ಮಮತಾ ಬ್ಯಾನರ್ಜಿಗೆ ಗಾಯ; ನೆಟ್ಟಿಗರು ಪ್ರತಿಕ್ರಿಯಿಸಿದ ರೀತಿ ನೋಡಿ

| Updated By: Praveen Sahu

Updated on: Mar 11, 2021 | 4:24 PM

Mamata Banerjee Attacked: ಮಮತಾ ಬ್ಯಾನರ್ಜಿ ಅವರಿಗೆ ಉಂಟಾದ ಗಾಯದ ಕುರಿತು ನೆಟ್ಟಿಗರು ತಮ್ಮದೇ ದೃಷ್ಟಿಕೋನಗಳಲ್ಲಿ ವಿಮರ್ಶಿಸಿದ್ದಾರೆ, ಮೀಮ್​ಗಳನ್ನು ಸೃಷ್ಟಿಸಿ ಟ್ವಿಟರ್​ನಲ್ಲಿ ಹರಿಬಿಡುತ್ತಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಗಾಯಗೊಂಡಿದ್ದರೂ ಅವರ ಕುರಿತು ವ್ಯಂಗ್ಯ ಮಾಡುತ್ತಿದ್ದಾರೆ ಟ್ವಿಟ್ಟಿಗರು.

ಮಮತಾ ಬ್ಯಾನರ್ಜಿಗೆ ಗಾಯ; ನೆಟ್ಟಿಗರು ಪ್ರತಿಕ್ರಿಯಿಸಿದ ರೀತಿ ನೋಡಿ
ಆಸ್ಪತ್ರೆಯಲ್ಲಿ ಮಮತಾ ಬ್ಯಾನರ್ಜಿ ( ಕೃಪೆ: ಅಭಿಷೇಕ್ ಬ್ಯಾನರ್ಜಿ ಟ್ವಿಟರ್ ಖಾತೆ)
Follow us on

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ನಂದಿಗ್ರಾಮದಲ್ಲಿ ನಾಮಪತ್ರ ಸಲ್ಲಿಸಿದ ನಂತರ ತನ್ನ ಮೇಲೆ ಹಲ್ಲೆ ನಡೆದಿರುವುದಾಗಿ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಆರೋಪಿಸಿದ್ದರು. ನಾಲ್ಕೈದು ಮಂದಿ ನನ್ನನ್ನು ತಳ್ಳಿ ಹಾಕಿದರು ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದರು. ಈ ಹೊತ್ತಲ್ಲಿ ಅಲ್ಲಿ ಸ್ಥಳೀಯ ಪೊಲೀಸರಾಗಲೀ, ಪೊಲೀಸ್ ಅಧಿಕಾರಿಗಳಾಗಲೀ ಇರಲಿಲ್ಲ. ಅಪರಿಚಿತ ದುಷ್ಕರ್ಮಿಗಳು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದಿದ್ದರು ಬ್ಯಾನರ್ಜಿ. ಬ್ಯಾನರ್ಜಿ ಅವರಿಗೆ ಝೆಡ್ ಪ್ಲಸ್ ಭದ್ರತೆ ಇರುವಾಗ ಈ ಘಟನೆ ಹೇಗೆ ಸಂಭವಿಸಿತು ಎಂಬುದು ಪ್ರಶ್ನೆಯಾಗಿಯೇ ಉಳಿದಿತ್ತು. ಈ ಘಟನೆ ಕುರಿತು ನೆಟ್ಟಿಗರು ವಿಧವಿಧವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ದೇಶದ ವಿವಿಧ ನಾಯಕರು ಈ ಘಟನೆಗೆ ಖೇದ ವ್ಯಕ್ತಪಡಿಸಿ ಹೇಳಿಕೆ ನೀಡಿದ್ದರೂ ಸಹ, ಟ್ವಿಟ್ಟಿಗರು ಮಮತಾ ಬ್ಯಾನರ್ಜಿ ಅವರಿಗೆ ಉಂಟಾದ ಹಲ್ಲೆಯನ್ನು ತಮ್ಮದೇ ದೃಷ್ಟಿಕೋನಗಳಲ್ಲಿ ವಿಮರ್ಶಿಸಿದ್ದಾರೆ, ಮೀಮ್​ಗಳನ್ನು ಸಹ ಸೃಷ್ಟಿಸಿ ಟ್ವಿಟರ್​ನಲ್ಲಿ ಹರಿಬಿಡುತ್ತಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಗಾಯಗೊಂಡಿದ್ದರೂ ಅವರ ಕುರಿತು ವ್ಯಂಗ್ಯ ಮಾಡುತ್ತಿದ್ದಾರೆ ಟ್ವಿಟ್ಟಿಗರು.

ಮಮತಾ ಬ್ಯಾನರ್ಜಿ ಅವರು ಆಸ್ಪತ್ರೆ ಸೇರಲು ಕಾರಣವಾದ ಘಟನೆಯನ್ನು ಪ್ರತ್ಯಕ್ಷವಾಗಿ ವೀಕ್ಷಿಸುವುದಾಗಿ ಹೇಳಿಕೊಂಡಿರುವ ಕೆಲವರು ಎಎನ್​ಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಹೇಳಿಕೆ ಪ್ರಕಾರ ಘಟನೆ ನಡೆಯುವಾಗ ಯಾರೊಬ್ಬ ಕಿಡಿಗೇಡಿಯೂ ಸ್ಥಳದಲ್ಲಿ ಇರಲಿಲ್ಲ. ಯಾರೂ ಸಹ ಮಮತಾ ಬ್ಯಾನರ್ಜಿ ಅವರನ್ನು ತಳ್ಳಲಿಲ್ಲ ಎಂದು ಚಿತ್ತರಂಜನ್ ದಾಸ್ ಎಂಬ ಪ್ರತ್ಯಕ್ಷದರ್ಶಿ ವಿವರಿಸಿದ್ದಾರೆ.

ಇನ್ನೋರ್ವ ಪ್ರತ್ಯಕ್ಷದರ್ಶಿ ಸುಮನ್ ಮೇಟಿ ಸಹ ಪ್ರತಿಕ್ರಿಯೆ ನೀಡಿದ್ದು, ‘ಮಮತಾ ಬ್ಯಾನರ್ಜಿ ಅವರ ಕಾರು ನಿಧಾನವಾಗಿ ಚಲಿಸುತ್ತಿತ್ತು. ಯಾರೂ ಸಹ ಮಮತಾ ಬ್ಯಾನರ್ಜಿ ಅವರನ್ನು ತಳ್ಳಲಿಲ್ಲ. ಆದರೂ, ಈ ಘಟನೆ ನಡೆದಿದೆ’ ಎಂದು ಹೇಳಿದ್ದಾರೆ.

ಮಮತಾ ಬ್ಯಾನರ್ಜಿ ಅವರ ಮೇಲೆ ಹಲ್ಲೆ ನಡೆದು ಅವರು ಆಸ್ಪತ್ರೆ ಸೇರಿರುವುದು ದೀದಿಯ ಚುನಾವಣಾ ಪ್ರಚಾರದ ಮುಂದಾಳತ್ವ ವಹಿಸಿರುವ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ಬರೆದ ಸ್ಕ್ರಿಪ್ಟ್ ಎಂದು ವ್ಯಾಖ್ಯಾನಿಸಿ ಹಲವು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ  ಮಮತಾ ಬ್ಯಾನರ್ಜಿಯ ಮೊಣಕಾಲು, ಬಲ ಭುಜ ಮತ್ತು ಕುತ್ತಿಗೆಗೆ ಗಾಯಗಳಾಗಿವೆ: ವೈದ್ಯರ ಹೇಳಿಕೆ

Mamata Banerjee Attacked: ಮಮತಾ ಬ್ಯಾನರ್ಜಿಯನ್ನು ಭೇಟಿ ಮಾಡಲು ಬಂದ ಬಿಜೆಪಿ ನಾಯಕರಿಗೆ ಅನುಮತಿ ನಿರಾಕರಿಸಿದ ವೈದ್ಯರು

Published On - 3:44 pm, Thu, 11 March 21