Happy Birthday Yash: ಇಂದು ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ, ಈ ಬಾರಿಯ ವಿಶೇಷ ಏನು ಗೊತ್ತಾ?
ಇಂದು(ಜ.08) ರಾಕಿಂಗ್ ಸ್ಟಾರ್ ಯಶ್‌ಗೆ ಹುಟ್ಟುಹಬ್ಬದ ಸಂಭ್ರಮ. ಈ ಬಾರಿ ಯಶ್ ಅದ್ಧೂರಿ ಹುಟ್ಟುಹಬ್ಬದ ಆಚರಣೆಗೆ ಬ್ರೇಕ್ ಹಾಕಿದ್ದಾರೆ. ಆದ್ರೂ ಬರ್ತ್‌ಡೇ ಸಂಭ್ರಮ ಜೋರಾಗಿದೆ. ಹಾಗಿದ್ರೆ ಯಶ್ ಈ ಬಾರಿ ಹುಟ್ಟುಹಬ್ಬದ ವಿಷೇಶತೆ ಏನಿರಬಹುದು..
ಬೆಂಗಳೂರು: ಇಂದು(ಜ.08) ರಾಕಿಂಗ್ ಸ್ಟಾರ್ ಯಶ್‌ಗೆ ಹುಟ್ಟುಹಬ್ಬದ ಸಂಭ್ರಮ. ಈ ಬಾರಿ ಯಶ್ ಅದ್ಧೂರಿ ಹುಟ್ಟುಹಬ್ಬದ ಆಚರಣೆಗೆ ಬ್ರೇಕ್ ಹಾಕಿದ್ದಾರೆ. ಆದ್ರೂ ಬರ್ತ್‌ಡೇ ಸಂಭ್ರಮ ಜೋರಾಗಿದೆ. ಹಾಗಿದ್ರೆ ಯಶ್ ಈ ಬಾರಿ ಹುಟ್ಟುಹಬ್ಬದ ವಿಷೇಶತೆ ಏನಿರಬಹುದು ಎಂಬುದರ ಮಾಹಿತಿ ಇಲ್ಲಿದೆ.
ಯಶ್ ಹುಟ್ಟುಹಬ್ಬ ಆಚರಿಸಿಕೊಳ್ತಾರಾ? ಸ್ಟಾರ್ ನಟನ ಹುಟ್ಟುಹಬ್ಬ ಬಂತು ಅಂದ್ರೆ ಸಾಕು. ಅಭಿಮಾನಿಗಳು ಎಲ್ಲೇ ಇದ್ರೂ ವಿಶ್ ಮಾಡೋಕೆ ಹಾಜರಾಗಿ ಬಿಡ್ತಾರೆ. ಆದ್ರೆ ಕೊರೊನಾ ರಾಜ್ಯಾದ್ಯಂತ ಹೆಜ್ಜೆ ಇಟ್ಟಾಗಿನಿಂದ ಸ್ಟಾರ್ ನಟರು ತಮ್ಮ ಅದ್ಧೂರಿ ಬರ್ತ್ ಡೇ ಸೆಲೆಬ್ರೇಷನ್‌ಗೆ ಬ್ರೇಕ್ ಹಾಕಿದ್ದಾರೆ. ಅಂತೆಯೇ ರಾಂಕಿಂಗ್ ಸ್ಟಾರ್ ಯಶ್ ಕೂಡ ಈ ಬಾರಿ ತಮ್ಮ ಹುಟ್ಟು ಹಬ್ಬದ ಆಚರಣೆಯನ್ನು ರದ್ದು ಮಾಡಿದ್ದಾರೆ. ಜತೆಗೆ ಈ ಬಾರಿ ಸಂಭ್ರಮಾಚರಣೆ ಬೇಡ ಅಂತ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ಯಶ್ ಬಾಲ್ಯ: ರಾಕಿಂಗ್ ಸ್ಟಾರ್ ಯಶ್ ಮೂಲ ಹೆಸರು ನವೀನ್ ಕುಮಾರ್ ಗೌಡ. ಅರುಣ್ ಕುಮಾರ್ ಮತ್ತು ಪುಷ್ಪ ಲತಾ ದಂಪತಿಗಳಿಗೆ 1986ರ ಜನವರಿ 08ರಂದು ಹಾಸನ ಜಿಲ್ಲೆಯಲ್ಲಿ ಜನಿಸಿದರು. ಅವರ ತಂದೆ ಬಿಎಂಟಿಸಿ ಸಾರಿಗೆ ಸೇವೆಯಲ್ಲಿ ಚಾಲಕರಾಗಿ ಸೇವೆ ಸಲ್ಲಿಸಿದವರು. ಯಶ್ ತಮ್ಮ ಬಾಲ್ಯದ ದಿನಗಳನ್ನು ಮೈಸೂರಿನ ಪಡವರಹಳ್ಳಿಯಲ್ಲಿ ಕಳೆದರು. ನಂತರ ಮಹಾರಾಜ ಹೈಸ್ಕೂಲ್ನಲ್ಲಿ ಶಾಲಾ ಶಿಕ್ಷಣವನ್ನು ಪಡೆದರು. ನಾಟಕಗಳಲ್ಲಿ ಆಸಕ್ತಿ ಹೊಂದಿದ್ದ ಯಶ್ ಬಿ.ವಿ ಕಾರಂತರ ಬೆನಕ ನಾಟಕ ಶಾಲೆಯಲ್ಲಿ ನಾಟಕಭ್ಯಾಸ ಪ್ರಾರಂಭಿಸಿದರು. ಹೀಗೆ ಯಶ್ ಜೀವನ ಸಾಗುತ್ತಾ ಈಗ ಸ್ಯಾಂಡಲ್ವುಡ್ ಸ್ಟಾರ್ ನಟನಾಗಿ ಹೊರಹೊಮ್ಮಿದ್ದಾರೆ.
ಕಿರುತೆರೆಯಲ್ಲಿ ಯಶ್: ರಂಗಶಾಲೆಯ ನಾಟಕಗಳು ಮತ್ತು ಕಿರುತೆರೆಯ ನಂದಗೋಕುಲ, ಮಳೆಬಿಲ್ಲು, ಉತ್ತರಾಯಣ, ಪ್ರೀತಿ ಇಲ್ಲದ ಮೇಲೆ, ಶಿವ ಸೇರಿದಂತೆ ಮುಂತಾದ ಕಥಾನಕಗಳಲ್ಲಿ ಕನ್ನಡಿಗರ ಮನೆ ಮನೆಗಳಲ್ಲಿ ಬಂದ ಯಶ್ ಚಿತ್ರರಂಗದಲ್ಲಿ ತಮ್ಮದೇ ಆದ ಹೆಸರುಗಳಿಸಿ ತಮ್ಮದೇ ಆದ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಯಶ್ ನಟಿಸಿದ ಚಿತ್ರಗಳು: ಮೊಗ್ಗಿನ ಮನಸ್ಸು, ರಾಕಿ, ಕಳ್ಳರ ಸಂತೆ, ಗೋಕುಲ, ಮೊದಲ ಸಲ, ತಮಸ್ಸು, ರಾಜಧಾನಿ, ಲಕ್ಕಿ, ಗಜಕೇಸರಿ, ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಚಾರಿ, ಮಾಸ್ಟರ್ ಪೀಸ್, ಸಂತು ಸ್ಟ್ರೇಟ್ ಫಾರ್ವರ್ಡ್, ಕೆಜಿಎಫ್ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಮುಖ್ಯ ನಟನಾಗಿ ಅಭಿನಯಿಸಿದ್ದಾರೆ. ಮೊಗ್ಗಿನ ಮನಸ್ಸು ಚಿತ್ರದಿಂದ ಮೊದಲ ಫಿಲಂ ಫೇರ್ ಅವಾರ್ಡ್ಗೆ ಹೆಸರಾದ ಯಶ್ ನಂತರದಲ್ಲಿ ಯಶಸ್ಸಿನ ದಾರಿಯನ್ನೇ ಕಂಡರು.
ಒಟ್ಟಿನಲ್ಲಿ, ಈ ಬಾರಿ ಯಶ್ ಹುಟ್ಟುಹಬ್ಬವನ್ನು ಪ್ಯಾನ್ ಇಂಡಿಯಾ ಬರ್ತ್‌ಡೇ ಅಂತಲೇ ಹೇಳಬಹುದು. ಯಾಕಂದ್ರೆ ಯಶ್ ಬರ್ತ್‌ಡೇಯನ್ನು ಕರ್ನಾಟಕದಲ್ಲಿ ಮಾತ್ರವಲ್ಲ ಭಾರತದಾದ್ಯಂತ ಆಚರಿಸಲಾಗ್ತಿದೆ. ಚೆನ್ನೈ, ಹೈದರಾಬಾದ್, ಮುಂಬೈ ಮತ್ತು ಕೇರಳದಲ್ಲೂ ರಾಕಿಂಗ್ ಸ್ಟಾರ್ ಹುಟ್ಟುಹಬ್ಬ ಆಚರಿಸಲಾಗ್ತಿದೆ. ನ್ಯಾಷನಲ್ ಸ್ಟಾರ್ ಆಗಿ ಮಿಂಚುತ್ತಿರೋ ರಾಕಿಂಗ್ ಸ್ಟಾರ್ ಬರ್ತ್‌ಡೇಯನ್ನು ಅಭಿಮಾನಿಗಳು ನ್ಯಾಷನಲ್ ಲೆವೆಲ್‌ನಲ್ಲಿ ಆಚರಿಸಲಿದ್ದಾರೆ.
ಕೆಜಿಎಫ್-2 ಟೀಸರ್ ಲೀಕ್ ಮಾಡಿದ ಮಹಾನುಭಾವರಿಗೆ ದೇವರು ಒಳ್ಳೇದು ಮಾಡಲಿ- ಯಶ್
Published On - 9:01 am, Fri, 8 January 21