AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬದುಕು ಮೂರಾ‘ಬಟ್ಟೆ’.. ಸಿಗ್ನಲ್ ಬದುಕಿನಲ್ಲಿ ಬಿರುಗಾಳಿ ಬೀಸಿದ ಕೊರೊನಾ

ಬೆಂಗಳೂರು: ಕೊರೊನಾ ಮಹಾಮಾರಿ ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ರಸ್ತೆ ಬದಿ ವ್ಯಾಪಾರಿಗಳ ಬದುಕಿಗೂ ಕೊಳ್ಳಿ ಇಡುತ್ತಿದೆ. ರಾಷ್ಟ್ರೀಯ ಹೆದ್ದಾರಿ ಟೋಲ್​ಗಳಲ್ಲಿ ಹಾಗೂ ನಗರದ ರಸ್ತೆಗಳ ಸಿಗ್ನಲ್​ಗಳಲ್ಲಿ ಚಿಕ್ಕ ಚಿಕ್ಕ ವಸ್ತುಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಎಷ್ಟೋ ಜನ ಈಗ ತಾವು ಮಾರಾಟ ಮಾಡುವ ವಸ್ತುಗಳನ್ನು ಕೊಂಡು ಕೊಳ್ಳುವವರಿಲ್ಲದೆ ಬೀದಿಗೆ ಬಿದ್ದಿದ್ದಾರೆ. ಕೊರೊನಾ ಹಬ್ಬುವ ಭಯದಿಂದ ಯಾರೊಬ್ಬರೂ ಇವರ ಬಳಿ ಖರೀದಿಗೆ ಮುಂದಾಗುತ್ತಿಲ್ಲ. ಜೊತೆಗೆ ಸಿಗ್ನಲ್​ಗಳಲ್ಲಿ ವಾಹನ ಸವಾರರಿಂದ ಸಹಾಯ ಬೇಡಿ ಜೀವನ ಸಾಗಿಸುತ್ತಿದ್ದ ಮಂಗಳಮುಖಿಯರು ಸಹ […]

ಬದುಕು ಮೂರಾ‘ಬಟ್ಟೆ’.. ಸಿಗ್ನಲ್ ಬದುಕಿನಲ್ಲಿ ಬಿರುಗಾಳಿ ಬೀಸಿದ ಕೊರೊನಾ
ಸಾಧು ಶ್ರೀನಾಥ್​
|

Updated on:Aug 08, 2020 | 12:14 PM

Share

ಬೆಂಗಳೂರು: ಕೊರೊನಾ ಮಹಾಮಾರಿ ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ರಸ್ತೆ ಬದಿ ವ್ಯಾಪಾರಿಗಳ ಬದುಕಿಗೂ ಕೊಳ್ಳಿ ಇಡುತ್ತಿದೆ.

ರಾಷ್ಟ್ರೀಯ ಹೆದ್ದಾರಿ ಟೋಲ್​ಗಳಲ್ಲಿ ಹಾಗೂ ನಗರದ ರಸ್ತೆಗಳ ಸಿಗ್ನಲ್​ಗಳಲ್ಲಿ ಚಿಕ್ಕ ಚಿಕ್ಕ ವಸ್ತುಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಎಷ್ಟೋ ಜನ ಈಗ ತಾವು ಮಾರಾಟ ಮಾಡುವ ವಸ್ತುಗಳನ್ನು ಕೊಂಡು ಕೊಳ್ಳುವವರಿಲ್ಲದೆ ಬೀದಿಗೆ ಬಿದ್ದಿದ್ದಾರೆ. ಕೊರೊನಾ ಹಬ್ಬುವ ಭಯದಿಂದ ಯಾರೊಬ್ಬರೂ ಇವರ ಬಳಿ ಖರೀದಿಗೆ ಮುಂದಾಗುತ್ತಿಲ್ಲ.

ಜೊತೆಗೆ ಸಿಗ್ನಲ್​ಗಳಲ್ಲಿ ವಾಹನ ಸವಾರರಿಂದ ಸಹಾಯ ಬೇಡಿ ಜೀವನ ಸಾಗಿಸುತ್ತಿದ್ದ ಮಂಗಳಮುಖಿಯರು ಸಹ ಇದರಿಂದ ಹೊರತ್ತಾಗಿಲ್ಲ. ಸೋಂಕಿನ ಭಯದಿಂದ ವಾಹನ ಸವಾರರು ಇವರಿಗೆ ಹಣ ನೀಡಲು, ಕಾರ್ ಗ್ಲಾಸ್ ಇಳಿಸಲು ಹಿಂದೇಟು ಹಾಕುತ್ತಿದ್ದಾರೆ.

Published On - 12:13 pm, Sat, 8 August 20