ಕೆಲಸ ಕೊಡಿಸುವುದಾಗಿ ಕರೆ ಮಾಡಿ ಕಾರ್ಮಿಕನಿಗೆ ಉಂಡೇ ನಾಮ

ನೆಲಮಂಗಲ: ಕೆಲಸ ಕೊಡಿಸುವುದಾಗಿ ಕರೆ ಮಾಡಿ ಕಾರ್ಮಿಕನಿಗೆ ವಂಚನೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಅರಿಶಿನಕುಂಟೆ ಬಳಿ ನಡೆದಿದೆ. ಕೆಲಸವಿಲ್ಲದವರಿಗೆ ತಕ್ಷಣವೇ ಕೆಲಸ ಕೊಡುತ್ತೇವೆ ಎಂದು ಕರೆ ಮಾಡಿದ್ದ ವ್ಯಕ್ತಿ, ನಾನು ಮ್ಯಾನೇಜರ್ ನಿಮಗೆ ಕೆಲಸ ಕೊಡುತ್ತೇನೆ ಸಂಬಳಕ್ಕಾಗಿ ನಿಮ್ಮ ಅಕೌಂಟ್ ಲಿಂಕ್ ಮಾಡಬೇಕು ಎಂದು OTPನಂಬರ್ ಪಡೆದು ವಂಚನೆ ಮಾಡಿದ್ದಾನೆ. ವ್ಯಕ್ತಿಯ ಮಾತು ಕೇಳಿ ಆನ್ಲೈನ್ ವಂಚನೆಯಲ್ಲಿ ಅರಿಶಿನಕುಂಟೆ ನಿವಾಸಿ ಲೋಕೇಶ್ ₹25 ಸಾವಿರ ಕಳೆದುಕೊಂಡಿದ್ದಾರೆ. ಮ್ಯಾನೇಜರ್ ಎಂದು ಮೋಸ ಮಾಡಿದ ವ್ಯಕ್ತಿ […]

ಕೆಲಸ ಕೊಡಿಸುವುದಾಗಿ ಕರೆ ಮಾಡಿ ಕಾರ್ಮಿಕನಿಗೆ ಉಂಡೇ ನಾಮ

Updated on: Aug 21, 2020 | 9:55 AM

ನೆಲಮಂಗಲ: ಕೆಲಸ ಕೊಡಿಸುವುದಾಗಿ ಕರೆ ಮಾಡಿ ಕಾರ್ಮಿಕನಿಗೆ ವಂಚನೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಅರಿಶಿನಕುಂಟೆ ಬಳಿ ನಡೆದಿದೆ.

ಕೆಲಸವಿಲ್ಲದವರಿಗೆ ತಕ್ಷಣವೇ ಕೆಲಸ ಕೊಡುತ್ತೇವೆ ಎಂದು ಕರೆ ಮಾಡಿದ್ದ ವ್ಯಕ್ತಿ, ನಾನು ಮ್ಯಾನೇಜರ್ ನಿಮಗೆ ಕೆಲಸ ಕೊಡುತ್ತೇನೆ ಸಂಬಳಕ್ಕಾಗಿ ನಿಮ್ಮ ಅಕೌಂಟ್ ಲಿಂಕ್ ಮಾಡಬೇಕು ಎಂದು OTPನಂಬರ್ ಪಡೆದು ವಂಚನೆ ಮಾಡಿದ್ದಾನೆ. ವ್ಯಕ್ತಿಯ ಮಾತು ಕೇಳಿ ಆನ್ಲೈನ್ ವಂಚನೆಯಲ್ಲಿ ಅರಿಶಿನಕುಂಟೆ ನಿವಾಸಿ ಲೋಕೇಶ್ ₹25 ಸಾವಿರ ಕಳೆದುಕೊಂಡಿದ್ದಾರೆ.

ಮ್ಯಾನೇಜರ್ ಎಂದು ಮೋಸ ಮಾಡಿದ ವ್ಯಕ್ತಿ ಒಟಿಪಿ ಪಡೆದು ಆನ್​ಲೈನ್ ಶಾಪಿಂಗ್ ಮಾಡಿದ್ದಾನೆ. ಈ ಬಗ್ಗೆ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.