ಹಾಲು ನೀಡಲು ಉಕ್ಕಿ ಹರಿಯುವ ನದಿಯನ್ನೇ ದಾಟಿದ ಯುವಕ, ಎಲ್ಲಿ?

ಚಿಕ್ಕಮಗಳೂರು: ಜಿಲ್ಲೆಯ ನಾನಾ ಭಾಗದಲ್ಲಿ ಮಾನ್ಸೂನ್ ರೌದ್ರಾವತಾರ ತಾಳಿದ್ದು, ಭದ್ರಾ ನದಿ ಉಕ್ಕಿ ಹರಿಯುತ್ತಿದೆ. ಇದರಿಂದ ನದಿಪಾತ್ರದ ಗ್ರಾಮಗಳು ಜಲಾವೃತಗೊಂಡು ಸಂಕಷ್ಟಕ್ಕೆ ಸಿಲುಕಿವೆ. ಚಿಕ್ಕಮಗಳೂರು ಜಿಲ್ಲೆ ನ್ಆರ್ ಪುರ ತಾಲೂಕಿನ ಮಹಲ್ ಗೋಡು ಗ್ರಾಮದ ಸೇತುವೆ ಭದ್ರಾನದಿಯ ಪ್ರವಾಹದಿಂದ ಮುಳುಗಡೆಯಾಗಿದ್ದು, ಮಾಗುಂಡಿ ಗ್ರಾಮಕ್ಕೆ ಸಂಪರ್ಕ ಇಲ್ಲದಂತ್ತಾಗಿದೆ. ಇದರಿಂದ ಗ್ರಾಮಸ್ಥರು ಮೂಲ ಸೌಕರ್ಯಗಳಿಲ್ಲದೆ ನರಳುತ್ತಿದ್ದಾರೆ. ಇದನ್ನು ಕಂಡ ರಚನ್ ಎಂಬ ಯುವಕ ನದಿಯ ಪ್ರವಾಹವನ್ನು ಲೆಕ್ಕಿಸದೆ ಕಳಸದಿಂದ ಹಾಲನ್ನು ತಂದು, ತೆಪ್ಪದಲ್ಲಿ ನದಿಯನ್ನು ದಾಟಿ ಮಾಗುಂಡಿ ಜನತೆಗೆ ತಲುಪಿಸಿದ್ದಾನೆ. […]

ಹಾಲು ನೀಡಲು ಉಕ್ಕಿ ಹರಿಯುವ ನದಿಯನ್ನೇ ದಾಟಿದ ಯುವಕ, ಎಲ್ಲಿ?

Updated on: Aug 08, 2020 | 1:07 PM

ಚಿಕ್ಕಮಗಳೂರು: ಜಿಲ್ಲೆಯ ನಾನಾ ಭಾಗದಲ್ಲಿ ಮಾನ್ಸೂನ್ ರೌದ್ರಾವತಾರ ತಾಳಿದ್ದು, ಭದ್ರಾ ನದಿ ಉಕ್ಕಿ ಹರಿಯುತ್ತಿದೆ. ಇದರಿಂದ ನದಿಪಾತ್ರದ ಗ್ರಾಮಗಳು ಜಲಾವೃತಗೊಂಡು ಸಂಕಷ್ಟಕ್ಕೆ ಸಿಲುಕಿವೆ.

ಚಿಕ್ಕಮಗಳೂರು ಜಿಲ್ಲೆ ನ್ಆರ್ ಪುರ ತಾಲೂಕಿನ ಮಹಲ್ ಗೋಡು ಗ್ರಾಮದ ಸೇತುವೆ ಭದ್ರಾನದಿಯ ಪ್ರವಾಹದಿಂದ ಮುಳುಗಡೆಯಾಗಿದ್ದು, ಮಾಗುಂಡಿ ಗ್ರಾಮಕ್ಕೆ ಸಂಪರ್ಕ ಇಲ್ಲದಂತ್ತಾಗಿದೆ. ಇದರಿಂದ ಗ್ರಾಮಸ್ಥರು ಮೂಲ ಸೌಕರ್ಯಗಳಿಲ್ಲದೆ ನರಳುತ್ತಿದ್ದಾರೆ.

ಇದನ್ನು ಕಂಡ ರಚನ್ ಎಂಬ ಯುವಕ ನದಿಯ ಪ್ರವಾಹವನ್ನು ಲೆಕ್ಕಿಸದೆ ಕಳಸದಿಂದ ಹಾಲನ್ನು ತಂದು, ತೆಪ್ಪದಲ್ಲಿ ನದಿಯನ್ನು ದಾಟಿ ಮಾಗುಂಡಿ ಜನತೆಗೆ ತಲುಪಿಸಿದ್ದಾನೆ.

ಯುವಕನ ಈ ಸಹಾಯಕ್ಕೆ ಗ್ರಾಮಸ್ಥರು ಧನ್ಯವಾದ ತಿಳಿಸಿದ್ದಾರೆ. ಸದ್ಯ ಮಳೆಯ ತೀವ್ರತೆಯಿಂದ ಮಾಗುಂಡಿ ಹಾಗೂ ಕಳಸ ನಡುವಿನ ಸಂಪರ್ಕ ಸಂಪೂರ್ಣ ಬಂದಾಗಿದೆ.