ಸಿಲಿಕಾನ್ ಸಿಟಿಯ ಖಾಕಿ ಮೇಲೆ ಬಿತ್ತು ಮಹಾಮಾರಿ ಕಣ್ಣು, ಮತ್ತೊಂದು ಠಾಣೆ ಸೀಲ್​ಡೌನ್

ಬೆಂಗಳೂರು: ಕೊರೊನಾ ಮಹಾಮಾರಿಯ ರೌದ್ರನರ್ತನ ದಿನೇ ದಿನೆ ಹೆಚ್ಚುತ್ತಲೇ ಇದೆ. ಮೊದಮೊದಲು ಜನಸಾಮಾನ್ಯರನ್ನು ಕಾಡ್ತಿದ್ದ ವೈರಸ್ ಇದೀಗ ನಗರದ ಖಾಕಿಗೂ ವಕ್ಕರಿಸುತ್ತಿದೆ. ಇದೀಗ ಮಲ್ಲೇಶ್ವರಂ ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಎಂದು ವರದಿಯಾಗಿದೆ. ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ 36 ವರ್ಷದ ಕಾನ್ಸ್​ಟೇಬಲ್ ಮತ್ತು 35 ವರ್ಷದ ಮಹಿಳಾ ಹೋಂ ಗಾರ್ಡ್​ಗೆ ಸೋಂಕು ದೃಢವಾಗಿದೆ. ಹಾಗಾಗಿ, ಠಾಣಿಯನ್ನು ತಾತ್ಕಾಲಿಕವಾಗಿ ಸೀಲ್​ಡೌನ್ ಮಾಡಲಾಗಿದೆ.

ಸಿಲಿಕಾನ್ ಸಿಟಿಯ ಖಾಕಿ ಮೇಲೆ ಬಿತ್ತು ಮಹಾಮಾರಿ ಕಣ್ಣು, ಮತ್ತೊಂದು ಠಾಣೆ ಸೀಲ್​ಡೌನ್

Updated on: Jul 05, 2020 | 11:50 AM

ಬೆಂಗಳೂರು: ಕೊರೊನಾ ಮಹಾಮಾರಿಯ ರೌದ್ರನರ್ತನ ದಿನೇ ದಿನೆ ಹೆಚ್ಚುತ್ತಲೇ ಇದೆ. ಮೊದಮೊದಲು ಜನಸಾಮಾನ್ಯರನ್ನು ಕಾಡ್ತಿದ್ದ ವೈರಸ್ ಇದೀಗ ನಗರದ ಖಾಕಿಗೂ ವಕ್ಕರಿಸುತ್ತಿದೆ. ಇದೀಗ ಮಲ್ಲೇಶ್ವರಂ ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಎಂದು ವರದಿಯಾಗಿದೆ.

ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ 36 ವರ್ಷದ ಕಾನ್ಸ್​ಟೇಬಲ್ ಮತ್ತು 35 ವರ್ಷದ ಮಹಿಳಾ ಹೋಂ ಗಾರ್ಡ್​ಗೆ ಸೋಂಕು ದೃಢವಾಗಿದೆ. ಹಾಗಾಗಿ, ಠಾಣಿಯನ್ನು ತಾತ್ಕಾಲಿಕವಾಗಿ ಸೀಲ್​ಡೌನ್ ಮಾಡಲಾಗಿದೆ.