ಬೆಂಗಳೂರು/ಬೆಳಗಾವಿ: ಮಹಾಜನ್ ಆಯೋಗದ ವರದಿ ತಿರಸ್ಕರಿಸಿ 2004ರಲ್ಲಿ ಅಂದಿನ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಇದೀಗ 18 ವರ್ಷಗಳ ನಂತರ ಬೆಳಗಾವಿ ಗಡಿ ವಿವಾದದ ಬಗ್ಗೆ ವಿಚಾರಣೆಗೆ ದಿನಾಂಕ ನಿಗದಿಯಾಗಿದೆ. ಇದೇ ನವೆಂಬರ್ 23ರಂದು ಸುಪ್ರೀಂಕೋರ್ಟ್ನಲ್ಲಿ ಅಂತಿಮ ವಿಚಾರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಕರ್ನಾಟಕದ ವಿರುದ್ಧ ತೊಡೆತಟ್ಟಿ ನಿಲ್ಲಲು ಸಜ್ಜಾಗಿದ್ದು, ಗಡಿಭಾಗದ ಸಮಸ್ಯೆ ಪರಿಹಾರಕ್ಕಾಗಿ ಇಬ್ಬರು ಸಚಿವರ ಸಮಿತಿ ನೇಮಕ ಮಾಡಿದೆ.
ಅಂತಿಮ ವಿಚಾರಣೆ ಹಿನ್ನೆಲೆ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಗಡಿವಿವಾದ ಕಾನೂನು ಹೋರಾಟ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ಬಳಿಕ ಮಹಾರಾಷ್ಟ್ರ ಸರ್ಕಾರ ಕೈಗೊಳ್ಳಬೇಕಾದ ನಡೆ ಬಗ್ಗೆ ಮಹತ್ವದ ಚರ್ಚೆ ಆಗಿದೆ.
ಅಲ್ಲದೇ ಸಿಎಂ ಶಿಂಧೆ ಗಡಿಭಾಗದ ಸಮಸ್ಯೆ ಪರಿಹಾರಕ್ಕಾಗಿ ಮಹಾರಾಷ್ಟ್ರದ ಉನ್ನತ ಶಿಕ್ಷಣ ಸಚಿವ ಚಂದ್ರಕಾಂತ ಪಾಟೀಲ್ ಹಾಗೂ ಅಬಕಾರಿ ಸಚಿವ ಶಂಭುರಾಜೆ ದೇಸಾಯಿ ಸಮಿತಿ ರಚಿಸಿದ್ದಾರೆ. ಇನ್ನು ಕೋರ್ಟ್ನಲ್ಲಿ ಪ್ರಬಲ ವಾದ ಮಂಡಿಸುವಂತೆ ಸರ್ವಪಕ್ಷಗಳ ಆಗ್ರಹಿಸಿವೆ. ಅಲ್ಲದೇ, ಪ್ರಧಾನಿ ಭೇಟಿಗೆ ಸರ್ವಪಕ್ಷ ನಿಯೋಗ ಕೊಂಡೊಯ್ಯುವಂತೆ ಒತ್ತಾಯಿಸಿವೆ.
ಕನ್ನಡಿಗರು ಮರಾಠಿಗರ ಗುದ್ದಾಟ, ಗಡಿ ವಿವಾದ; ಡಿಸೆಂಬರ್ 13 ರಿಂದ ಏನೇನಾಯ್ತು? ಇಲ್ಲಿದೆ ಸಂಪೂರ್ಣ ವಿವರ
ಕರ್ನಾಟಕ ಸರ್ಕಾರ ಸೈಲೆಂಟ್
ಬೆಳಗಾವಿ ಗಡಿಭಾಗವನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಲು ಕಾನೂನಾತ್ಮಕ ಹೋರಾಟಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ, ಇತ್ತ ಕರ್ನಾಟಕ ಸರ್ಕಾರ ಯಾವುದೇ ಸಭೆ ಮಾಡದೇ ಗಪ್ ಚುಪ್ ಆಗಿ ಕುಳಿಕುಕೊಂಡಿದೆ. ಅಂತಿಮ ವಿಚಾರಣೆ ಇರುವುದರಿಂದ ಕೋರ್ಟ್ ನೀಡುವ ಆದೇಶ ಬಳಿಕ ಮುಂದೆ ಯಾವ ಹೆಜ್ಜೆ ಇಡಬೇಕೆನ್ನುವ ತೀರ್ಮಾನ ತೆಗೆದುಕೊಳ್ಳಲು ಬೊಮ್ಮಾಯಿ ಸರ್ಕಾರ ಕನಿಷ್ಠ ಪಕ್ಷ ಒಂದು ಸರ್ವ ಪಕ್ಷಗಳ ಸಭೆ ಮಾಡಬೇಕಿತ್ತು. ಆದ್ರೆ, ಬಿಜೆಪಿ ಸರ್ಕಾರ ಅದ್ಯಾವುದನ್ನು ಮಾಡದೇ ಕೇವಲ ಮುಂದಿನ ಚುನಾವಣೆಯ ತಯಾರಿಯಲ್ಲಿ ಬ್ಯುಸಿಯಾಗಿದೆ. ಇದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಮಹಾರಾಷ್ಟ್ರದಲ್ಲಿ ಗಡಿವಿವಾದ ಸಂಬಂಧ ಹೈ ಪವರ್ ಮೀಟಿಂಗ್ ನಡೆಯುತ್ತಿದ್ದರೂ ಕರ್ನಾಟಕದಲ್ಲಿ ಯಾವುದೇ ಹೈ ಪವರ್, ಲೋ ಪವರ್ ಕಮಿಟಿಯೂ ಇಲ್ಲದೆ ಸೈಲೆಂಟ್ ಆಗಿದೆ. ಇದರಿಂದ ಕನ್ನಡ ಪರ ಹೋರಾಟಗಾರ ಅಶೋಕ ಚಂದರಗಿ ರಾಜ್ಯ ಸರ್ಕಾರ ವಿರುದ್ಧ ಹರಿಹಾಯ್ದಿದ್ದಾರೆ.
ರಾಜ್ಯ ಸರ್ಕಾರ ನಿಧಾನವೇ ಪ್ರದಾನ ಎಂಬ ರೀತಿಯ ನಡವಳಿಕೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ರಾಜ್ಯ ಸರ್ಕಾರ ಈ ವಿಚಾರದಲ್ಲಿ ಏನು ನಿರ್ಣಯ ಕೈಗೊಳ್ಳುತ್ತೆ ಕಾದು ನೋಡಬೇಕು.
Published On - 10:37 pm, Mon, 21 November 22