ನೀವು ಶೋಭಕ್ಕನಿಗೆ ಸೀಮೆ ಎಣ್ಣೆ ಕಳುಹಿಸಿಕೊಡಿ.. ಮನೆಯಲ್ಲಿ ಅಡುಗೆ ಮಾಡಿಕೊಳ್ಳಲಿ -ಡಿ.ಕೆ ಶಿವಕುಮಾರ್ ಟಾಂಗ್

|

Updated on: Mar 02, 2021 | 4:59 PM

ಪಾಪ ಶೋಭಕ್ಕ ಪ್ರತಿಭಟನೆ ಮಾಡಿ ಮಾಡಿ ಸುಸ್ತಾಗಿದ್ದಾರೆ. ನೀವು ಶೋಭಕ್ಕನಿಗೆ ಈಗ ಸೀಮೆ ಎಣ್ಣೆ ಕಳುಹಿಸಿಕೊಡಿ. ಮನೆಯಲ್ಲಿ ಅಡುಗೆ ಮಾಡಿಕೊಳ್ಳಲಿ ಅಂತಾ ಈ ಡಿಕೆಶಿ ಸಂಸದೆ ಶೋಭಾ ಕರಂದ್ಲಾಜೆಗೆ ಟಾಂಗ್ ಕೊಟ್ಟರು.

ನೀವು ಶೋಭಕ್ಕನಿಗೆ ಸೀಮೆ ಎಣ್ಣೆ ಕಳುಹಿಸಿಕೊಡಿ.. ಮನೆಯಲ್ಲಿ ಅಡುಗೆ ಮಾಡಿಕೊಳ್ಳಲಿ -ಡಿ.ಕೆ ಶಿವಕುಮಾರ್ ಟಾಂಗ್
ಬೆಲೆ ಏರಿಕೆ ವಿರುದ್ಧ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಧರಣಿ
Follow us on

ಬೆಂಗಳೂರು: ಪೆಟ್ರೋಲ್, ಡಿಸೇಲ್​ ಬೆಲೆ ದಿನೇದಿನೆ ಏರಿಕೆ ಮಾಡುತ್ತಿದ್ದಾರೆ. ಈ ಸರ್ಕಾರಕ್ಕೆ ಮಾನಮರ್ಯಾದೆ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಲೆ ಏರಿಕೆ ವಿರುದ್ಧ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಧರಣಿ ನಡೆಸಿದ ವೇಳೆ ಡಿ.ಕೆ.ಶಿವಕುಮಾರ್​ ಮಾತನಾಡಿದರು. ಬೆಲೆ ಏರಿಕೆ ವಿರುದ್ಧ ಎಲ್ಲಾ ಕಡೆ ಹೋರಾಟ ಮಾಡುತ್ತೇವೆ ಎಂದು ಸಹ ಹೇಳಿದರು. ಇದು ಹೆಣ್ಣುಮಕ್ಕಳಿಗೆ ಹಾಗೂ ಎಲ್ಲರಿಗೂ ಅನ್ವಯಿಸುತ್ತೆ. ನನಗೂ‌ ಹೊಟ್ಟೆ ಹಸಿದಿತ್ತು. ಇಲ್ಲಿ ಬಂದು ನಾಲ್ಕು ಇಡ್ಲಿ ತಿಂದಿದ್ದೇನೆ ಎಂದು ಡಿ.ಕೆ.ಶಿವಕುಮಾರ್​ ನಗೆಚಟಾಕಿ ಹಾರಿಸಿದರು.

ಧರಣಿಯಲ್ಲಿ ತಿಂಡಿ ಸೇವಿಸಿದ ಡಿ.ಕೆ.ಶಿವಕುಮಾರ್​

ಗ್ಯಾಸ್ ಇಲ್ಲದೆ ಜನ ನೋವು ಅನುಭವಿಸುತ್ತಿದ್ದಾರೆ. ಪೆಟ್ರೋಲ್, ಡಿಸೇಲ್​ ಬೆಲೆ ಏರಿಸಿದ್ದಾರೆ. ಗ್ಯಾಸ್ ಸಿಲಿಂಡರ್ ಬೆಲೆ ₹300 ರಿಂದ ₹800ಕ್ಕೆ ಏರಿದೆ. ನಾನು ಎಷ್ಟಾದ್ರೂ ತಗೋತೀನಿ, ಜನಸಾಮಾನ್ಯರ ಪಾಡೇನು? ಎಂದು ಶಿವಕುಮಾರ್​ ಪ್ರಶ್ನಿಸಿದರು.

ತಿಂಡಿ ಸೇವಿಸಿದ ಬಳಿಕ ಮಹಿಳಾ ಕಾರ್ಯಕರ್ತರಿಗೆ ಥ್ಯಾಂಕ್ಸ್​ ಹೇಳಿದ ಶಿವಕುಮಾರ್​

ನಿಮ್ಮ, ನಮ್ಮ ಮನೆ ಬೆಳಗಲು ಹೆಣ್ಣುಮಕ್ಕಳು ಇರಬೇಕು. ಎಲ್ಲರ ಪರವಾಗಿ ನಿಂತಿದ್ದ ಶೋಭಕ್ಕ ಈಗ ಎಲ್ಲಿ ಹೋದರು? ಪಾಪ ಶೋಭಕ್ಕ ಪ್ರತಿಭಟನೆ ಮಾಡಿ ಮಾಡಿ ಸುಸ್ತಾಗಿದ್ದಾರೆ. ನೀವು ಶೋಭಕ್ಕನಿಗೆ ಈಗ ಸೀಮೆ ಎಣ್ಣೆ ಕಳುಹಿಸಿಕೊಡಿ. ಮನೆಯಲ್ಲಿ ಅಡುಗೆ ಮಾಡಿಕೊಳ್ಳಲಿ ಅಂತಾ  ಡಿಕೆಶಿ ಸಂಸದೆ ಶೋಭಾ ಕರಂದ್ಲಾಜೆಗೆ ಟಾಂಗ್ ಕೊಟ್ಟರು.

ಪ್ರತಿಭಟನೆಯಲ್ಲಿ ಸೈಕಲ್ ತುಳಿದ ಡಿಕೆಶಿ

ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಹೆಚ್ಚಳವಾಗುತ್ತಲಿದೆ. ಪ್ರತಿ ಮನೆಮನೆಗೆ ತೆರಳಿ ಅವರ ದುರಾಡಳಿತ ಬಗ್ಗೆ ತಿಳಿಸಿ. ಎಲ್ಲದಕ್ಕೂ ಮುಕ್ತಿ ಸಿಗಲು ಬಿಜೆಪಿಯನ್ನು ಕಿತ್ತೊಗೆಯಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಧರಣಿಯಲ್ಲಿ ಭಾಗಿಯಾದ ಕೆಪಿಸಿಸಿ ಅಧ್ಯಕ್ಷ

 ಕೆಪಿಸಿಸಿ ಅಧ್ಯಕ್ಷರ ಧರಣಿ ಪ್ರೋಗ್ರಾಂನಿಂದ ಸಿದ್ದರಾಮಯ್ಯ ದೂರ, ದೂರ 
ಇತ್ತ, ಮೈಸೂರು ಮೇಯರ್ ಎಲೆಕ್ಷನ್‌ ಬಳಿಕ ಪಕ್ಷದಲ್ಲಿ ಅಸಮಾಧಾನ ಸ್ಫೋಟಗೊಂಡಿರುವ ಹಿನ್ನೆಲೆಯಲ್ಲಿ ‘ಕೈ’ ಧರಣಿಯಿಂದ ಸಿದ್ದರಾಮಯ್ಯ ಮತ್ತು ಅವರು ಬೆಂಬಲಿಗರು ದೂರ ಉಳಿದರು. ಅಂದ ಹಾಗೆ, ಪ್ರತಿಭಟನೆ ನೇತೃತ್ವವನ್ನು ಡಿಕೆಶಿ ಹಾಗೂ ಸಿದ್ದರಾಮಯ್ಯ ವಹಿಸಬೇಕಿತ್ತು. ಆದರೆ, ಧರಣಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಭಾಗಿಯಾದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ದೂರ ಉಳಿದರು. ಸಿದ್ದರಾಮಯ್ಯ ಬೆಂಗಳೂರಿನ ನಿವಾಸದಲ್ಲೇ ಇದ್ದರೂ ಧರಣಿಯಲ್ಲಿ ಭಾಗಿ ಇಲ್ಲ. ಪ್ರತಿಭಟನೆಗೆ ತೆರಳದೆ ಪರೋಕ್ಷವಾಗಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: BBMP ಭ್ರಷ್ಟ ಅಧಿಕಾರಿ ದೇವೇಂದ್ರಪ್ಪ ಮನೆ ಮೇಲೆ ಮತ್ತೆ ದಾಳಿ.. ಆಪ್ತ ಶ್ರೀನಿವಾಸ್ ಎಸಿಬಿ ವಶಕ್ಕೆ