ಇನ್ನೂ 6 ತಿಂಗಳ ಮಾತು.. ಕೊರೊನಾ ವಿರುದ್ಧ ಹೋರಾಡಲು ಮಾನಸಿಕವಾಗಿ ಸಿದ್ಧರಾಗಿ -ಅಶೋಕ್​

|

Updated on: Jun 29, 2020 | 1:08 PM

ಬೆಂಗಳೂರು: ರಾಜಧಾನಿಯಲ್ಲಿ ಕೊರೊನಾ ಸೋಂಕು ನಿಯಂತ್ರಣ ವಿಚಾರಕ್ಕೆ ಸಂಬಂಧಿಸಿ ವಿಧಾನಸೌಧದಲ್ಲಿ ಕೊವಿಡ್ ನಿಯಂತ್ರಣ ಉಸ್ತುವಾರಿ ವಹಿಸಿರುವ ಸಚಿವ ಆರ್​. ಅಶೋಕ್​ ಸುದ್ದಿಗೋಷ್ಠಿ ನಡೆಸಿದ್ದಾರೆ. ದಿನೇ ದಿನೇ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಹೀಗಾಗಿ 6 ತಿಂಗಳ ಕಾಲ ಕೆಲಸ ಮಾಡಲು ಮಾನಸಿಕವಾಗಿ ಸಿದ್ಧರಾಗಿ ಎಂದು ಅಶೋಕ್ ಮನವಿ ಮಾಡಿದ್ದಾರೆ. ಕೊವಿಡ್ ವರದಿ ಬಂದ ಬಳಿಕ ಪೇಷಂಟ್​ಗೆ ದೂರವಾಣಿ ಕರೆ ಮಾಡುತ್ತಾರೆ. ಕರೆ ಬಂದ ತಕ್ಷಣ ಪೇಷಂಟ್​ಗಳು ರಸ್ತೆಗೆ ಬರುತ್ತಾರೆ. ಇದನ್ನು ತಪ್ಪಿಸಲು ತಕ್ಷಣ ಕೊವಿಡ್​ ಬಗ್ಗೆ ವರದಿ ನೀಡದಂತೆ […]

ಇನ್ನೂ 6 ತಿಂಗಳ ಮಾತು.. ಕೊರೊನಾ ವಿರುದ್ಧ ಹೋರಾಡಲು ಮಾನಸಿಕವಾಗಿ ಸಿದ್ಧರಾಗಿ -ಅಶೋಕ್​
ಆರ್.ಅಶೋಕ
Follow us on

ಬೆಂಗಳೂರು: ರಾಜಧಾನಿಯಲ್ಲಿ ಕೊರೊನಾ ಸೋಂಕು ನಿಯಂತ್ರಣ ವಿಚಾರಕ್ಕೆ ಸಂಬಂಧಿಸಿ ವಿಧಾನಸೌಧದಲ್ಲಿ ಕೊವಿಡ್ ನಿಯಂತ್ರಣ ಉಸ್ತುವಾರಿ ವಹಿಸಿರುವ ಸಚಿವ ಆರ್​. ಅಶೋಕ್​ ಸುದ್ದಿಗೋಷ್ಠಿ ನಡೆಸಿದ್ದಾರೆ. ದಿನೇ ದಿನೇ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಹೀಗಾಗಿ 6 ತಿಂಗಳ ಕಾಲ ಕೆಲಸ ಮಾಡಲು ಮಾನಸಿಕವಾಗಿ ಸಿದ್ಧರಾಗಿ ಎಂದು ಅಶೋಕ್ ಮನವಿ ಮಾಡಿದ್ದಾರೆ.

ಕೊವಿಡ್ ವರದಿ ಬಂದ ಬಳಿಕ ಪೇಷಂಟ್​ಗೆ ದೂರವಾಣಿ ಕರೆ ಮಾಡುತ್ತಾರೆ. ಕರೆ ಬಂದ ತಕ್ಷಣ ಪೇಷಂಟ್​ಗಳು ರಸ್ತೆಗೆ ಬರುತ್ತಾರೆ. ಇದನ್ನು ತಪ್ಪಿಸಲು ತಕ್ಷಣ ಕೊವಿಡ್​ ಬಗ್ಗೆ ವರದಿ ನೀಡದಂತೆ ಆರ್​.ಅಶೋಕ್ ಸೂಚಿಸಿದ್ದಾರೆ.

ಆಸ್ಪತ್ರೆಗಳಲ್ಲಿ ಬೆಡ್​ ಹೆಚ್ಚಳ
ಆಸ್ಪತ್ರೆಗಳಲ್ಲಿ ಬೆಡ್​ಗಳ ಹೆಚ್ಚಳ ಮಾಡುವ ಬಗ್ಗೆ ನಿರ್ಧಾರ ಮಾಡಲಾಗಿದೆ. ಇನ್ನು ಒಂದು ವಾರದ ಒಳಗೆ ಆಸ್ಪತ್ರೆಗಳಲ್ಲಿ ಬೆಡ್​ ವ್ಯವಸ್ಥೆಗೆ ಸೂಚಿಸಿದ್ದೇವೆ. ಈಗಾಗಲೇ 85 ವೈದ್ಯರ ನೇಮಕ ಮಾಡಲು ಆದೇಶಿಸಿದ್ದೇವೆ.

ಬಿಬಿಎಂಪಿ ಕಾರ್ಪೊರೇಟರ್​ಗಳ ಸಭೆ ಮಾಡಲಾಗುವುದು. ಸೀಲ್​ಡೌನ್ ಪ್ರದೇಶಗಳ ಬಗ್ಗೆ ಕಾರ್ಪೊರೇಟರ್​ಗೆ ಉಸ್ತುವಾರಿ ಕೊಡಲಾಗುತ್ತೆ. ಅಲ್ಲದೆ, ಸೀಲ್​ಡೌನ್ ಪ್ರದೇಶಕ್ಕೆ 25 ಲಕ್ಷ ರೂಪಾಯಿ ಮೀಸಲಿಡಲಾಗುತ್ತೆ. ಕೊವಿಡ್ ಕೇರ್ ಸೆಂಟರ್‌ಗಳ ಉಸ್ತುವಾರಿ ತಹಶೀಲ್ದಾರ್​ಗಳನ್ನು ನೇಮಕ ಮಾಡುತ್ತೇವೆ.

10 ಎನ್​ಜಿಒಗಳ ಮೂಲಕ ಕೊವಿಡ್​ ಬಗ್ಗೆ ಜಾಗೃತಿ ಮೂಡಿಸಲಾಗುತ್ತೆ. IAS ಅಧಿಕಾರಿ ತುಷಾರ್ ಗಿರಿನಾಥ್‌ಗೆ ಬೆಡ್​ ವ್ಯವಸ್ಥೆ ಉಸ್ತುವಾರಿ ಕೊಡಲಾಗಿದೆ. ಬೆಡ್ ತಯಾರಿಕೆಯ ಹೊಣೆ ರಾಜೇಂದ್ರ ಕಟಾರಿಯಾಗೆ ನೀಡಲಾಗಿದೆ. ಮಾಸ್ಕ್ ಕಡ್ಡಾಯ ಪಾಲನೆ ಉಸ್ತುವಾರಿ ಪೊಲೀಸರ ಹೆಗಲಿಗೆ. ಅಲ್ಲದೆ ಕೊರೊನಾಗೆ ಬಲಿಯಾದವರ ಶವ ಕೊಂಡೊಯ್ಯಲು ವಾಹನ ವ್ಯವಸ್ಥೆ ಮತ್ತು ಪ್ರತಿ ವಲಯಕ್ಕೆ 2 ಚಿರಶಾಂತಿ ವಾಹನಗಳ ವ್ಯವಸ್ಥೆ ಮಾಡಲಾಗುತ್ತೆ.

SDRF ನಿಧಿ ಅಡಿ ಕೇಂದ್ರ ಸರ್ಕಾರ 742 ಕೋಟಿ ರೂಪಾಯಿ ನೀಡಿದೆ. ಡಿಸಿಗಳಿಗೆ 232 ಕೋಟಿ ರೂ, ಆರೋಗ್ಯ ಇಲಾಖೆಗೆ 70 ಕೋಟಿ ರೂ, ಬಿಬಿಎಂಪಿಗೆ 50 ಕೋಟಿ ರೂಪಾಯಿ ಬಿಡುಗಡೆ ಆಗಿದೆ. ಗೃಹ ಇಲಾಖೆಗೆ 12 ಕೋಟಿ ರೂ., ರೈಲ್ವೆಗೆ 13 ಕೋಟಿ ರೂಪಾಯಿ ಹಾಗೂ ಬಿಎಂಟಿಸಿಗೆ 2.39 ಕೋಟಿ ರೂಪಾಯಿ ಬಿಡುಗಡೆ ಆಗಿದೆ.

ಜುಲೈ, ಆಗಸ್ಟ್​ನಲ್ಲಿ ಕೊರೊನಾ ಕೇಸ್​ ಹೆಚ್ಚಳ
ಜುಲೈ, ಆಗಸ್ಟ್​ ತಿಂಗಳಲ್ಲಿ ಕೊರೊನಾ ಕೇಸ್​ ಹೆಚ್ಚಳವಾಗುವ ಬಗ್ಗೆ ಮಾಹಿತಿ ಇದೆ. ಸೋಂಕಿತರ ಕರೆಗೆ ತಕ್ಷಣ ಸ್ಪಂದಿಸಲು PROಗಳ ನೇಮಕ ಮಾಡಲಾಗುತ್ತೆ. ಸೋಂಕಿತರಿಗೆ ಎಲ್ಲಿ ಅಡ್ಮಿಟ್ ಆಗಬೇಕೆಂಬ ಬಗ್ಗೆ ಮಾಹಿತಿ. ಆ ವಲಯದಲ್ಲಿ ಅಡ್ಮಿಟ್​ ಮಾಡಿಕೊಳ್ಳದಿದ್ದರೆ ಪುನಃ ಪಿಆರ್​ಒಗಳಿಗೆ ಕರೆ ಮಾಡಿ ದೂರು ನೀಡಬಹುದು.

ರೋಗ ಲಕ್ಷಣ ಇದ್ದರೆ ಆಸ್ಪತ್ರೆಗೆ ದಾಖಲು ಮಾಡುತ್ತೇವೆ. ಲಕ್ಷಣ ಇಲ್ಲದಿದ್ದರೆ ಕೊವಿಡ್ ಕೇರ್​ಸೆಂಟರ್​ಗೆ ದಾಖಲು ಮಾಡಲಾಗುತ್ತೆ. ಎಲ್ಲ ಆಸ್ಪತ್ರೆಗಳ ಬೆಡ್​ಗೆ ನಂಬರಿಂಗ್ ಮಾಡುತ್ತಿದ್ದೇವೆ. ಕೊವಿಡ್ ಕೇಂದ್ರದಲ್ಲಿ ಕೆಲಸ ಮಾಡುವವರಿಗೆ ಕ್ವಾರಂಟೈನ್ ಮಾಡುತ್ತೇವೆ.

ಆಸ್ಪತ್ರೆಗಳಲ್ಲಿ ಕೆಲಸ ಮಾಡುವವರ ವೇತನ ಹೆಚ್ಚಳ
ಕ್ವಾರಂಟೈನ್​ ಕೇಂದ್ರದ ಬಳಿ ಸ್ಥಳೀಯರ ಧರಣಿ ಹಿನ್ನೆಲೆಯಲ್ಲಿ ಇನ್ನು ಮುಂದೆ ಆ ರೀತಿ ಆಗದಂತೆ ಕ್ರಮ ಕೈಗೊಳ್ಳಲು ಡಿಸಿಗಳಿಗೆ ಸೂಚನೆ ನೀಡಲಾಗಿದೆ. ಆಸ್ಪತ್ರೆಗಳಲ್ಲಿ ಕೆಲಸ ಮಾಡುವವರು ಭಯಭೀತರಾಗಿದ್ದಾರೆ. ಹಾಗಾಗಿ ಅವರ ವೇತನ ಹೆಚ್ಚಳ ಮಾಡಲು ಸಿಎಂ ಒಪ್ಪಿಗೆ ನೀಡಿದ್ದಾರೆ. ಪಿಪಿಇ ಕಿಟ್ ಬಳಸುವ ಸಿಬ್ಬಂದಿ ವೇತನ ಹೆಚ್ಚಳಕ್ಕೆ ಒಪ್ಪಿಗೆ ನೀಡಲಾಗಿದೆ. ಗುಣಮಟ್ಟದ ಊಟ ನೀಡಲು ಈಗಾಗಲೇ ಸೂಚಿಸಲಾಗಿದೆ. ಈ ಸಂಬಂಧ ಇಸ್ಕಾನ್ ಜತೆ ಚರ್ಚಿಸಿ ಕ್ರಮ ಕೈಗೊಳ್ತೇವೆ ಎಂದು ಸಚಿವ ಆರ್.ಅಶೋಕ್ ತಿಳಿಸಿದರು.