ಮಂಗಳೂರು: ಹೋಟೆಲ್ ಸಿಬ್ಬಂದಿ ಮೇಲೆ ಕಿಡಿಗೇಡಿಗಳು ಗುಂಡಿನ ದಾಳಿ ನಡೆಸಿರುವ ಘಟನೆ ನಗರದ ಫಳ್ನೀರ್ ಬಳಿಯ MFC ಹೋಟೆಲ್ನಲ್ಲಿ ನಡೆದಿದೆ. ಹೋಟೆಲ್ನಲ್ಲಿ ಸಮೋಸ ಖರೀದಿಗೆ ಬಂದಿದ್ದ ಅಪರಿಚಿತರು ಸಿಬ್ಬಂದಿ ಜೊತೆ ಮಾತಿನ ಚಕಮಕಿ ನಡೆಸಿದರು. ಬಳಿಕ, ಹೋಟೆಲ್ನ ಇಬ್ಬರ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ಸಹ ನಡೆಸಿದ್ದಾರೆ.
ಈ ನಡುವೆ, ಹೋಟೆಲ್ನ ಗಾಜು ಮತ್ತು ಪೀಠೋಪಕರಣ ಧ್ವಂಸಮಾಡಿದ ಕಿಡಿಗೇಡಿಗಳನ್ನು ಹಿಡಿಯಲು ಯತ್ನಿಸಿದ ಸಿಬ್ಬಂದಿ ಮೇಲೆ 2 ಸುತ್ತು ಗುಂಡುಹಾರಿಸಿ ನಾಲ್ವರು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಹೋಟೆಲ್ನ ಓರ್ವ ಸಿಬ್ಬಂದಿಗೆ ಗುಂಡೇಟು ತಗುಲಿ ಗಾಯಗಳಾಗಿದೆ.
ಸದ್ಯ, ಪರಾರಿಯಾಗ್ತಿದ್ದ ನಾಲ್ವರ ಪೈಕಿ ಇಬ್ಬರನ್ನು ಸ್ಥಳೀಯರು ಹಿಡಿದಿದ್ದಾರೆ. ಮತ್ತಿಬ್ಬರು ದುಷ್ಕರ್ಮಿಗಳು ಆಟೋ ರಿಕ್ಷಾದಲ್ಲಿ ಪರಾರಿಯಾಗಿದ್ದಾರೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಉದ್ದೇಶಪೂರ್ವಕವಾಗಿ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಮಂಗಳೂರಿನ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.