ಬೆಂಗಳೂರಿನ ಆಸ್ಪತ್ರೆಗಳಲ್ಲಿ ಹೆಣ ಕಂಡ್ರೆ ಹಣಕ್ಕಾಗಿ ಬಾಯ್ಬಿಡ್ತಿದ್ದಾರೆ ಆಸ್ಪತ್ರೆ ಸಿಬ್ಬಂದಿ!
ಬೆಂಗಳೂರು: ಕನ್ನಡದಲ್ಲಿ ಒಂದು ಗಾದೆ ಇದೆ. ಹಣ ಅಂದ್ರೆ ಹೆಣನೂ ಬಾಯಿಬಿಡುತ್ತೆ ಅಂತಾ. ಆದರೆ, ಬೆಂಗಳೂರಿನ ಆಸ್ಪತ್ರೆಗಳಲ್ಲಿ ಹೆಣ ಕಂಡ್ರೆ ಹಣಕ್ಕಾಗಿ ಬಾಯ್ಬಿಡ್ತಿದ್ದಾರೆ ಆಸ್ಪತ್ರೆ ಸಿಬ್ಬಂದಿ. ಮೃತರ ಸಂಬಂಧಿಕರಿಗೆ ರೋಗಿಗಳ ಹೆಣ ನೀಡಲು ಆಸ್ಪತ್ರೆ ಸಿಬ್ಬಂದಿ ಭರ್ಜರಿ ವಸೂಲಿಗೆ ಮುಂದಾಗಿದ್ದಾರೆ. ಕೊರೊನಾ ನಡುವೆ ಸುಲಿಗೆಗೆ ಮುಂದಾಗಿರುವ ಆಸ್ಪತ್ರೆ ಸಿಬ್ಬಂದಿ ನಗರದ ಕೆಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಹಗಲು ದರೋಡೆಗೆ ಇಳಿದಿದ್ದಾರೆ. ಹಣ ಕೊಟ್ಟರಷ್ಟೇ ವಾರ್ಡ್ ಬಾಯ್ಗಳು ಕೆಲಸ ಮಾಡ್ತಾರಂತೆ. ಜೊತೆಗೆ, ಶವವನ್ನ ಌಂಬುಲೆನ್ಸ್ಗೆ ಶಿಫ್ಟ್ ಮಾಡಲು ಸಹ ಲಂಚಕ್ಕೆ […]

ಬೆಂಗಳೂರು: ಕನ್ನಡದಲ್ಲಿ ಒಂದು ಗಾದೆ ಇದೆ. ಹಣ ಅಂದ್ರೆ ಹೆಣನೂ ಬಾಯಿಬಿಡುತ್ತೆ ಅಂತಾ. ಆದರೆ, ಬೆಂಗಳೂರಿನ ಆಸ್ಪತ್ರೆಗಳಲ್ಲಿ ಹೆಣ ಕಂಡ್ರೆ ಹಣಕ್ಕಾಗಿ ಬಾಯ್ಬಿಡ್ತಿದ್ದಾರೆ ಆಸ್ಪತ್ರೆ ಸಿಬ್ಬಂದಿ. ಮೃತರ ಸಂಬಂಧಿಕರಿಗೆ ರೋಗಿಗಳ ಹೆಣ ನೀಡಲು ಆಸ್ಪತ್ರೆ ಸಿಬ್ಬಂದಿ ಭರ್ಜರಿ ವಸೂಲಿಗೆ ಮುಂದಾಗಿದ್ದಾರೆ. ಕೊರೊನಾ ನಡುವೆ ಸುಲಿಗೆಗೆ ಮುಂದಾಗಿರುವ ಆಸ್ಪತ್ರೆ ಸಿಬ್ಬಂದಿ ನಗರದ ಕೆಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಹಗಲು ದರೋಡೆಗೆ ಇಳಿದಿದ್ದಾರೆ.

ಹಣ ಕೊಟ್ಟರಷ್ಟೇ ವಾರ್ಡ್ ಬಾಯ್ಗಳು ಕೆಲಸ ಮಾಡ್ತಾರಂತೆ. ಜೊತೆಗೆ, ಶವವನ್ನ ಌಂಬುಲೆನ್ಸ್ಗೆ ಶಿಫ್ಟ್ ಮಾಡಲು ಸಹ ಲಂಚಕ್ಕೆ ಡಿಮ್ಯಾಂಡ್ ಇಡುತ್ತಾರಂತೆ. ನಾನ್ ಕೊವಿಡ್ ಮೃತದೇಹವನ್ನ ಸಾಗಿಸಲೂ ಸಹ ಮಾಮೂಲಿ ಪಡೆಯುತ್ತಿದ್ದಾರಂತೆ. ಅಂದ ಹಾಗೆ, ಕೆ.ಸಿ.ಜನರಲ್ ಮತ್ತು ವಿಕ್ಟೋರಿಯಾ ಆಸ್ಪತ್ರೆಗಳಲ್ಲಿ ಇಂಥ ಲಂಚಾವತಾರ ಜೋರಾಗಿ ನಡೆಯುತ್ತಿದೆ.
ಒಂದು ವೇಳೆ ದುಡ್ಡು ಕೊಡಲ್ಲಿಲ್ಲಾ ಅಂದ್ರೆ ಅಂಬ್ಯೂಲೆನ್ಸ್ಗೆ ಬಾಡಿ ಶಿಫ್ಟ್ ಆಗಲ್ಲ. ಸ್ಟ್ರೆಕ್ಚರ್ ಮುಟ್ಟಿದ್ರೆ ಇವ್ರಿಗೆ ಕಾಸು ಕೊಡಲೇಬೇಕು. ಅದು ಏನಿಲ್ಲಾ ಅಂದ್ರು ಮಿನಿಮಮ್ ಸಾವಿರ ಅಥವಾ ಎರಡು ಸಾವಿರ ರೂಪಾಯಿ. ಐನೂರು ಸಾವಿರ ಕೊಟ್ರೆ ಕಿಸೆಗೆ ಹಾಕೊಂಡು ಬೈಕೊಂಡು ಹೋಗ್ತಾರಂತೆ ಎಂದು ಮೃತನ ರೋಗಿಗಳ ಸಂಬಂಧಿಕರು ಅಳಲು ತೋಡಿಕೊಂಡಿದ್ದಾರೆ.



