ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಚಂಡಮಾರುತ ಯಾಸ್ನಿಂದ ಆಗಿರುವ ಹಾನಿಯನ್ನು ಸಮೀಕ್ಷೆ ನಡೆಸಲು ಶುಕ್ರವಾರದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಲೈಕುಂಡಾಗೆ ಆಗಮಿಸಿದ್ದಾಗ ಚಂಡಮಾರುತದಿಂದ ರಾಜ್ಯಕ್ಕೆ ಆಗಿರುವ ಹಾನಿ ಕುರಿತಾದ ಒಂದು ಪ್ರಾಥಮಿಕ ವರದಿಯನ್ನು ಸಲ್ಲಿಸಿದರು.ಪ್ರಧಾನಿ ಮೋದಿಯವರು ಇದಕ್ಕೆ ಮೊದಲು ಒಡಿಷಾದಲ್ಲಿ ಚಂಡಮಾರುತ-ನಂತರದ ಸ್ಥಿತಿಯ ಸಮೀಕ್ಷೆ ನಡೆಸಿ ಪಶ್ಚಿಮ ಬಂಗಾಳಕ್ಕೆ ಆಗಮಿಸಿದ್ದರು. ಈ ರಾಜ್ಯದ ಕರಾವಳಿ ಜಿಲ್ಲೆಗಳು ತೀವ್ರ ಸ್ವರೂಪದ ಹಾನಿಗೊಳಗಾಗಿವೆ.
ಲಭ್ಯವಿರುವ ಮಾಹಿತಿ ಪ್ರಕಾರ, ಮಮತಾ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿ ಅವರೊಂದಿಗೆ ಪ್ರಧಾನಿಗಳು ಸಭೆ ನಡೆಸುತ್ತಿದ್ದ ಸ್ಥಳದಲ್ಲೇ ಇದ್ದರೂ ಅರ್ಧ ಗಂಟೆ ತಡವಾಗಿ ಬಂದರು. ಸಭೆಗೆ ಆಗಮಿಸಿದ ಕೂಡಲೇ ಅವರು ಚಂಡಮಾರುತದಿಂದ ರಾಜ್ಯಕ್ಕೆ ಅಗಿರುವ ಹಾನಿಯ ಬಗ್ಗೆ ಪೇಪರ್ಗಳನ್ನು ಪ್ರಧಾನ ಮಂತ್ರಿಯವರಿಗೆ ನೀಡಿ, ತನಗೆ ಬೇರೆ ಮೀಟಿಂಗ್ಗಳನ್ನು ಅಟೆಂಡ್ ಮಾಡಬೇಕಿದೆ ಎಂದು ಹೇಳಿ ಅಲ್ಲಿಂದ ನಿರ್ಗಮಿಸಿದರು.
ಪ್ರಧಾನಿ ನರೇಂದರ ಮೋದಿ ಅವರೊಂದಿಗೆ ಮಮತಾ ನಡೆದುಕೊಂಡಿರುವ ರೀತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಖಂಡಿಸಲಗುಗತ್ತಿದೆ. ಅವರ ವರ್ತನೆ ಪ್ರಧಾನಿಯವರ ಘನತೆಗೆ ಕುಂದು ತರುವಂಥಾಗಿದೆ ಎಂದು ಮಮತಾರನ್ನು ಜರಿಯಲಾಗುತ್ತಿದೆ.
ಪತ್ರಕರ್ತೆ ಮೇಘಾ ಪ್ರಸಾದ್ ಅವರು ತಮ್ಮ ಟ್ವೀಟ್ನಲ್ಲಿ, ಪ್ರಧಾನಿಗಳು ಸಭೆಯಲ್ಲಿ ಮಮತಾ ಅವರಿಗೆ ಕಾಯುತ್ತಿರವ ಚಿತ್ರವನ್ನು ಹಾಕಿ, ‘ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಮತಾ ಬ್ಯಾನರ್ಜಿ ಮತ್ತು ಅವರ ಅಧಿಕಾರಿಗಳ ತಂಡವನ್ನು ಅರ್ಧಗಂಟೆ ಕಾಲ ಕಾಯ್ದರು. ಇದು ಅಭೂತಪೂರ್ವವಾದದ್ದು. ಪ್ರಧಾನ ಮಂತ್ರಿಗಳ ಕಚೇರಿಯ ಘನತೆಯನ್ನು ಕಡಿಮೆ ಮಾಡುವ ಪ್ರಯತ್ನವಿದು. ಎಂಥ ದುರಹಂಕಾರ!‘ ಅಂತ ಟ್ವೀಟ್ ಮಾಡಿದ್ದಾರೆ.
These empty chairs were reserved for #MamtaBanerjee , her home secy, the WB chief secy but she did not let anyone attend the meeting. The presentation was loaded on the screen but no one to present it before the PM. #CycloneYaas #NarendraModi #MamtaBanerjee pic.twitter.com/YvrMGMdlpt
— Megha Prasad (@MeghaSPrasad) May 28, 2021
ಮತ್ತೊಂದು ಟ್ವೀಟ್ನಲ್ಲಿ ಮೇಘಾ ಅವರು, ‘ಮಮತಾ ಬ್ಯಾನರ್ಜಿ ಪ್ರಧಾನ ಮಂತ್ರಿಗಳ ಕಚೇರಿಗೆ ಅಗೌರವ ತೋರಿದರು ಮತ್ತು ಕಲೈಕುಂದಾ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಅವರನ್ನು 30 ನಿಮಿಷಗಳ ಕಾಲ ಕಾಯುವಂತೆ ಮಾಡಿದರು. ಇತಿಹಾಸದಲ್ಲಿ ಇದು ಹಿಂದೆ ಯಾವತ್ತೂ ನಡೆದಿರಲಿಲ್ಲ. ಮಮತಾ ಅವರ ವರ್ತನೆ ಶಿಷ್ಟಚಾರ ಮತ್ತು ಒಕ್ಕೂಟ ವ್ಯವಸ್ಥೆಗೆ ಬಿದ್ದಿರುವ ಭಾರೀ ದೊಡ್ಡ ಪೆಟ್ಟು,’ ಎಂದು ಹೇಳಿದ್ದಾರೆ.
ಭಾರತೀಯ ಜನತಾ ಪಕ್ಷದ ವಕ್ತಾರೆ ಸಂಜು ವರ್ಮ ತಮ್ಮ ಟ್ವೀಟ್ನಲ್ಲಿ, ‘ಪಶ್ಚಿಮ ಬಂಗಾಳದಲ್ಲಿ ಆಗಿರುವ ಹಾನಿಯನ್ನು ಪರಿಶೀಲಿಸಲು ಫ್ರದಾನಿಗಳು ಬಿಡುವು ಮಾಡಿಕೊಂಡಿದ್ದರು, ಆದರೆ ಮುಖ್ಯಮಂತ್ರಿಗಳ ರಾಜಕೀಯ ಮತ್ತು ಸಣ್ಣತನ ಸಭೆ ಜರುಗದಂತೆ ಮಾಡಿತು. ತಮ್ಮ ಈ ಕೆಟ್ಟ ನಡವಳಿಕೆಯಿಂದ ಮಮತಾ ಬ್ಯಾನರ್ಜಿ ಅವರು ತಮ್ಮ ರಾಜ್ಯದ ಜನರ ಹಿತಾಸಕ್ತಿಗಳಿಗೆ ಧಕ್ಕೆಯುಂಟು ಮಾಡುತ್ತಿದ್ದಾರೆ. ಭಾರತದ ಇತಿಹಾಸದಲ್ಲಿ ಈ ಹಿಂದೆ ಯಾವತ್ತೂ ಒಂದು ರಾಜ್ಯದ ಮುಖ್ಯಮಂತ್ರಿ ಇಷ್ಟು ಕೆಟ್ಟದ್ದಾಗಿ, ಅನುಚಿತವಾಗಿ ಮತ್ತು ಅಗೌರವದಿಂದ ನಡೆದುಕೊಂಡಿರಲಿಲ್ಲ,’ ಎಂದು ಹೇಳಿದ್ದಾರೆ.
PM took out time to review damage in WB, but CM’s politics&pettiness prevented it from happening #MamataBanerjee is only harming interests of of WB by this petulant behaviour
Never before in history of India,has CM of a State behaved in such an ugly,disrespectful&callous manner
— Sanju Verma (@Sanju_Verma_) May 28, 2021
ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧನ್ಕರ್ ಅವರು, ‘ಪ್ರಧಾನ ಮಂತ್ರಿಗಳ ಸಭೆಯಲ್ಲಿ ಮುಖ್ಯಮಂತ್ರಿ ಮತ್ತು ಅಧಿಕಾರಿಗಳು ಪಾಲ್ಗೊಂಡಿದ್ದರೆ ಅದು ರಾಜ್ಯದ ಜನತೆಗೆ ಒಳಿತಾಗುತ್ತಿತ್ತು. ತಂಟೆಕೋರತನದ ನಿಲುವು ರಾಜ್ಯ ಅಥವಾ ಪ್ರಜಾಪ್ರಭುತ್ವಕ್ಕೆ ಮಾರಕವಾಗಿವೆ. ಪ್ರಧಾನಿಗಳ ಸಭೆಯಲ್ಲಿ ಮುಖ್ಯಮಂತ್ರಿ ಮತ್ತು ಅಧಿಕಾರಿಗಳು ಭಾಗವಹಿಸದಿರುವುದು ಭಾರತದ ಸಂವಿಧಾನಕ್ಕೆ ಮತ್ತು ಕಾಯ್ದೆಯ ನಿಯಮಕ್ಕೆ ಅಪಚಾರವಸಗಿದಂತೆ,’ ಎಂದು ಟ್ವೀಟ್ ಮಾಡಿದ್ದಾರೆ.
It would have served interests of state and its people for CM and officials @MamataOfficial to attend Review Meet by PM.
Confrontational stance ill serves interests of State or democracy.
Non participation by CM and officials not in sync with constitutionalism or rule of law.
— Governor West Bengal Jagdeep Dhankhar (@jdhankhar1) May 28, 2021
ಶೆಹಜಾದ್ ಜೈ ಹಿಂದ್ ಎನ್ನುವವರು, ‘ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾಯುತ್ತಾ ಕುಳಿತರು, ರಾಜ್ಯಪಾಲರು ಸಹ ಕಾಯುತ್ತಿದ್ದರು. ಹಾನಿಯ ಬಗ್ಗೆ ವಿವರಣೆ ನೀಡಲು ವೇದಿಕೆ ಸಿದ್ಧವಾಗಿತ್ತು. ಸೈಕ್ಲೋನ್ ಯಾಸ್ ರಿವ್ಯೂ ಮೀಟಿಂಗ್ನಲ್ಲಿ ದೀದಿ ಅವರಿಗೆ ಕುರ್ಚಿಯನ್ನು ಮೀಸಲಿಡಲಾಗಿತ್ತು. ಆದರೆ, ದೀದಿ ಅವರಿಗೆ ರಾಷ್ಟ್ರನೀತಿಗಿಂತ ರಾಜನೀತಿ ಮುಖ್ಯವಾಯಿತು. ಜನರ ಪ್ರಾಣಗಳಿಗಿಂತ ರಾಜಕಾರಣವೇ ಮುಖ್ಯವಾಯಿತು,’ ಎಂದಿದ್ದಾರೆ.
PM @narendramodi kept waiting
Governor kept waitingScreen was ready with presentation
Mamata didi chair also reserved for Cyclone Yaas review meet
But Didi once again puts
Rajniti above Rashtraniti,
politics above lives6.15pm I will be Live on twitter pic.twitter.com/48WqPvCcad
— Shehzad Jai Hind (@Shehzad_Ind) May 28, 2021
ಈ ಎಲ್ಲ ಬೆಳವಣಿಗಗಳ ನಡುವೆ ಕೇಂದ್ರವು ಶುಕ್ರವಾರದಂದು ಮಮತಾ ಅವರೊಂದಿಗೆ ಪ್ರಧಾನಿಗಳ ಸಭೆಗೆ ಹಾಜರಾಗದ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಆಲಾಪನ್ ಬಂಡೋಪಾಧ್ಯಯ ಅವರನ್ನು ವಾಪಸ್ಸು ಕರೆಸಿಕೊಂಡಿದೆ.
ಇದನ್ನೂ ಓದಿ: Cyclone Yaas: ಯಾಸ್ ಚಂಡಮಾರುತದಿಂದಾದ ಹಾನಿ ಪರಿಶೀಲನೆಗೆ ನಾಳೆ ಒಡಿಶಾಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ
Published On - 1:42 am, Sat, 29 May 21