ಪತ್ನಿಯ ಅಗಲಿಕೆ ವೇದನೆ: ತಿಂಗಳ ಕಾರ್ಯ ಮುಗಿಸಿ ರೈಲಿಗೆ ತಲೆಕೊಟ್ಟ ಪತಿ

ಆನೇಕಲ್: ಪತ್ನಿ ಅಗಲಿಕೆಯ ವೇದನೆಯಿಂದ ಬೇಸತ್ತ ಪತಿ, ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಸುಮಂದೂರದ ರೈಲ್ವೆ ಟ್ರ್ಯಾಕ್​ ಬಳಿ ನಡೆದಿದೆ. ಆನೇಕಲ್ ತಾಲೂಕಿನ ಸುರಜಕ್ನಹಳ್ಳಿ ನಿವಾಸಿ ಮುನಿರಾಜು (30) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದು, ಅನಾರೋಗ್ಯದ ಕಾರಣದಿಂದಾಗಿ ಮುನಿರಾಜು ಪತ್ನಿ ತಿಂಗಳ ಹಿಂದೆ ಸಾವನಪ್ಪಿದ್ದರು. ನಿನ್ನೆಗೆ ಹೆಂಡತಿ ಮರಣ ಹೊಂದಿ ಒಂದು ತಿಂಗಳು ಕಳೆದಿತ್ತು. ಹಾಗಾಗಿ ನಿನ್ನೆ ಪತ್ನಿಯ ತಿಂಗಳ ಕಾರ್ಯ ಮುಗಿಸಿದ ನಂತರ ಮುನಿರಾಜು ರಾತ್ರಿ ರೈಲಿಗೆ ತಲೆಕೊಟ್ಟು […]

ಪತ್ನಿಯ ಅಗಲಿಕೆ ವೇದನೆ: ತಿಂಗಳ ಕಾರ್ಯ ಮುಗಿಸಿ ರೈಲಿಗೆ ತಲೆಕೊಟ್ಟ ಪತಿ

Updated on: Sep 05, 2020 | 3:20 PM

ಆನೇಕಲ್: ಪತ್ನಿ ಅಗಲಿಕೆಯ ವೇದನೆಯಿಂದ ಬೇಸತ್ತ ಪತಿ, ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಸುಮಂದೂರದ ರೈಲ್ವೆ ಟ್ರ್ಯಾಕ್​ ಬಳಿ ನಡೆದಿದೆ.
ಆನೇಕಲ್ ತಾಲೂಕಿನ ಸುರಜಕ್ನಹಳ್ಳಿ ನಿವಾಸಿ ಮುನಿರಾಜು (30) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದು, ಅನಾರೋಗ್ಯದ ಕಾರಣದಿಂದಾಗಿ ಮುನಿರಾಜು ಪತ್ನಿ ತಿಂಗಳ ಹಿಂದೆ ಸಾವನಪ್ಪಿದ್ದರು.

ನಿನ್ನೆಗೆ ಹೆಂಡತಿ ಮರಣ ಹೊಂದಿ ಒಂದು ತಿಂಗಳು ಕಳೆದಿತ್ತು. ಹಾಗಾಗಿ ನಿನ್ನೆ ಪತ್ನಿಯ ತಿಂಗಳ ಕಾರ್ಯ ಮುಗಿಸಿದ ನಂತರ ಮುನಿರಾಜು ರಾತ್ರಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ.