AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ದಿನ ಮೊದಲೇ ಲೀಕ್​ ಆಯ್ತಾ ಕೆಜಿಎಫ್​-2 ಟೀಸರ್​?

ಅಂದಹಾಗೆ, ಈ ಟೀಸರ್​ ರಿಲೀಸ್​ ಆಗಿದ್ದು ಹೇಗೆ? ರಿಲೀಸ್​ ಆದ ಟೀಸರ್​ ಕೆಜಿಎಫ್​-2ನದ್ದೇನೆ ಎನ್ನುವ ಪ್ರಶ್ನೆಗೆ ಚಿತ್ರತಂಡದಿಂದ ಇನ್ನಷ್ಟೇ ಸ್ಪಷ್ಟನೆ ಸಿಗಬೇಕಿದೆ. 

ಒಂದು ದಿನ ಮೊದಲೇ ಲೀಕ್​ ಆಯ್ತಾ ಕೆಜಿಎಫ್​-2 ಟೀಸರ್​?
KGF ಚಾಪ್ಟರ್-2
ರಾಜೇಶ್ ದುಗ್ಗುಮನೆ
|

Updated on:Jan 07, 2021 | 9:27 PM

Share

ಕೆಜಿಎಫ್​ ಚಾಪ್ಟರ್​-1 ಚಿತ್ರಕ್ಕೆ ಪೈರಸಿ ಕಂಟಕ ಎದುರಾಗಿತ್ತು. ಈಗ ಕೆಜಿಎಫ್​-2 ಸಿನಿಮಾದ ಟೀಸರ್​ಗೂ ಪೈರಸಿ ಕಾಟ ಕಂಟಕವಾಗಿದೆ. ಯಶ್​ ಅಭಿನಯದ ಕೆಜಿಎಫ್​-2 ಟೀಸರ್​ ಒಂದು ದಿನ ಮೊದಲೇ ಸಾಮಾಜಿಕ ಜಾಲತಾಣದಲ್ಲಿ ಲೀಕ್​ ಆಗಿದೆ ಎನ್ನಲಾಗುತ್ತಿದೆ.

ಹೌದು, ಯಶ್​ ಜನ್ಮದಿನದ ಅಂಗವಾಗಿ ನಾಳೆ (ಡಿ.8) ಕೆಜಿಎಫ್​-2 ಸಿನಿಮಾ ಟೀಸರ್​ ರಿಲೀಸ್​ ಆಗಬೇಕಿತ್ತು. ಇದಕ್ಕಾಗಿ ಭಾರೀ ನಿರೀಕ್ಷೆ ಕೂಡ ಇಟ್ಟುಕೊಳ್ಳಲಾಗಿದೆ. ಆದರೆ, ಈಗ ಸಾಮಾಜಿಕ ಜಾಲತಾಣದಲ್ಲಿ ಟೀಸರ್​ ಒಂದು ಹರಿದಾಡುತ್ತಿದ್ದು, ಇದು ಕೆಜಿಎಫ್​-2ನದ್ದೇ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಅಂದಹಾಗೆ, ಈ ಟೀಸರ್​ ರಿಲೀಸ್​ ಆಗಿದ್ದು ಹೇಗೆ? ರಿಲೀಸ್​ ಆದ ಟೀಸರ್​ ಕೆಜಿಎಫ್​-2ನದ್ದೇನಾ ಎನ್ನುವ ಪ್ರಶ್ನೆಗೆ ಚಿತ್ರತಂಡದಿಂದ ಇನ್ನಷ್ಟೇ ಸ್ಪಷ್ಟನೆ ಸಿಗಬೇಕಿದೆ.

ಇನ್ನು ಹೊಂಬಾಳೆ ಫಿಲ್ಮ್ಸ್​ನ ಕಾರ್ಯಕಾರಿ ನಿರ್ಮಾಪಕ ಕೂಡ ಟೀಸರ್​ ಲೀಕ್​ ಆದ ವಿಚಾರವನ್ನು ಖಚಿತಪಡಿಸಿದ್ದಾರೆ. ನೀವು ಹ್ಯಾಕ್​ ಮಾಡಬಹುದು. ನೀವು ಲೀಕ್​ ಮಾಡಬಹುದು. ನೀವು ಮೊದಲೇ ಟಾರ್ಗೆಟ್​ ತಲುಪಬಹುದು. ಆದರೆ, ಪ್ರಾಮಾಣಿಕ ವ್ಯಕ್ತಿಯೇ ಯಾವಾಗಲೂ ದೊಡ್ಡ ಆಟವನ್ನು ಗೆಲ್ಲೋದು. ರಾಕಿ ಬಾಯ್​ ಯಾವಾಗಲೂ ಗೆಲ್ಲುತ್ತಾರೆ. KGFChapter ಇಂದು 9.29ಕ್ಕೇ ಪ್ರೀಮಿಯರ್​ ಆಗಲಿದೆ ಎಂದಿದ್ದಾರೆ.

Published On - 9:05 pm, Thu, 7 January 21

ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ