ಬೆಂಗಳೂರು: ನಗರದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ಜನ ಹೇಗೆ ಸಾಯ್ತಾರೆ ಅಂತ ಊಹೆ ಮಾಡೋಕು ಕಷ್ಟವಾಗ್ತಿದೆ. ಪಾರ್ಕ್ಗೆ ವಾಕಿಂಗ್ ಬಂದ ವ್ಯಕ್ತಿ ಮೃತಪಟ್ಟಿರುವ ಘಟನೆ ಬೆಂಗಳೂರಿನ ಆರ್ .ಟಿ.ನಗರದಲ್ಲಿ ನಡೆದಿದೆ. ಪಾರ್ಕ್ಗೆ ಬಂದಾಗ ಅಲ್ಲೇ ಬಿದ್ದು ವ್ಯಕ್ತಿ ಮೃತಪಟಟ್ಟಿದ್ದು, ಶವವನ್ನು ಬಿಬಿಎಂಪಿ ಸಿಬ್ಬಂದಿ ಕೊಂಡೊಯ್ದಿದ್ದಾರೆ.
ಪಾರ್ಕ್ಗೆ ಬಂದ ವ್ಯಕ್ತಿ ಹೇಗೆ ಮೃತಪಟ್ರು ಅನ್ನೋದೆ ಗೊತ್ತಾಗ್ತಿಲ್ಲ. ನಗರದಲ್ಲಿ ಕೊರೊನಾ ಹಾವಳಿ ಹೆಚ್ಚಿರುವುದರಿಂದ ವ್ಯಕ್ತಿಯ ಸಾವಿನ ಸುತ್ತ ಅನುಮಾನ ಬೆಳೆದುಕೊಂಡಿದೆ. ಸಾಕಷ್ಟು ಕೇಸ್ಗಳಲ್ಲಿ ಮೃತಪಟ್ಟ ಬಳಿಕ ಕೊರೊನಾ ಪಾಸಿಟಿವ್ ವರದಿ ಬಂದಿರೋದು ಪತ್ತೆಯಾಗಿದೆ.
ಮನೆಯಲ್ಲಿ ಮೃತಪಟ್ಟವರಿಗೂ ಕೋವಿಡ್ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಪತ್ತೆ ಆಗ್ತಿದೆ. ಬೆಂಗಳೂರಲ್ಲಿ ಸಾಕಷ್ಟು ಕೇಸ್ಗಳಲ್ಲಿ ಇದೇ ರೀತಿ ಆಗ್ತಿದೆ. ಪಾರ್ಕ್ನಲ್ಲಾದ ಘಟನೆಯಿಂದ ಜನ ಆತಂಕಕ್ಕೆ ಒಳಗಾಗಿದ್ದಾರೆ. ಬಿಬಿಎಂಪಿಗೂ ಶಾಕಿಂಗ್ ಸಾವುಗಳನ್ನ ಕಡಿಮೆ ಮಾಡುವುದು ಚಾಲೆಂಜ್ ಆಗಿದೆ.
Published On - 9:13 am, Mon, 27 July 20