ಮದ್ಯ ಸೇವಿಸಿ ಕಾರು ಚಾಲನೆ ಪ್ರಶ್ನಿಸಿದ್ದಕ್ಕೆ MLC ಪುತ್ರ, ಸ್ನೇಹಿತರಿಂದ ಪೊಲೀಸರ ಮೇಲೆ ಹಲ್ಲೆ..

|

Updated on: Dec 07, 2020 | 2:54 PM

ಕಾಂಗ್ರೆಸ್ ಪಕ್ಷದ MLC ನಸೀರ್ ಅಹ್ಮದ್ ಪುತ್ರ ಹಾಗೂ ಆತನ ಆತನ ಇಬ್ಬರು ಸ್ನೇಹಿತರು ಬೆಂಗಳೂರಿನ ಹೆಬ್ಬಾಳದ BMTC ಡಿಪೋ ಬಳಿ ಅಮೃತಹಳ್ಳಿ ಠಾಣೆ ಇಬ್ಬರು ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಮದ್ಯ ಸೇವಿಸಿ ಕಾರು ಚಾಲನೆ ಪ್ರಶ್ನಿಸಿದ್ದಕ್ಕೆ MLC ಪುತ್ರ, ಸ್ನೇಹಿತರಿಂದ ಪೊಲೀಸರ ಮೇಲೆ ಹಲ್ಲೆ..
ವಿಧಾನಪರಿಷತ್ ಕಾಂಗ್ರೆಸ್‌ ಸದಸ್ಯ ನಸೀರ್ ಅಹ್ಮದ್
Follow us on

ಬೆಂಗಳೂರು: MLC ಪುತ್ರ ಮತ್ತು ಸ್ನೇಹಿತರಿಂದ ಪೊಲೀಸರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಕಾಂಗ್ರೆಸ್ ಪಕ್ಷದ MLC ನಸೀರ್ ಅಹ್ಮದ್ ಪುತ್ರ ಹಾಗೂ ಆತನ ಇಬ್ಬರು ಸ್ನೇಹಿತರು ಬೆಂಗಳೂರಿನ ಹೆಬ್ಬಾಳದ BMTC ಡಿಪೋ ಬಳಿ ಅಮೃತಹಳ್ಳಿ ಠಾಣೆ ಇಬ್ಬರು ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಕಂಠಪೂರ್ತಿ ಮದ್ಯ ಸೇವಿಸಿ ಕಾರು ಚಲಾಯಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಕಾರು ತಡೆದು ಪ್ರಶ್ನಿಸಿದ್ದಕ್ಕೆ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತಿದ್ದ ಅಮೃತಹಳ್ಳಿ ಠಾಣೆಯ ಇಬ್ಬರು ಪೊಲೀಸರ ಮೇಲೆ ಹಲ್ಲೆ ನಡೆಸಿದಕ್ಕೆ ವಿಧಾನಪರಿಷತ್ ಕಾಂಗ್ರೆಸ್‌ ಸದಸ್ಯ ನಸೀರ್ ಅಹ್ಮದ್ ಪುತ್ರ ಮತ್ತು ಆತನ ಇಬ್ಬರು ಸ್ನೇಹಿತರು ಸೇರಿ ಮೂವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಒಟ್ಟು ಆರು ಮಂದಿ ವಿರುದ್ಧ ಪ್ರಕರಣ ದಾಖಲು:
ಪ್ರಕರಣಕ್ಕೆ ಸಂಬಂಧಿಸಿ ನಸೀರ್ ಅಹಮದ್​ ಪುತ್ರ ಫಯಾಜ್ ಅಹಮದ್​, ಇಮ್ರಾನ್ ಷರೀಫ್​ ಮತ್ತು ಜೆನ್ ಷರೀಫ್ ಸೇರಿ ಮೂವರನ್ನು ಬಂಧಿಸಲಾಗಿದೆ. ಹಾಗೂ ಒಂದು ಕಾರು ಸೀಜ್​ ಮಾಡಿದ್ದು ಇನ್ನೂ ಮೂವರಿಗಾಗಿ ಪೊಲೀಸರು ಹುಡುಕುತ್ತಿದ್ದಾರೆ.

ನಾಯಿ ಛೂ ಬಿಟ್ಟು ಹಲ್ಲೆ ಮಾಡಿದರು: ನಿವೃತ್ತ ಪೊಲೀಸ್ ಅಧಿಕಾರಿ ವಿರುದ್ಧ ಯುವತಿಯ ಆರೋಪ

Published On - 8:28 am, Mon, 7 December 20