ಪತ್ನಿ ಮತ್ತು ಮಗನಿಗೆ ಕೊರೊನಾ: ನೆರೆಹೊರೆಯವರ ವರ್ತನೆಗೆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

ಬೆಂಗಳೂರು: ಪತ್ನಿ, ಮಗನಿಗೆ ಕೊರೊನಾ ಹಿನ್ನೆಲೆಯಲ್ಲಿ ವ್ಯಕ್ತಿ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ. ದೊಡ್ಡಬಳ್ಳಾಪುರದ ಕಾಸು ನಗರ ನಿವಾಸಿ ನಾಗರಾಜು(56) ಆತ್ಮಹತ್ಯೆ ಮಾಡಡಿಕೊಂಡ ವ್ಯಕ್ತಿ. ಬೆಂಗಳೂರಿನಲ್ಲಿ ಮೃತ ವ್ಯಕ್ತಿಯ ಮಗ ವಾಸವಿದ್ದ. ಆತನಿಗೆ ಅರೋಗ್ಯ ಸರಿ ಇಲ್ಲದ ಕಾರಣ ಮಗನನ್ನು ನೋಡಿಕೊಳ್ಳಲು ನಾಗರಾಜು ಪತ್ನಿ ಬೆಂಗಳೂರಿಗೆ ಬಂದಿದ್ದರು. ಜ್ವರ ಜಾಸ್ತಿಯಾಗಿ ಮಗನಿಗೆ ಕೊರೊನಾ ಟೆಸ್ಟ್ ಮಾಡಿಸಿದಾಗ ಆತನಿಗೆ ಕೊರೊನಾ ಇರುವುದು ದೃಢವಾಗಿತ್ತು. ನಂತ್ರ ನಾಗರಾಜು ಪತ್ನಿಗೂ ಕೊರೊನಾ ಪಾಸಿಟಿವ್ ಬಂದಿದೆ. ಇವರನ್ನು ದೊಡ್ಡಬಳ್ಳಾಪುರ ಅಸ್ಪತ್ರೆಯಲ್ಲಿ ಅಡ್ಮಿಟ್ ಮಾಡಲಾಗಿತ್ತು. […]

ಪತ್ನಿ ಮತ್ತು ಮಗನಿಗೆ ಕೊರೊನಾ: ನೆರೆಹೊರೆಯವರ ವರ್ತನೆಗೆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

Updated on: Jul 21, 2020 | 9:22 AM

ಬೆಂಗಳೂರು: ಪತ್ನಿ, ಮಗನಿಗೆ ಕೊರೊನಾ ಹಿನ್ನೆಲೆಯಲ್ಲಿ ವ್ಯಕ್ತಿ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ. ದೊಡ್ಡಬಳ್ಳಾಪುರದ ಕಾಸು ನಗರ ನಿವಾಸಿ ನಾಗರಾಜು(56) ಆತ್ಮಹತ್ಯೆ ಮಾಡಡಿಕೊಂಡ ವ್ಯಕ್ತಿ.

ಬೆಂಗಳೂರಿನಲ್ಲಿ ಮೃತ ವ್ಯಕ್ತಿಯ ಮಗ ವಾಸವಿದ್ದ. ಆತನಿಗೆ ಅರೋಗ್ಯ ಸರಿ ಇಲ್ಲದ ಕಾರಣ ಮಗನನ್ನು ನೋಡಿಕೊಳ್ಳಲು ನಾಗರಾಜು ಪತ್ನಿ ಬೆಂಗಳೂರಿಗೆ ಬಂದಿದ್ದರು. ಜ್ವರ ಜಾಸ್ತಿಯಾಗಿ ಮಗನಿಗೆ ಕೊರೊನಾ ಟೆಸ್ಟ್ ಮಾಡಿಸಿದಾಗ ಆತನಿಗೆ ಕೊರೊನಾ ಇರುವುದು ದೃಢವಾಗಿತ್ತು. ನಂತ್ರ ನಾಗರಾಜು ಪತ್ನಿಗೂ ಕೊರೊನಾ ಪಾಸಿಟಿವ್ ಬಂದಿದೆ. ಇವರನ್ನು ದೊಡ್ಡಬಳ್ಳಾಪುರ ಅಸ್ಪತ್ರೆಯಲ್ಲಿ ಅಡ್ಮಿಟ್ ಮಾಡಲಾಗಿತ್ತು.

ನೆರೆಹೊರೆಯವರ ವರ್ತನೆಗೆ ಆತ್ಮಹತ್ಯೆಗೆ ಮೊರೆ
ಅಧಿಕಾರಿಗಳು ನಾಗರಾಜು ಮತ್ತು ಅವ್ರ ಇನ್ನೊಬ್ಬ ಮಗನನ್ನು ಕ್ವಾರಂಟೈನ್ ಮಾಡಿದ್ದರು. ಇವರಿದ್ದ ಏರಿಯಾ ಸೀಲ್​ಡೌನ್ ಮಾಡುವಾಗ ಅಕ್ಕಪಕ್ಕದ ಮನೆಯವರು ಗಲಾಟೆ ಮಾಡಿದ್ದರು. ನಿಮ್ಮ ಮನೆಯಿಂದ, ನಿಮ್ಮಿಂದ ನಮಗೆಲ್ಲಾ ಸಮಸ್ಯೆಯಾಗಿದೆ ಎಂದು ಗಲಾಟೆ ಮಾಡಿದ್ರು.

ನೆರೆಹೊರೆಯವರ ವರ್ತನೆಯಿಂದ ನೊಂದು ಹೆಸರುಘಟ್ಟದ ಕೆರೆಯಲ್ಲಿ ಮರವೊಂದಕ್ಕೆ ನಾಗರಾಜು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಮೃತದೇಹವನ್ನು ಸಪ್ತಗಿರಿ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್​ಗಾಗಿ ರವಾನಿಸಲಾಗಿದ್ದು, ವರದಿ ಬಂದ ನಂತ್ರ ಅಂತ್ಯಸಂಸ್ಕಾರ ನಡೆಸಲಾಗುತ್ತೆ. ಈ ಬಗ್ಗೆ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.