
ಬೆಂಗಳೂರು: ಪ್ಯಾಂಟ್ ಜೇಬಿನಲ್ಲಿದ್ದ ಮೊಬೈಲ್ ಏಕಾಏಕಿ ಬ್ಲಾಸ್ಟ್ ಆಗಿರುವ ಘಟನೆ ನಗರದ ಹುಳಿಮಾವು ಬಳಿಯ DLF ಅಪಾರ್ಟ್ಮೆಂಟ್ ಬಳಿ ಸಂಭವಿಸಿದೆ. ಇದರಿಂದ ನೇಪಾಳ ಮೂಲದ ಮನೋಜ್ಗೆ ಸಣ್ಣ ಪುಟ್ಟ ಗಾಯಗಳಾಗಿದೆ.
ಎಂದಿನಂತೆ ಪ್ಯಾಂಟ್ ಜೇಬಿನಲ್ಲಿ ಮನೋಜ್ ಮೊಬೈಲ್ ಇಟ್ಟುಕೊಂಡಿದ್ದ. ಆದ್ರೆ ಇಂದು ಸಂಜೆ 4ರ ಸುಮಾರಿಗೆ ಒಪ್ಪೊ ಕಂಪನಿಯ ಮೊಬೈಲ್ ಸ್ಫೋಟವಾಗಿದೆ. ಬ್ಲಾಸ್ಟ್ನ ತೀವ್ರತೆಗೆ ಬೆಂಕಿ ಹತ್ತಿಕೊಂಡಿದ್ದು, ತಕ್ಷಣ ಸ್ನೇಹಿತರ ಸಹಾಯದಿಂದ ನೀರನ್ನು ಹಾಕಿ ಬೆಂಕಿಯನ್ನ ಆರಿಸಲಾಗಿದೆ.
Published On - 7:14 pm, Mon, 11 May 20