ಕೊಪ್ಪಳ: ಭಾರತದಲ್ಲಿ ಬೆನ್ನು ಬಿದ್ದ ಬೇತಾಳದಂತೆ ಕಾಡ್ತಿರೋ ಕೊರೊನಾ ಕಂಡ ಕಂಡವರನ್ನ ಕೊಂದು ಕೆಡವ್ತಿದೆ. ಸೋಂಕಿತರು ಸುಳಿದಾಡಿದ ಕಡೆ ಎಲ್ಲಾ ನಂಜು ದೇಹಕ್ಕೆ ವಕ್ಕರಿಸಿಕೊಳ್ತಿದೆ. ಎಷ್ಟೇ ಹೇಳಿದ್ರೂ ಜನರನ್ನು ನಿಯಂತ್ರಿಸುವುದು ಕಷ್ಟವಾಗಿದೆ. ಹಾಗಾಗಿ ವಿಭಿನ್ನ ಪ್ರಯತ್ನದ ಮೂಲಕ ಜನರನ್ನು ನಿಯಂತ್ರಿಸಲು ಪೊಲೀಸರ ಮುಂದಾಗಿದ್ದಾರೆ.
ನಗರದಾದ್ಯಂತ ಪೊಲೀಸರು ಯಮ, ಕೋಣದ ರೂಪಕ ಪ್ರದರ್ಶಿಸಿ ರಸ್ತೆಯಲ್ಲಿ ತಿರುಗಾಡುತ್ತಿದ್ದ ಜನರನ್ನು ವಾಹನ ಸವಾರರನ್ನು ಓಡಿಸಿದ್ದಾರೆ. ಮನೆಯಿಂದ ಹೊರಬರದಂತೆ ಹಾಗೂ ರಸ್ತೆಯಲ್ಲಿ ತಿರುಗಾಡದಂತೆ ಯಮನ ವೇಷಧಾರಿ ಎಚ್ಚರಿಕೆ ನೀಡಿದ್ದಾರೆ. DYSP ವೆಂಕಟಪ್ಪ ನಾಯಕ್, ನಗರ ಠಾಣೆ PI ಮೌನೇಶ್ವರ್ ಅವರು ವಿಭಿನ್ನ ರೀತಿಯಲ್ಲಿ ಜಾಗೃತಿ ಮೂಡಿಸಿದ್ದಾರೆ. ಮೆರವಣಿಗೆ ವೇಳೆ ಪೊಲೀಸರಿಗೆ ಸಾರ್ವಜನಿಕರು ಸನ್ಮಾನ ಮಾಡಿ ಹೂವಿನ ಮಳೆ ಸುರಿಸಿದ್ದಾರೆ.
Published On - 10:24 am, Sat, 18 April 20