ಕೋಟೆ ನಾಡಿನಲ್ಲಿ ಭೀಕರ ಘಟನೆ, ಹಳೇ ವೈಷಮ್ಯಕ್ಕೆ ಮಹಿಳೆಯನ್ನು ಕೊಚ್ಚಿ, ಕೊಚ್ಚಿ ಬರ್ಬರ ಹತ್ಯೆ

ಹಳೇ ವೈಷಮ್ಯ ಹಿನ್ನೆಲೆಯಲ್ಲಿ ಬರಹನ್ ಬೇಗಂ ಎಂಬ ಮಹಿಳೆಯನ್ನು ಆರೋಪಿ ಇಮ್ತಿಯಾಜ್ ಚಾಕುವಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಈ ವೇಳೆ ತಡೆಯಲು ಹೋದ ಬರಹನ್ ಪುತ್ರ ಮೆಹಫೂಜ್‌ ಇಲಾಯಿ ಮೇಲೂ ಅಟ್ಯಾಕ್ ಮಾಡಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ಕೋಟೆ ನಾಡಿನಲ್ಲಿ ಭೀಕರ ಘಟನೆ, ಹಳೇ ವೈಷಮ್ಯಕ್ಕೆ ಮಹಿಳೆಯನ್ನು ಕೊಚ್ಚಿ, ಕೊಚ್ಚಿ ಬರ್ಬರ ಹತ್ಯೆ
ಬರಹನ್ ಬೇಗಂ ಬರ್ಬರವಾಗಿ ಕೊಲೆಯಾದ ಮಹಿಳೆ.

Updated on: Jan 08, 2021 | 7:15 AM

ಚಿತ್ರದುರ್ಗ: ಹಳೇ ವೈಷಮ್ಯ ಹಿನ್ನೆಲೆಯಲ್ಲಿ ಚಾಕು ಇರಿದು ಮಹಿಳೆಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಕೋಟೆ ನಾಡು ಚಿತ್ರದುರ್ಗದ ಬಡಾಮಕಾನ್ ಬಡಾವಣೆಯಲ್ಲಿ ನಡೆದಿದೆ. ಬರಹನ್ ಬೇಗಂ(55) ಬರ್ಬರವಾಗಿ ಕೊಲೆಯಾದ ಮಹಿಳೆ.

ಹಳೇ ವೈಷಮ್ಯ ಹಿನ್ನೆಲೆಯಲ್ಲಿ ಬರಹನ್ ಬೇಗಂ ಎಂಬ ಮಹಿಳೆಯನ್ನು ಆರೋಪಿ ಇಮ್ತಿಯಾಜ್ ಚಾಕುವಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಈ ವೇಳೆ ತಡೆಯಲು ಹೋದ ಬರಹನ್ ಪುತ್ರ ಮೆಹಫೂಜ್‌ ಇಲಾಯಿ ಮೇಲೂ ಎರಗಿದ್ದಾನೆ. ಹೀಗಾಗಿ ಮಹಿಳೆ ಮೃತಪಟ್ಟಿದ್ದು ಆಕೆಯ ಮಗನಿಗೆ ಗಾಯಗಳಾಗಿವೆ.

ಸದ್ಯ ಗಾಯಾಳು ಮೆಹಫೂಜ್‌ ಇಲಾಯಿಯನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆ ಬಳಿಕ ಆರೋಪಿ ಇಮ್ತಿಯಾಜ್ ಪರಾರಿಯಾಗಿದ್ದಾರೆ. ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ಶುರು ಮಾಡಿದ್ದಾರೆ.

ವ್ಯಕ್ತಿಯ ಕಿಡ್ನ್ಯಾಪ್, ಕೊಲೆ ಬೆದರಿಕೆ ಹಿನ್ನೆಲೆ: ಹೈದರಾಬಾದ್‌ ಪೊಲೀಸರಿಂದ ಮಾಜಿ ಸಚಿವೆ ಅರೆಸ್ಟ್​