AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊನೆಗೂ ಗರ್ಭಪಾತ ಮಾಡಿಯೇ ಬಿಟ್ರು ಕಿಮ್ಸ್ ವೈದ್ಯರು! ಯಾಕೆ?

ಹುಬ್ಬಳ್ಳಿ: ಕೊರೊನಾ ಸೋಂಕಿನಿಂದ ಬಳಲುತ್ತಿದ್ದ 5 ತಿಂಗಳ ಗರ್ಭಿಣಿಗೆ ಕೊನೆಗೂ ಹುಬ್ಬಳ್ಳಿಯ ಕಿಮ್ಸ್ ವೈದ್ಯರು ಗರ್ಭಪಾತವನ್ನು ಮಾಡಿದ್ದಾರೆ. ವೈದ್ಯಕೀಯ ಹೈಪವರ್ ಕಮಿಟಿ ನಿರ್ದೇಶನದಂತೆ ಎಂಟಿಪಿ ಕಾಯಿದೆ (Medical Termination of Pregnancy) ಪ್ರಕಾರ ಇಂದು ಬೆಳಗ್ಗೆ ವೈದ್ಯರು ಗರ್ಭಪಾತ ಮಾಡಿದ್ದಾರೆ. ಕೊರೊನಾ ಸೋಂಕಿನ ಜೊತೆಗೆ ಗಂಟಲು ಅಲ್ಸರ್, ಹಿಮೋಗ್ಲೋಬಿನ್ ಕಡಿಮೆ ಮತ್ತು ಮೂತ್ರನಾಳದ ತೊಂದರೆಯಿಂದ ಬಾಗಲಕೋಟೆಯ ಗರ್ಭಿಣಿ ಬಳಲುತ್ತಿದ್ದರು. ಹೀಗಾಗಿ ಇಂದು ಬೆಳಗ್ಗೆ ಕಿಮ್ಸ್ ವೈದ್ಯರ ತಂಡ ಗರ್ಭಪಾತ ಮಾಡಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಮಹಿಳೆ ಚೇತರಿಸಿಕೊಳ್ಳುತ್ತಿದ್ದಾರೆ. ಕಿಮ್ಸ್ […]

ಕೊನೆಗೂ ಗರ್ಭಪಾತ ಮಾಡಿಯೇ ಬಿಟ್ರು ಕಿಮ್ಸ್ ವೈದ್ಯರು! ಯಾಕೆ?
ಸಾಧು ಶ್ರೀನಾಥ್​
|

Updated on:May 08, 2020 | 3:10 PM

Share

ಹುಬ್ಬಳ್ಳಿ: ಕೊರೊನಾ ಸೋಂಕಿನಿಂದ ಬಳಲುತ್ತಿದ್ದ 5 ತಿಂಗಳ ಗರ್ಭಿಣಿಗೆ ಕೊನೆಗೂ ಹುಬ್ಬಳ್ಳಿಯ ಕಿಮ್ಸ್ ವೈದ್ಯರು ಗರ್ಭಪಾತವನ್ನು ಮಾಡಿದ್ದಾರೆ. ವೈದ್ಯಕೀಯ ಹೈಪವರ್ ಕಮಿಟಿ ನಿರ್ದೇಶನದಂತೆ ಎಂಟಿಪಿ ಕಾಯಿದೆ (Medical Termination of Pregnancy) ಪ್ರಕಾರ ಇಂದು ಬೆಳಗ್ಗೆ ವೈದ್ಯರು ಗರ್ಭಪಾತ ಮಾಡಿದ್ದಾರೆ.

ಕೊರೊನಾ ಸೋಂಕಿನ ಜೊತೆಗೆ ಗಂಟಲು ಅಲ್ಸರ್, ಹಿಮೋಗ್ಲೋಬಿನ್ ಕಡಿಮೆ ಮತ್ತು ಮೂತ್ರನಾಳದ ತೊಂದರೆಯಿಂದ ಬಾಗಲಕೋಟೆಯ ಗರ್ಭಿಣಿ ಬಳಲುತ್ತಿದ್ದರು. ಹೀಗಾಗಿ ಇಂದು ಬೆಳಗ್ಗೆ ಕಿಮ್ಸ್ ವೈದ್ಯರ ತಂಡ ಗರ್ಭಪಾತ ಮಾಡಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಮಹಿಳೆ ಚೇತರಿಸಿಕೊಳ್ಳುತ್ತಿದ್ದಾರೆ.

ಕಿಮ್ಸ್ ವೈದ್ಯರ ಈ ನಡೆಯಿಂದ ಈಗ ಕೊರೊನಾ ಸೋಂಕು ಅನುವಂಶಿಕವಾ? ಎಂಬ ಪ್ರಶ್ನೆ ಉದ್ಭವವಾಗಿದೆ.

ಇದನ್ನೂ ಓದಿ: ಕಾನೂನು ಪ್ರಕಾರ ಗರ್ಭಪಾತಕ್ಕೆ ಅವಕಾಶ ಇಲ್ಲ, ಆದ್ರೆ ಕೊರೊನಾ ಪ್ರಕಾರ?

Published On - 2:41 pm, Fri, 8 May 20