ಚಿಕ್ಕಬಳ್ಳಾಪುರ: ವಿದ್ಯುತ್ ಲೈನ್ ದುರಸ್ತಿ ಮಾಡುವ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿದ ಪರಿಣಾಮದಿಂದಾಗಿ ಕಂಬದ ಮೇಲೆಯೇ ಪವರ್ಮನ್ ಸಾವನ್ನಪ್ಪಿರುವ ಘಟನೆ ಗೌರಿಬಿದನೂರು ತಾಲ್ಲೂಕಿನ ವಾಟದಹೊಸಹಳ್ಳಿ ಗ್ರಾಮದ ಬಳಿ ನಡೆದಿದೆ.
KPTCL ಲೈನ್ ಮ್ಯಾನ್ ನಾಗರಾಜ್ ಸ್ಥಳದಲ್ಲಿ ಸಾವನ್ನಪ್ಪಿದ ದುರ್ದೈವಿಯಾಗಿದ್ದಾರೆ. ಹೈಟೆನ್ಷನ್ ವೈರ್ ದುರಸ್ತಿ ಮಾಡಲು KPTCL ಸಿಬ್ಬಂದಿ ನಾಗರಾಜ್ ಕಂಬವೇರಿದ್ದಾರೆ. ಈ ವೇಳೆ ಆಕಸ್ಮಿಕವಾಗಿ ಕಂಬದಲ್ಲಿ ವಿದ್ಯುತ್ ಪ್ರವಹಿಸಿದ್ದರಿಂದ ಲೈನ್‌ಮನ್ ನಾಗರಾಜ್ ಕಂಬದ ಮೇಲೆಯೇ ಸಾವನ್ನಪ್ಪಿದ್ದಾರೆ. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಲೈನ್ ರಿಪೇರಿ ವೇಳೆ ಪವರ್ On ಮಾಡಿಸಿದ ಅಧಿಕಾರಿಗಳು, ಪವರ್ಮನ್ಗೆ shock