‘ಜಮೀರ್ ಚಿಲ್ಲರೆ ಗಿರಾಕಿ-ಗುಜರಿ ಗಿರಾಕಿ: ಅನೈತಿಕ ಚಟುವಟಿಕೆಯಿಂದಲೇ ಮೇಲಕ್ಕೆ ಬಂದವ’

|

Updated on: Sep 12, 2020 | 11:37 AM

ದಾವಣಗೆರೆ: ಜಮೀರ್ ಅಹ್ಮದ್ ಚಿಲ್ಲರೆ ಗಿರಾಕಿ, ಗುಜರಿ ಗಿರಾಕಿ. ಜಮೀರ್ ಅಹ್ಮದ್ ಏನೇ ಗಳಿಸಿದ್ರು ಅದು ಅನೈತಿಕ ಚಟುವಟಿಕೆಗಳಿಂದಲೇ ಸಂಪಾದಿಸಿರೋದು ಎಂದು ಜಿಲ್ಲೆಯ ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ‌ MP ರೇಣುಕಾಚಾರ್ಯ ಆರೋಪಿಸಿದ್ದಾರೆ. ಜಮೀರ್ ಅಹ್ಮದ್ ಈ ಹಿಂದೆ ಯಡಿಯೂರಪ್ಪ ಸಿಎಂ ಆದ್ರೆ ಅವರ ಮನೆ ವಾಚ್​ಮನ್ ಆಗುವುದಾಗಿ ಹೇಳಿದ್ದರು. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ. ಆದರೇ ಜಮೀರ್ ಅವರು ವಾಚ್​ಮನ್ ಆಗಲೇ ಇಲ್ಲ ಅಂತಾ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ. ಜಮೀರ್​ ಒಂದು ರೀತಿ ಎರಡು ನಾಲಿಗೆ ಇರುವ […]

‘ಜಮೀರ್ ಚಿಲ್ಲರೆ ಗಿರಾಕಿ-ಗುಜರಿ ಗಿರಾಕಿ: ಅನೈತಿಕ ಚಟುವಟಿಕೆಯಿಂದಲೇ ಮೇಲಕ್ಕೆ ಬಂದವ’
ಶಾಸಕ M.P.ರೇಣುಕಾಚಾರ್ಯ
Follow us on

ದಾವಣಗೆರೆ: ಜಮೀರ್ ಅಹ್ಮದ್ ಚಿಲ್ಲರೆ ಗಿರಾಕಿ, ಗುಜರಿ ಗಿರಾಕಿ. ಜಮೀರ್ ಅಹ್ಮದ್ ಏನೇ ಗಳಿಸಿದ್ರು ಅದು ಅನೈತಿಕ ಚಟುವಟಿಕೆಗಳಿಂದಲೇ ಸಂಪಾದಿಸಿರೋದು ಎಂದು ಜಿಲ್ಲೆಯ ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ‌ MP ರೇಣುಕಾಚಾರ್ಯ ಆರೋಪಿಸಿದ್ದಾರೆ.

ಜಮೀರ್ ಅಹ್ಮದ್ ಈ ಹಿಂದೆ ಯಡಿಯೂರಪ್ಪ ಸಿಎಂ ಆದ್ರೆ ಅವರ ಮನೆ ವಾಚ್​ಮನ್ ಆಗುವುದಾಗಿ ಹೇಳಿದ್ದರು. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ. ಆದರೇ ಜಮೀರ್ ಅವರು ವಾಚ್​ಮನ್ ಆಗಲೇ ಇಲ್ಲ ಅಂತಾ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.

ಜಮೀರ್​ ಒಂದು ರೀತಿ ಎರಡು ನಾಲಿಗೆ ಇರುವ ವ್ಯಕ್ತಿ. ಅನೈತಿಕ ಚಟುವಟಿಕೆಯಿಂದಲೇ ಉನ್ನತ ಸ್ಥಾನಕ್ಕೆ ಬಂದ ವ್ಯಕ್ತಿ. ಆದರೆ, ಉಪ್ಪು ತಿಂದವರು ನೀರು ‌ಕುಡಿಯಲೇ ಬೇಕು. ನಮ್ಮ ಸರ್ಕಾರ ತನಿಖೆಗೆ ಪೊಲೀಸರಿಗೆ ಮುಕ್ತ ಅವಕಾಶ ನೀಡಿದೆ. ಹಾಗಾಗಿ, ಡ್ರಗ್ಸ್ ವಿಚಾರದಲ್ಲಿ ಸತ್ಯಾಂಶ ಹೊರಬರಲಿದೆ ಎಂದು ಜಿಲ್ಲೆಯ ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ‌ MP ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ.