ಧಮ್ ಬಗ್ಗೆ ಮಾತನಾಡೋಕೆ ಅವರಿಗೆ ಯೋಗ್ಯತೆಯಿಲ್ಲ -ಕೆ.ಎಸ್​.ಈಶ್ವರಪ್ಪ

| Updated By:

Updated on: Jun 20, 2020 | 1:52 PM

ಚಾಮರಾಜನಗರ: ಸಿದ್ದರಾಮಯ್ಯ ಕುತಂತ್ರಿ, ಸ್ವಾರ್ಥಿ, ಅವರು ಜಾತಿ ಬಳಸಿಕೊಳ್ತಾರೆ. ಕುತಂತ್ರ ರಾಜಕಾರಣದಿಂದಲೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋತರು. ಜಾತಿ ಲಾಭ ಪಡೆಯುವಲ್ಲಿ ಸಿದ್ದರಾಮಯ್ಯ ನಿಸ್ಸೀಮರು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕೆಜೆಪಿ, ಬಿಜೆಪಿ ಇಬ್ಬಾಗ ಕಾರಣ. ಸಿದ್ದರಾಮಯ್ಯಗೆ ಮುಖ್ಯಮಂತ್ರಿಯಾಗುವ ಶಕ್ತಿ ಇರಲಿಲ್ಲ. ಲಾಟರಿ ಹೊಡೆದಂತೆ ಸಿದ್ದರಾಮಯ್ಯ ಸಿಎಂ ಆದರು. ಜಾತಿ ಆಧಾರದ ಮೇಲೆ ಟಿಕೆಟ್ ಕೊಟ್ಟಿದ್ದೀವಿ ಅಂತಾರೆ. ಎಷ್ಟು ಜನರನ್ನು ಇವರು ಗೆಲ್ಲಿಸಿದ್ದಾರೆ ಹೇಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಧಮ್ ಇದ್ದ […]

ಧಮ್ ಬಗ್ಗೆ ಮಾತನಾಡೋಕೆ ಅವರಿಗೆ ಯೋಗ್ಯತೆಯಿಲ್ಲ -ಕೆ.ಎಸ್​.ಈಶ್ವರಪ್ಪ
Follow us on

ಚಾಮರಾಜನಗರ: ಸಿದ್ದರಾಮಯ್ಯ ಕುತಂತ್ರಿ, ಸ್ವಾರ್ಥಿ, ಅವರು ಜಾತಿ ಬಳಸಿಕೊಳ್ತಾರೆ. ಕುತಂತ್ರ ರಾಜಕಾರಣದಿಂದಲೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋತರು. ಜಾತಿ ಲಾಭ ಪಡೆಯುವಲ್ಲಿ ಸಿದ್ದರಾಮಯ್ಯ ನಿಸ್ಸೀಮರು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕೆಜೆಪಿ, ಬಿಜೆಪಿ ಇಬ್ಬಾಗ ಕಾರಣ. ಸಿದ್ದರಾಮಯ್ಯಗೆ ಮುಖ್ಯಮಂತ್ರಿಯಾಗುವ ಶಕ್ತಿ ಇರಲಿಲ್ಲ. ಲಾಟರಿ ಹೊಡೆದಂತೆ ಸಿದ್ದರಾಮಯ್ಯ ಸಿಎಂ ಆದರು. ಜಾತಿ ಆಧಾರದ ಮೇಲೆ ಟಿಕೆಟ್ ಕೊಟ್ಟಿದ್ದೀವಿ ಅಂತಾರೆ. ಎಷ್ಟು ಜನರನ್ನು ಇವರು ಗೆಲ್ಲಿಸಿದ್ದಾರೆ ಹೇಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಧಮ್ ಇದ್ದ ವ್ಯಕ್ತಿ ಯಾಕೆ ಚುನಾವಣೆಯಲ್ಲಿ ಸೋತರು. ಸಿಎಂ ಸ್ಥಾನವನ್ನು ಏಕೆ ಸಿದ್ದರಾಮಯ್ಯ ಕಳೆದುಕೊಂಡರು. ಧಮ್ ಇರೋ ವ್ಯಕ್ತಿ ಯಾಕೆ ಕುರುಬ ಸಮುದಾಯಕ್ಕೆ ಟಿಕೆಟ್ ಕೊಟ್ಟಿಲ್ಲ. ಧಮ್ ಬಗ್ಗೆ ಮಾತನಾಡುವಂತಹ ಯೋಗ್ಯತೆ ಅವರಿಗಿಲ್ಲ ಎಂದು ಬಿಎಸ್‌ವೈಗೆ ಧಮ್ ಇಲ್ಲವೆಂಬ ಸಿದ್ದರಾಮಯ್ಯ ಹೇಳಿಕೆಗೆ ಈಶ್ವರಪ್ಪ ತಿರುಗೇಟು ನೀಡಿದರು.

Published On - 1:52 pm, Sat, 20 June 20