ಶನಿಮಹಾತ್ಮನ ಸನ್ನಿಧಿಯಲ್ಲಿ.. ಗದೆ ಹಿಡಿದು ಪ್ರದಕ್ಷಿಣೆ ಹಾಕಿದ ಸಚಿವ ಮಾಧುಸ್ವಾಮಿ

|

Updated on: Nov 21, 2020 | 12:43 PM

ತುಮಕೂರು: ಜಿಲ್ಲೆಯ ಪಾವಗಡದಲ್ಲಿರುವ ಶನಿಮಹಾತ್ಮ ದೇವಸ್ಥಾನಕ್ಕೆ ಇಂದು ಸಚಿವ ಜೆ.ಸಿ.ಮಾಧುಸ್ವಾಮಿ ಭೇಟಿಕೊಟ್ಟರು. ಸಚಿವ ಜೆ.ಸಿ.ಮಾಧುಸ್ವಾಮಿಗೆ ಶಾಸಕ ವೆಂಕಟರವಣಪ್ಪ ಸಾಥ್ ನೀಡಿದರು. ಮಾಧುಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಗದೆ ಹಿಡಿದು ಮೂರು ಬಾರಿ ಪ್ರದಕ್ಷಿಣೆ ಹಾಕಿದರು. ಸಚಿವರೊಂದಿಗೆ ಶಾಸಕ ವೆಂಕಟರವಣಪ್ಪ ಸಹ ಗದೆ ಸೇವೆ ಸಲ್ಲಿಸಿದರು. ಇಲ್ಲಿಗೆ ಬರುವ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಅಥವಾ ದೋಷ ಪರಿಹಾರಕ್ಕಾಗಿ ದೇವಸ್ಥಾನದಲ್ಲಿ ಸೇವೆ ಸಲ್ಲಿಸುತ್ತಾರೆ. ಗದೆ ಹಿಡಿದು ಪ್ರದಕ್ಷಿಣೆ ಮಾಡಿದರೇ ಶನಿದೇವರು ಪ್ರಸನ್ನಗೊಳ್ಳುತ್ತಾರೆ ಎಂಬುದು ಇಲ್ಲಿನ ನಂಬಿಕೆ. ಹಾಗಾಗಿ, […]

ಶನಿಮಹಾತ್ಮನ ಸನ್ನಿಧಿಯಲ್ಲಿ.. ಗದೆ ಹಿಡಿದು ಪ್ರದಕ್ಷಿಣೆ ಹಾಕಿದ ಸಚಿವ ಮಾಧುಸ್ವಾಮಿ
Follow us on

ತುಮಕೂರು: ಜಿಲ್ಲೆಯ ಪಾವಗಡದಲ್ಲಿರುವ ಶನಿಮಹಾತ್ಮ ದೇವಸ್ಥಾನಕ್ಕೆ ಇಂದು ಸಚಿವ ಜೆ.ಸಿ.ಮಾಧುಸ್ವಾಮಿ ಭೇಟಿಕೊಟ್ಟರು. ಸಚಿವ ಜೆ.ಸಿ.ಮಾಧುಸ್ವಾಮಿಗೆ ಶಾಸಕ ವೆಂಕಟರವಣಪ್ಪ ಸಾಥ್ ನೀಡಿದರು.
ಮಾಧುಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಗದೆ ಹಿಡಿದು ಮೂರು ಬಾರಿ ಪ್ರದಕ್ಷಿಣೆ ಹಾಕಿದರು. ಸಚಿವರೊಂದಿಗೆ ಶಾಸಕ ವೆಂಕಟರವಣಪ್ಪ ಸಹ ಗದೆ ಸೇವೆ ಸಲ್ಲಿಸಿದರು.

ಇಲ್ಲಿಗೆ ಬರುವ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಅಥವಾ ದೋಷ ಪರಿಹಾರಕ್ಕಾಗಿ ದೇವಸ್ಥಾನದಲ್ಲಿ ಸೇವೆ ಸಲ್ಲಿಸುತ್ತಾರೆ. ಗದೆ ಹಿಡಿದು ಪ್ರದಕ್ಷಿಣೆ ಮಾಡಿದರೇ ಶನಿದೇವರು ಪ್ರಸನ್ನಗೊಳ್ಳುತ್ತಾರೆ ಎಂಬುದು ಇಲ್ಲಿನ ನಂಬಿಕೆ. ಹಾಗಾಗಿ, ಪಾವಗಡದಲ್ಲಿ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ ಉದ್ವಾಟನೆಗೆ ಬಂದ ವೇಳೆ ಸಚಿವರು ದೇವರಿಗೆ ಸೇವೆ ಸಲ್ಲಿಸಿದರು.