ಚುನಾವಣೆಯ ಸಮಯದಲ್ಲಿ ಬಳಸುವ ಹ್ಯಾಶ್ಟ್ಯಾಗ್ಗಳನ್ನು ರಾಜಕೀಯ ಜಾಹಿರಾತುಗಳಾಗಿ ಪರಿಗಣಿಸಬೇಕು: ವರದಿ
ಜನವರಿಯಲ್ಲಿ ಚುನಾವಣಾ ಆಯೋಗಕ್ಕೆ ಮಧ್ಯಂತರ ವರದಿ ಸಲ್ಲಿಸಿರುವ ಸಮಿತಿಯು ಪ್ರತಿ ಜಿಲ್ಲೆ ಚುನಾವಣಾಧಿಕಾರಿಯ ಕಚೇರಿಯಲ್ಲಿ ಪ್ರತ್ಯೇಕ ಮಾಧ್ಯಮ ಕಣ್ಗಾವಲು ಕೋಶವನ್ನು ಸ್ಥಾಪಿಸುವ ಸಲಹೆಯನ್ನೂ ನೀಡಿದೆ.
ನವದೆಹಲಿ: ಕಳೆದ ವರ್ಷ ಭಾರತದ ಚುನಾವಣಾ ಆಯೋಗ ರಚಿಸಿದ್ದ ತಜ್ಞರ ಸಮಿತಿಯೊಂದು ಚುನಾವಣೆ ನಡೆಯುತ್ತಿರುವ ಸಮಯದಲ್ಲಿ ಟ್ವಿಟ್ಟರ್ ಖಾತೆಗಳಲ್ಲಿ ಬಳಸಲಾಗುವ ಹ್ಯಾಶ್ಟ್ಯಾಗ್ ಟ್ರೆಂಡ್ಗಳನ್ನು ರಾಜಕೀಯ ಜಾಹಿರಾತುಗಳೆಂದು ಪರಿಗಣಿಸಿ ಅವುಗಳನ್ನು ಮಾಧ್ಯಮ ಕಣ್ಗಾವಲು ಮತ್ತು ಮಾಧ್ಯಮ ಪ್ರಮಾಣೀಕರಣ ಸಮಿತಿಯ ಸುಪರ್ದಿಗೆ ಒಳಪಡಿಸಬೇಕೆಂದು ಶಿಫಾರಸ್ಸು ಮಾಡಿದೆ.ಜನವರಿಯಲ್ಲಿ ಚುನಾವಣಾ ಆಯೋಗಕ್ಕೆ ಮಧ್ಯಂತರ ವರದಿ ಸಲ್ಲಿಸಿರುವ ಸಮಿತಿಯು ಪ್ರತಿ ಜಿಲ್ಲೆ ಚುನಾವಣಾಧಿಕಾರಿಯ ಕಚೇರಿಯಲ್ಲಿ (District Election Officers – DEO) ಪ್ರತ್ಯೇಕ ಮಾಧ್ಯಮ ಕಣ್ಗಾವಲು ಕೋಶವನ್ನು ಸ್ಥಾಪಿಸುವ ಸಲಹೆಯನ್ನೂ ನೀಡಿದ್ದು ಇದರಿಂದ ಚುನಾವಣೆಗಳ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ರಾಜಕೀಯ ಜಾಹಿರಾತುಗಳನ್ನು ಪತ್ತೆಹಚ್ಚಬಹುದೆಂದು ಹೇಳಿದೆ.
ಫೆಬ್ರುವರಿಯಲ್ಲಿ ಭಾರತವು ತನ್ನ ಆದೇಶಗಳನ್ನು ಕಡೆಗಣಿಸುತ್ತಿರುವುದಕ್ಕೆ ಟ್ಟಿಟ್ಟರ್ ಸಂಸ್ಥೆಗೆ ಎಚ್ಚರಿಕೆ ನೀಡಿ ತಾನು ಹೊರಡಿಸುವ ಅದೇಶಗಳನ್ನು ಚಾಚೂತಪ್ಪದೆ ಪಾಸಲಿಬೇಕೆಂದು ತಾಕೀತು ಮಾಡಿತ್ತು.
ಆದಲ್ಲದೆ ಭಾರತ ಸರಕಾರವೂ ಭಾರತದಲ್ಲಿರುವ ಟ್ವಿಟ್ಟರ್ ಸಂಸ್ಥೆಯ ಪ್ರಮುಖ ಅಧಿಖಾರಿಗಳನ್ನು ಬಂಧಿಸುವ ಬಗ್ಗೆ ಎಚ್ಚರಿಕೆ ನೀಡಿ ಕಿಚ್ಚು ಹೊತ್ತಿಸುವ ಕಂಟೆಂಟ್ ಹರಿಬಿಡುವ ಟ್ವಿಟ್ಟರ್ ಖಾತೆದಾರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಹೊರಡಿಸಿರುವ ಆದೇಶದಲ್ಲಿ ಚೌಕಾಶಿಯ ಪ್ರಮೇಯವೇ ಉದ್ಭವಿಸುವುದಿಲ್ಲ ಎಂದು ಹೇಳಿತ್ತು. ಐಟಿ ಕಾಯ್ದೆಯ ಸೆಕ್ಷನ್ 69ರ ಆಡಿಯಲ್ಲಿ ಈ ಹಿಂದೆ ತಾನು ಜಾರಿಗೊಳಿಸಿದ ಸೂಚನೆಯನ್ನು ಪಾಲಿಸಲು ಟ್ಟಿಟ್ಟರ್ ಸಂಸ್ಥೆಯು ಹಿಂದೇಟು ಹಾಕುತ್ತಿರುವುದು ತನ್ನ ‘ತಾಳ್ಮೆಯನ್ನು ಪರೀಕ್ಷೆಗೆ ಒಡ್ಡಿದಂತಾಗಿದೆ’ ಅಂತ ಸರ್ಕಾರ ಹೇಳಿತ್ತು.
ಸಮಿತಿ ಸಲ್ಲಿಸಿರುವ ವರದಿಯ ಪ್ರಕಾರ, ಅಮೆರಿಕಾದ ಅತಿದೊಡ್ಡ ಮೈಕ್ರೊ-ಬ್ಲಾಗಿಂಗ್ ಸಂಸ್ಥೆಯು ಭಾರತ ಸರ್ಕಾರದ ಆದೇಶವನ್ನು ಭಾಗಶಃ ಅನುಸರಿಸಿ ಅದು ಸಲ್ಲಿಸಿದ ಪಟ್ಟಿಯಲ್ಲಿ ಕೇವಲ ಆರ್ಧದಷ್ಟು ಮಾತ್ರ ಖಾತೆಗಳನ್ನು ಬ್ಲಾಕ್ ಮಾಡಿದ್ದು, ತಾನು ಸೇವೆ ಒದಗಿಸುತ್ತಿರುವ ಜನರಿಂದ ತನಗೆ ‘ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿಗೆ’ ಧಕ್ಕೆಯುಂಟಾಗುತ್ತಿದೆ ಅಂತ ಕೋರ್ಟುಗಳ ಮೊರೆ ಹೋಗಬಹುದು.
ಭಾರತ ಸರ್ಕಾರವು ಜಾರಿಗೊಳಿಸಿರುವ ಮೂರು ಹೊಸ ಕೃಷಿ ವಿಧೇಯಕಗಳ ವಿರುದ್ಧ ರೈತರು ನಡೆಸುತ್ತಿರುವ ರಾಷ್ಟ್ರವ್ಯಾಪಿ ಚಳುವಳಿ ಕುರಿತು 1,100 ಕ್ಕಿಂತ ಹೆಚ್ಚಿನ ಖಾತೆಗಳು ತಪ್ಪು ಮಾಹಿತಿಯನ್ನು ಹಬ್ಬುತ್ತಿವೆ ಎಂದು ಹೇಳಿ ಆ ಖಾತೆಗಳನ್ನು ತೆಗೆದು ಹಾಕಬೇಕೆಂದು ಟ್ವಿಟ್ಟರ್ಗೆ ಆದೇಶ ನೀಡಿತ್ತು.
‘ಟ್ವಿಟ್ಟರ್ ತನ್ನದೇ ಅದ ನಿಯಮಾವಳಿ ಮತ್ತು ಮಾರ್ಗಸೂಚಿಗಳನ್ನು ರೂಪಿಸಿಕೊಳ್ಳಲು ಮುಕ್ತವಾಗಿದೆ. ಆದರೆ, ಭಾರತದ ಸಂಸತ್ತು ಜಾರಿಗೊಳಿಸಿರುವ ಕಾಯ್ದೆಗಳನ್ನು ಟ್ವಿಟ್ಟರ್ ಸಂಸ್ಥೆಯು ತನ್ನ ಸ್ವಂತ ನಿಯಮ ಮತ್ತು ಮಾರ್ಗಸೂಚಿಗಳ ಹೊರತಾಗಿಯೂ ಪಾಲಿಸಲೇಬೇಕು,’ ಅಂತಲೂ ಭಾರತ ಸರ್ಕಾರ ಹೇಳಿತ್ತು.
ಇದನ್ನೂ ಓದಿ: ಭೂಪಟದಲ್ಲಿ ಪ್ರಮಾದ, ಭಾರತದ ಕ್ಷಮೆ ಯಾಚಿಸಿದ ಟ್ವಿಟ್ಟರ್ | Twitter apologises for showing part of Ladakh in China
Published On - 4:43 pm, Tue, 2 March 21