ಬೆಂಗಳೂರು: ಕಳ್ಳತನ ಮಾಡಲು ಬಂದು ಮನೆಯವರ ಬಳಿಯೇ ರೆಡ್ಹ್ಯಾಂಡ್ ಆಗಿ ಕಳ್ಳ ಸಿಕ್ಕಿಬಿದ್ದಿರುವ ಘಟನೆ ಜೆ.ಪಿ.ನಗರದ ನಾರಾಯಣ ಶಾಲೆ ಬಳಿ ನಡೆದಿದೆ. ಇಂದು ಮುಂಜಾನೆ ಮನೆಯೊಂದರ ಕಿಟಕಿ ಮೂಲಕ ಅನುಮಾನಾಸ್ಪದವಾಗಿ ವ್ಯಕ್ತಿಯೊಬ್ಬ ಕದ್ದು ನೋಡ್ತಿದ್ದ. ಇದನ್ನು ತಿಳಿದ ಮನೆಯವರು ವ್ಯಕ್ತಿಯ ಕೈಯನ್ನು ಕಿಟಕಿಯಿಂದ ಎಳೆದು ಕಟ್ಟಿ ಹಾಕಿದ್ದಾರೆ.
ಕಿಟಕಿ ಬಳಿ ಏನು ಮಾಡುತಿದ್ದೀಯಾ ಎಂಬ ಪ್ರಶ್ನೆಗೆ ತನಗೆ ಯಾರೋ ಹಿಂಬಾಲಿಸಿಕೊಂಡು ಬಂದರು ಅದಕ್ಕೆ ಕಿಟಕಿ ಹತ್ತಿದ್ದೇನೆ ಎಂದು ಆ ವ್ಯಕ್ತಿ ಉತ್ತರಿಸಿದ್ದಾನೆ. ಆ ವ್ಯಕ್ತಿ ಮೇಲ್ನೋಟಕ್ಕೆ ಮಾನಸಿಕ ಅಸ್ವಸ್ಥನಂತೆ ಕಾಣುತ್ತಿದ್ದು, ಸದ್ಯ ಅಗ್ನಿಶಾಮಕ ದಳ ಹಾಗೂ ಪುಟ್ಟೇನಹಳ್ಳಿ ಪೊಲೀಸರು ಆತನ್ನು ಕಿಟಕಿಯಿಂದ ಕೆಳಗೆ ಇಳಿಸಿದ್ದಾರೆ. ನಂತರ ಪುಟ್ಟೇನಹಳ್ಳಿ ಪೊಲೀಸರು ಆತನನ್ನ ಠಾಣೆಗೆ ಕರೆದೊಯ್ದಿದ್ದಾರೆ.