ನಮ್ಮದೇ ವರುಣಾ ಗ್ರಾಮದ ಶಾಲೆಯಲ್ಲಿ ಇದೇನಿದು ಟಿಕ್ ಟಾಕ್ ಕಿಕ್ ಅಸಹ್ಯ

|

Updated on: May 13, 2020 | 9:54 AM

ಮೈಸೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳು ಕ್ಲೋಸ್ ಆಗಿವೆ. ಇದನ್ನೇ ಬಳಸಿಕೊಂಡ ಯುವಕರು ಶಾಲಾ ಆವರಣದಲ್ಲಿ ಮದ್ಯಪಾನ ಮಾಡಿ ಟಿಕ್​ಟಾಕ್ ವಿಡಿಯೋ ಮಾಡಿ ಕುಡಿದು ಕುಪ್ಪಳಿಸಿರುವ ಘಟನೆ ಮೈಸೂರು ತಾಲೂಕಿನ ವರುಣ ಗ್ರಾಮದಲ್ಲಿ ನಡೆದಿದೆ. ಶಾಲೆ-ಕಾಲೇಜುಗಳಲ್ಲಿ ಸರಸ್ವತಿ ನೆಲೆಸಿರ್ತಾಳೆ ಅಂತಾರೆ. ಅದಕ್ಕೇನೆ ಶಾಲೆ ಪ್ರವೇಶಕ್ಕೂ ಮುನ್ನ ಕೈ ಮುಗಿದು ಒಳಕ್ಕೆ ಬನ್ನಿ ಅಂತ ಬರೆಯಲಾಗಿರುತ್ತೆ. ಆದ್ರೆ ಇಲ್ಲಿ ಕೆಲ ಯುವಕರು ಶಾಲೆಯ ಆವರಣದಲ್ಲೇ ಮದ್ಯಪಾನ ಮಾಡಿ ಟಿಕ್‌ಟಾಕ್ ವಿಡಿಯೋ ಮಾಡಿದ್ದಾರೆ. ಮೈಸೂರು ತಾಲ್ಲೂಕಿನ ವರುಣ ಗ್ರಾಮದ ಸರ್ಕಾರಿ ಹಿರಿಯ […]

ನಮ್ಮದೇ ವರುಣಾ ಗ್ರಾಮದ ಶಾಲೆಯಲ್ಲಿ ಇದೇನಿದು ಟಿಕ್ ಟಾಕ್ ಕಿಕ್ ಅಸಹ್ಯ
Follow us on

ಮೈಸೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳು ಕ್ಲೋಸ್ ಆಗಿವೆ. ಇದನ್ನೇ ಬಳಸಿಕೊಂಡ ಯುವಕರು ಶಾಲಾ ಆವರಣದಲ್ಲಿ ಮದ್ಯಪಾನ ಮಾಡಿ ಟಿಕ್​ಟಾಕ್ ವಿಡಿಯೋ ಮಾಡಿ ಕುಡಿದು ಕುಪ್ಪಳಿಸಿರುವ ಘಟನೆ ಮೈಸೂರು ತಾಲೂಕಿನ ವರುಣ ಗ್ರಾಮದಲ್ಲಿ ನಡೆದಿದೆ.

ಶಾಲೆ-ಕಾಲೇಜುಗಳಲ್ಲಿ ಸರಸ್ವತಿ ನೆಲೆಸಿರ್ತಾಳೆ ಅಂತಾರೆ. ಅದಕ್ಕೇನೆ ಶಾಲೆ ಪ್ರವೇಶಕ್ಕೂ ಮುನ್ನ ಕೈ ಮುಗಿದು ಒಳಕ್ಕೆ ಬನ್ನಿ ಅಂತ ಬರೆಯಲಾಗಿರುತ್ತೆ. ಆದ್ರೆ ಇಲ್ಲಿ ಕೆಲ ಯುವಕರು ಶಾಲೆಯ ಆವರಣದಲ್ಲೇ ಮದ್ಯಪಾನ ಮಾಡಿ ಟಿಕ್‌ಟಾಕ್ ವಿಡಿಯೋ ಮಾಡಿದ್ದಾರೆ.

ಮೈಸೂರು ತಾಲ್ಲೂಕಿನ ವರುಣ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಕೆಲವು ಕಿಡಿಗೇಡಿಗಳು ಮಧ್ಯರಾತ್ರಿ ಶಾಲೆಗೆ ಬಂದು ಬೀಡಿ, ಸಿಗರೇಟುಗಳನ್ನು ಸೇದಿ ಅಲ್ಲೇ ಮದ್ಯದ ಬಾಟಲಿಗಳನ್ನು ಬಿಸಾಡಿ ರಾತ್ರಿ 12 ಗಂಟೆಯವರೆಗೆ ಟಿಕ್ ಟಾಕ್ ವಿಡಿಯೋಗಳನ್ನು ಮಾಡ್ತಾರೆ.

ಕುಡಿದ ಅಮಲಿನಲ್ಲಿ ಶಾಲಾ ಕಟ್ಟಡದ ಗಾಜುಗಳನ್ನು ಒಡೆದು ಹಾಕಿದ್ದಾರೆ. ಶಾಲೆಯ ವಾತಾವರಣವನ್ನು ಹಾಳು ಮಾಡುತ್ತಿದ್ದಾರೆ. ಇದರಿಂದ ಅಕ್ಕಪಕ್ಕದ ಮನೆಯವರಿಗೂ ತೊಂದರೆ ಉಂಟಾಗುತ್ತಿದೆ. ಇಂತಹ ಕಿಡಿಗೇಡಿಗಳ ವಿರುದ್ದ ಕಾನೂನು ಕ್ರಮಕೈಗೊಳ್ಳಿ ಎಂದು ಶಾಲೆಯ ಮುಖ್ಯ ಶಿಕ್ಷಕರು ವರುಣ ಪೊಲೀಸ್ ಠಾಣೆಗೆ ದೂರು ನೀಡಿ ಮನವಿ ಮಾಡಿಕೊಂಡಿದ್ದಾರೆ.

Published On - 9:54 am, Wed, 13 May 20