AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಫ್​​ಎಟಿಫ್​​ನಿಂದ ಪಾಕಿಸ್ತಾನಕ್ಕೆ ಮತ್ತೊಂದು ಬಿಗ್ ಶಾಕ್

ದೆಹಲಿ: ಉಗ್ರರಿಗೆ ಅಡಗುತಾಣ.. ಭಯೋತ್ಪಾದಕರಿಗೆ ನೆಲೆಬೀಡು.. ರಕ್ತಹರಿಸೋ ಕ್ರಿಮಿಗಳಿಗೆ ಆಶ್ರಯ ನೀಡ್ತಿರೋ ಪಾಪಿ ರಾಷ್ಟ್ರ ಪಾಕಿಸ್ತಾನಕ್ಕೆ ಸಂಕಷ್ಟ ಎದುರಾಗಿದೆ. ಪಾಪದ ಕೊಡ ತುಂಬಿದೆ ಅನ್ನೋ ಹಾಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬರಸಿಡಿಲು ಅಪ್ಪಳಿಸಿದೆ. ಉಗ್ರ ಕ್ರಿಮಿಗಳನ್ನ ಪಾಲನೆ-ಪೋಷಣೆ ಮಾಡ್ತಿರೋ ಪಾಕ್​​​ಗೆ ಪಾಪದ ಕೆಲಸಗಳೇ ಇದೀಗ ಪ್ರಾಯಶ್ಚಿತಕ್ಕೆ ಕಾರಣವಾಗಿದೆ. ಎಫ್​​ಎಟಿಫ್​​ನಿಂದ ಪಾಕಿಸ್ತಾನಕ್ಕೆ ಮತ್ತೊಂದು ಬಿಗ್ ಶಾಕ್! ಯೆಸ್.. ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ನರಿ ಬುದ್ಧಿಯನ್ನ ಬಟಾಬಯಲುಗೊಳಿಸೋ ಭಾರತದ ಪ್ರಯತ್ನಕ್ಕೆ ದೊಡ್ಡ ಯಶಸ್ಸು ಸಿಕ್ಕಿದೆ. ಹಣ ಇಲ್ದೇ ಹೆಣಗಾಡ್ತಿರೋ ಉಗ್ರಪೋಷಕ ರಾಷ್ಟ್ರ […]

ಎಫ್​​ಎಟಿಫ್​​ನಿಂದ ಪಾಕಿಸ್ತಾನಕ್ಕೆ ಮತ್ತೊಂದು ಬಿಗ್ ಶಾಕ್
ಸಾಧು ಶ್ರೀನಾಥ್​
|

Updated on:Feb 22, 2020 | 7:50 AM

Share

ದೆಹಲಿ: ಉಗ್ರರಿಗೆ ಅಡಗುತಾಣ.. ಭಯೋತ್ಪಾದಕರಿಗೆ ನೆಲೆಬೀಡು.. ರಕ್ತಹರಿಸೋ ಕ್ರಿಮಿಗಳಿಗೆ ಆಶ್ರಯ ನೀಡ್ತಿರೋ ಪಾಪಿ ರಾಷ್ಟ್ರ ಪಾಕಿಸ್ತಾನಕ್ಕೆ ಸಂಕಷ್ಟ ಎದುರಾಗಿದೆ. ಪಾಪದ ಕೊಡ ತುಂಬಿದೆ ಅನ್ನೋ ಹಾಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬರಸಿಡಿಲು ಅಪ್ಪಳಿಸಿದೆ. ಉಗ್ರ ಕ್ರಿಮಿಗಳನ್ನ ಪಾಲನೆ-ಪೋಷಣೆ ಮಾಡ್ತಿರೋ ಪಾಕ್​​​ಗೆ ಪಾಪದ ಕೆಲಸಗಳೇ ಇದೀಗ ಪ್ರಾಯಶ್ಚಿತಕ್ಕೆ ಕಾರಣವಾಗಿದೆ.

ಎಫ್​​ಎಟಿಫ್​​ನಿಂದ ಪಾಕಿಸ್ತಾನಕ್ಕೆ ಮತ್ತೊಂದು ಬಿಗ್ ಶಾಕ್! ಯೆಸ್.. ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ನರಿ ಬುದ್ಧಿಯನ್ನ ಬಟಾಬಯಲುಗೊಳಿಸೋ ಭಾರತದ ಪ್ರಯತ್ನಕ್ಕೆ ದೊಡ್ಡ ಯಶಸ್ಸು ಸಿಕ್ಕಿದೆ. ಹಣ ಇಲ್ದೇ ಹೆಣಗಾಡ್ತಿರೋ ಉಗ್ರಪೋಷಕ ರಾಷ್ಟ್ರ ಪಾಕಿಸ್ತಾನಕ್ಕೆ ಅತ್ತ ದರಿ ಇತ್ತ ಪುಲಿ ಅನ್ನೋ ಹಾಗಾಗಿದೆ. ವಿಶ್ವಕ್ಕೆ ಮಾರಕವಾಗಿರೋ ಟೆರರಿಸ್ಟ್​​​ಗಳನ್ನ ಹೆಗಲ ಮೇಲೆ ಹೊತ್ಕೊಂಡು ತಿರುಗಾಡ್ತಿರೋ ಪಾಪಿಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಮುಖಭಂಗವಾಗಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಗ್ರರಿಗೆ ಹಣದ ಹರಿವು ನಿಲ್ಲಿಸೋಕೆ ಇರೋ ಫೈನಾನ್ಷಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ ಪಾಕ್​ಗೆ ದೊಡ್ಡ ಶಾಕ್ ನೀಡಿದೆ. ಅದೇನಂದ್ರೆ, ಪಾಕಿಸ್ತಾನವನ್ನ ಕಂದು ಬಣ್ಣದ ರಾಷ್ಟ್ರಗಳ ಪಟ್ಟಿಯಲ್ಲಿ ಮುಂದುವರಿಸಿದೆ. ಇಮ್ರಾನ್ ಖಾನ್ ಸರ್ಕಾರ ಮುಂದೇನ್ ಮಾಡ್ಬೇಕು ಅಂತ ತಡಬಡಾಯಿಸ್ತಿದೆ.

ಕಪ್ಪು ಪಟ್ಟಿಗೆ ಸೇರಿದರೆ ಹಣಕಾಸು ನೆರವಿಗೆ ಬೀಳಲಿದೆ ಬ್ರೇಕ್! ಇನ್ನು, ಪ್ಯಾರಿಸ್‌ನಲ್ಲಿ ನಡೆದ ಎಫ್‌ಎಟಿಎಫ್‌ನ ಮಹತ್ವದ ಸರ್ವ ಸದಸ್ಯರ ಸಭೆಯಲ್ಲಿ ಪಾಕ್​ಗೆ ಬರೆ ಎಳೆಯಲಾಗಿದೆ. ತನ್ನ ನೆಲದಲ್ಲಿ ಆಟವಾಡ್ತಿರೋ LET, ಜಮಾತ್ ಉದ್ ದಾವಾ ಸೇರಿದಂತೆ ಉಗ್ರ ಸಂಘಟನೆಗಳ ನಿಗ್ರಹಕ್ಕೆ ಜೂನ್​​ ಒಳಗೆ ಕಠಿಣ ಕ್ರಮ ಕೈಗೊಳ್ಳಲು ಎಫ್​​ಎಟಿಫ್ ಸೂಚಿಸಿದೆ.

ಪಾಕಿಸ್ತಾನಕ್ಕೆ 27 ಅಂಶಗಳ ಕಾರ್ಯಸೂಚಿ ನೀಡಲಾಗಿದ್ದು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಅಲ್ದೇ ಉಗ್ರರಿಗೆ ಅಕ್ರಮ ಹಣ ವರ್ಗಾವಣೆಗೆ ಬ್ರೇಕ್ ಹಾಕುವಂತೆ ವಾರ್ನ್ ಮಾಡಲಾಗಿದೆ. ಇಲ್ಲದಿದ್ರೆ, ಮುಂದಿನ ದಿನಗಳಲ್ಲಿ ಪಾಪಿ ರಾಷ್ಟ್ರನ್ನ ಕಪ್ಪು ಪಟ್ಟಿಗೆ ಸೇರಿಸೋ ಎಚ್ಚರಿಕೆ ನೀಡಲಾಗಿದೆ.

ಪಾಪಿ ನೆಲದಲ್ಲಿ ಉಗ್ರಪೋಷಕ ಆಟ ಮುಂದುವರಿದ್ರೆ ಬ್ಲ್ಯಾಕ್​​ ಲಿಸ್ಟ್​ಗೆ ಸೇರೋದು ಫಿಕ್ಸ್ ಆಗಿದೆ. ಒಂದು ವೇಳೆ ಪಾಕಿಸ್ತಾನವನ್ನ ಕಂದುಪಟ್ಟಿಯಿಂದ ಕಪ್ಪು ಪಟ್ಟಿಗೆ ಸೇರಿಸಿದ್ರೆ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಹಣಕಾಸು ನೆರವು ಸಿಗಲ್ಲ. ಇದ್ರಿಂದ ಇಮ್ರಾನ್ ಖಾನ್ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ.

ಒಟ್ನಲ್ಲಿ ಪಾಕಿಸ್ತಾನಕ್ಕೆ ತಾನೇ ಸಾಕಿದ ಗಿಣಿಗಳಾದ ಟೆರರಿಸ್ಟ್​​​ಗಳ ವಿರುದ್ಧ ಕ್ರಮ ಕೈಗೊಳಲೇ ಬೇಕಾದ ಅನಿವಾರ್ಯತೆ ಎದುರಾಗಿದೆ. ಪಾಕ್​ ವಿರುದ್ಧ ವಿರುದ್ಧ ಉಗ್ರ ನಿಗ್ರಹದ ಸಮರ ಸಾರಿರೋ ಭಾರತಕ್ಕೆ ದೊಡ್ಡ ಜಯ ಸಿಕ್ಕಿದ್ದಂತೂ ಸುಳ್ಳಲ್ಲ.

Published On - 7:48 am, Sat, 22 February 20

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ