್ಬಂದಿಗೆ ಕ್ವಾರಂಟೈನ್ ಮಾಡಲಾಗಿದೆ.

Published On - 3:37 pm, Fri, 8 May 20